ಎಂದಿನಂತೆ ಆರ್ಸಿಬಿಯಲ್ಲಿ ಇಲ್ಲ ಕನ್ನಡಿಗರು, ಈ ತಂಡದಲ್ಲಿ ಅತೀ ಹೆಚ್ಚು ಕನ್ನಡಿಗರು ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೆಕೆಟ್ ಆರಂಭಕ್ಕೆ ಇನ್ನು ಕೆಲವೇ ಕೆಲವು ತಿಂಗಳು ಬಾಕಿ ಉಳಿದಿವೆ. ಈಗಾಗಲೇ ಐಪಿಎಲ್ ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಅದರ ಹಿನ್ನೆಲೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಅಗತ್ಯ ಇರುವ ಆಟಗಾರರನ್ನ ಕೋಟಿ ಕೋಟಿ ರೂಗಳಿಗೆ ಖರೀದಿ ಮಾಡುತ್ತಿದ್ದಾರೆ. ಬಿಸಿಸಿಐ ಜಾರಿಗೆ ತಂದಂತಹ ಹೊಸ ನಿಯಮದ ಪ್ರಕಾರ ರಿಟೈನ್ ನಿಯಮದಡಿಯಲ್ಲಿ ಆಯಾಯಾ ಫ್ರಾಂಚೈಸಿ ತಂಡಗಳು ತಮ್ಮ ತಂಡಕ್ಕೆ ಮುಖ್ಯವಾದ ಆಟಗಾರರಿಗೆ ಮೊದಲ ಪ್ರಾಶಸ್ತ್ಯ ನೀಡಿ ನಾಲ್ವರು ಆಟಗಾರರನ್ನ ತಮ್ಮಲ್ಲೇ ಉಳಿಸಿಕೊಂಡು, ಅವರ ಹೆಸರನ್ನ ಕೂಡ ತಿಳಿಸಿದ್ದರು. ಉಳಿದಂತಹ ಕ್ರಿಕೆಟ್ ಆಟಗಾರರು ಬಿಡ್ಡಿಂಗ್ ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು.

ಅದರಂತೆ ಇದೀಗ ಆಟಗಾರರನ್ನ ಹರಾಜು ಪ್ರಕ್ರಿಯೆಯಲ್ಲಿ ವಿವಿಧ ಫ್ರಾಂಚೈಸಿಗಳು ಆಟಗಾರರನ್ನ ಕೋಟಿ ಕೋಟಿ ಸಂಭಾವನೆ ನೀಡಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಯು ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ಇನ್ನು ಕಳೆದ ಶನಿವಾರ ಮತ್ತು ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಒಟ್ಟಾರೆಯಾಗಿ 203 ಆಟಗಾರರು ಹರಾಜಾಗಿದ್ದಾರೆ. ಈ 203 ಆಟಗಾರರಲ್ಲಿ 66 ವಿದೇಶಿ ಆಟಗಾರರಾಗಿದ್ದಾರೆ. ಅಚ್ಚರಿಯೆಂದರೆ ನೂರೆಂಟು ಪೈಕಿ ಆಟಗಾರರು ಒಂದು ಕೋಟಿಗೂ ಅಧಿಕ ಮೊತ್ತಕ್ಕೆ ಹರಜಾಗಿದ್ದಾರೆ. ಕರ್ನಾಟಕದ ಕ್ರಿಕೆಟ್ ಆಟಗಾರರು ಈ ಫ್ರಾಂಚೈಸಿ ತಂಡದಲ್ಲಿ ಹೆಚ್ಚು ಮಂದಿ ಇದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ರಿಟೈನ್ ನಿಯಮದಡಿಯಲ್ಲಿ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಈ ಮೂವರು ಆಟಗಾರರನ್ನು ಉಳಿಸಿಕೊಂಡಿತು‌. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮಾಯೆರ್, ಯಜುವೇಂದ್ರ ಚಹಾಲ್, ಪ್ರಸಿದ್ದ್ ಕೃಷ್ಣ, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಓಬೇದ್ ಮೆಕಾಯ್, ಅನುನಯ್ ಸಿಂಗ್, ಡೇವಿಡ್ ಮಿಲ್ಲರ್, ದೇವದತ್ ಪಡಿಕ್ಕಲ್ ಸಾಮರ್ಥ್ಯವುಳ್ಳ ಆಟಗಾರರನ್ನ ತನ್ನ ತಂಡಕ್ಕೆ ಖರೀದಿ ಮಾಡಿಕೊಳ್ಳುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಪ್ರಬಲ ತಂಡವಾಗಿ ಹೊರ ಹೊಮ್ಮಿದೆ. ಇದರಲ್ಲಿ ಕನ್ನಡಿಗರಾದ ಪ್ರಸಿದ್ದ್ ಕೃಷ್ಣ, ದೇವದತ್ ಪಡಿಕ್ಕಲ್, ಕೆ.ಸಿ.ಕಾರಿಯಪ್ಪ, ಕರುಣ್ ನಾಯರ್ ಇದ್ದಾರೆ. ಕರ್ನಾಟಕದ ನಾಲ್ವರು ಆಟಗಾರರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

%d bloggers like this: