ಎಂತಹದ್ದೇ ವ್ಯಾಪಾರ ಇದ್ದರೂ ಅದರಲ್ಲಿ ಸುಲಭವಾಗಿ ಲಾಭ ಪಡೆಯಲು ಈ ಸರಳ ಸೂತ್ರ ಪಾಲಿಸಿ

ಇಂದು ಬೆಂಗಳೂರಿನಂತಹ ಮಹಾನಗರಗಳಲ್ಲಿ ಬದುಕು ದುಬಾರಿಯಾಗಿದೆ, ಸಾಮಾನ್ಯವಾಗಿ ನಮಗೆ ಆದಾಯದ ಮೂಲಗಳು ಹೆಚ್ಚಾಗಿದ್ದಷ್ಟು ನಮ್ಮ ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ತಿಂಗಳ ಸಂಬಳವನ್ನುಹೊರತು ಪಡಿಸಿ ಬೇರೆ ಯಾವ ರೀತಿಯಲ್ಲಿಯೂ ಸಹ ಆದಾಯ ಬರುತ್ತಿರುವುದಿಲ್ಲ. ಆಧುನಿಕ ದುಬಾರಿ ದುನಿಯಾದಲ್ಲಿ ದುಡ್ಠು ಇಲ್ಲದೆ ಹೋದರೆ ಬದುಕು ಮೂರಾಬಟ್ಟೆ ಆಗುವುದು ಖಚಿತ. ಹೀಗಿದ್ದಾಗ ಕೆಲವರು ಆದಾಯ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಸಣ್ಢ ಪುಟ್ಟ ವ್ಯಾಪಾರ ವ್ಯವಹಾರ ಆರಂಭಿಸಿಲು ಆಲೋಚನೆ ಮಾಡುತ್ತಾರೆ ಆದರೆ ಆರಂಭದ ಮೊದಲು ಸ್ಥಳೀಯ ಸರ್ಕಾರಿ ಸಂಸ್ಥೆಗಳಿಂದ ಆನುಮತಿ ಪಡೆಯಬೇಕಾಗಿರುತ್ತದೆ ಅಂತಹ ಮಾಹಿತಿ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.

ಈ ಹತ್ತು ಹಲವು ನಿಯಮಗಳನ್ನು ಆರಂಭಿಕ ಹಂತಗಳನ್ನು ನೀವು ವ್ಯವಹಾರ ಮಾಡಲು ಕಡ್ಡಾಯವಾಗಿ ಕೆಲವೊಂದು ಕಾನೂನಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಹಾಗಾದರೆ ಆ ನಿಯಮಗಳು ಯಾವುದು ಪಾಲಿಸಬೇಕಾದ ಕ್ರಮಗಳು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ, ಮೊದಲನೇದಾಗಿ ನೀವು ಯಾವ ವಸ್ತುವನ್ನು ಅಥವಾ ಸೇವೆಯನ್ನು ಜನರಿಗೆ ನೀಡಬೇಕು ಎಂದು ನಿರ್ಧರಿಸಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಉದಾಹರಣೆಗೆ ನೀವು ಹೋಟೆಲ್ ಮಾಡುವುದಾದರೆ ಮನೆಯಲ್ಲೇ ಇರುವಂತಹ ಸ್ಥಳಾವಕಾಶವನ್ನು ಕಿಚನ್ ರೀತಿ ರೂಪ ಕೊಟ್ಟು ಅಲ್ಲಿ ಚಪಾತಿ ತಯಾರಿಸಿ ಹೋಟೆಲ್ಗಳಿಗೆ ಸರಬರಾಜು ಮಾಡುವುದಾದರೆ ನಿಮ್ಮ ಉತ್ಪಾದನಾ ವಸ್ತು ಚಪಾತಿ ಅಂದುಕೊಳ್ಳೋಣ ಹೀಗೆ ನಿಮ್ಮ ವಸ್ತುವನ್ನು ಮೊದಲು ಅರಿತುಕೊಳ್ಳಬೇಕು.

ನಂತರದಲ್ಲಿ ಈಗ ನಿಮಗೆ ನಿಮ್ಮ ಉತ್ಪಾದನಾ ವಸ್ತು ಯಾವುದು ಎಂದು ಗೊತ್ತಾಯಿತು ಆದರೆ ಆ ವಸ್ತುವಿಗೆ ಗ್ರಾಹಕರು ಯಾರು ಎಂಬುದನ್ನು ಕಂಡು ಹಿಡಿದುಕೊಳ್ಳಬೇಕು ನಿಮ್ಮ ವಸ್ತುವನ್ನು ಕೊಂಡುಕೊಳ್ಳು ವವರನ್ನು ಸೃಷ್ಠಿಸಿಕೊಳ್ಳವುದು, ಇದಾದ ನಂತರ ನಿಮ್ಮವ್ಯಾಪಾರ ಆರಂಭ ಮಾಡಬೇಕು ಹಾಗಾದರೆ ನಿಮ್ಮ ವ್ಯವಹಾರಕ್ಕೆ ಒಂದು ಹೆಸರು ನೀಡಿ ಆ ವ್ಯವಹಾರದ ಹೆಸರು ಜನರಿಗೆ ಪರಿಚಯವಾಗಿರುವ ಹೆಸರನ್ನು ನಿಮ್ಮ ವ್ಯಾಪಾರ ವ್ಯವಹಾರ ಗಳಿಗೆ ಇಡುವುದರಿಂದ ಆ ಹೆಸರು ಅವರಿಗೆ ಸುಲಭವಾಗಿ ನೆನಪಿನಲ್ಲಿ ಇರುತ್ತದೆ.

ಇದಾದ ಬಳಿಕ ನಿಮ್ಮ ವ್ಯಾಪಾರಕ್ಕೆ ಕಾನೂನಿನ ಗುರುತು ನೀಡುವುದು ಅಥವಾ ಅಸ್ತಿತ್ವ ನೀಡುವುದು ಅಂದರೆ ನೀವು ಮಾಡುತ್ತಿರುವ ವ್ಯವಹಾರ ವೈಯಕ್ತಿಕವಾದದ್ದೇ ಅಥವಾ ಪಾಲುದಾರಿಕೆ, ಖಾಸಗಿ ವ್ಯವಹಾರವೇ ಎಂಬುದನ್ನು ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಾವಣೆ ಮಾಡಿಕೊಳ್ಳಿಸಬೇಕು.

ಮುಂದಾನದಾಗಿ ನಿಮ್ಮ ವ್ಯಾಪಾರ ವ್ಯವಹಾರಕ್ಕೆ ಪ್ರತ್ಯೇಕವಾದ ಬ್ಯಾಂಕ್ ಅಕೌಂಟ್ ಮಾಡಿಸಿ ನಿಮ್ಮ ವೈಯಕ್ತಿಕ ಉಳಿತಾಯ ಖಾತೆ ಮತ್ತು ಉದ್ಯಮ ಖಾತೆಯನ್ನು ಪ್ರತ್ಯೇಕವಾಗಿ ವ್ಯವಹರಿಸಬೇಕು.

ರೆಗ್ಯುಲೇಟರ್ ಕ್ಲಿಯರೆನ್ಸ್ ಗಾಗಿ ಪಾನ್ ಕಾರ್ಡ್ ಟಿಡಿಎಸ್ ಜಿಎಸ್ಟಿ ರಿಜಿಸ್ಟ್ರೇಷನ್, ಕಾರ್ಮಿಕ ಇಲಾಖೆಯಿಂದ ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬೇಕು. ತದ ನಂತರ ನಿಮ್ಮ ವ್ಯಾಪಾರಕ್ಕೆ ವಿಭಿನ್ನವಾದ ಲೋಗೋ ಡಿಸೈನ್ ಮಾಡಿಸಿ ಉದಾಹರಣೆಗೆ ಏರ್ಟೆಲ್, ಟಾಟಾ, ಮಾರುತಿ ಸುಜುಕಿ ಸಂಸ್ಥೆಗಳಿರುವ ಲೋಗೋ ರೀತಿಯಲ್ಲಿ ನಿಮ್ಮ ವ್ಯಾಪಾರ ವ್ಯವಹಾರಕ್ಕೆ ಲೋಗೋ ವಿನ್ಯಾಸ ತಯಾರು ಮಾಡಿಸಿ ಇದರಿಂದ ಗ್ರಾಹಕರು ನಿಮ್ಮ ಉತ್ಪಾದಕ ವಸ್ತುವನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ನಿಮ್ಮ ವ್ಯಾಪಾರ ಹೆಚ್ಚಾಗಲು ಜನ ಸಂಪರ್ಕ ಜಾಸ್ತಿರಾಗಿ ನಿಮಗೆ ಗ್ರಾಹಕರು ದೊರೆಯುವಂತೆ ಮಾಡಿಕೊಳ್ಳಲು ನಿಮಗೆ ಅವಕಾಶವಿದ್ದರೆ ವಿಸಿಟಿಂಗ್ ಕಾರ್ಡ್ ಮಾಡಿಸಿ ಅದರಲ್ಲಿ ನಿಮ್ಮ ವ್ಯಾಪಾರದ ಹೆಸರು ವಿಳಾಸ ನಿಮ್ಮ ಸಂಖ್ಯೆ ಇತ್ಯಾದಿ ವಿವರಗಳು ದೊರೆಯುವಂತೆ ಮಾಡಿಸಿ, ಅಂತಿಮವಾಗಿ ನಿಮ್ಮ ವೈಯಕ್ತಿಕ ಹಣಕಾಸು ಮತ್ತು ವ್ಯಾಪಾರದ ಹಣಕಾಸನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಿ ಇದರಿಂದಾಗಿ ನಿಮ್ಮವ್ಯಾಪಾರದ ಹಣಕಾಸು ವಸ್ತುಸ್ಥಿತಿಯನ್ನು ಅವಲೋಕಿಸಬಹುದು. ಹೀಗೆ ಯಾವುದಾದರು ವ್ಯಾಪಾರ ವ್ಯವಹಾರ ಮಾಡಬಯಸುವವರು ಇವಿಷ್ಟು ಕ್ರಮಗಳನ್ನು ಅನುಸರಿಸಿದರೆ ನಿಮಗೆ ಯಾವುದೇ ರೀತಿಯ ಕಾನೂನಿನ ತೊಡಕುಗಳು ಎದುರಾಗುವುದಿಲ್ಲ.

%d bloggers like this: