ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ನಿನ್ನೆ ಡಿಸೆಂಬರ್ 17ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಬಿಡುಗಡೆಗೆ ಮುನ್ನ ಸಾಕಷ್ಟು ಕ್ರೇಜ಼್ ಹುಟ್ಟು ಹಾಕಿದ್ದ ಪುಷ್ಪ ಚಿತ್ರ ನೋಡಲು ಅಲ್ಲು ಅರ್ಜುನ್ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋಗೆ ಬಹುತೇಕ ಅನ್ಲೈನ್ ಬುಕ್ಕಿಂಗ್ ಆಗಿತ್ತು. ದೇಶದಲ್ಲಿ ಇರುವಂತಹ ಎಲ್ಲಾ ಮಲ್ಟಿ ಪ್ಲೆಕ್ಸ್ ಗಳಲ್ಲಿ ಬಿಡುಗಡೆಯ ಹಿಂದಿನ ದಿನವೇ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದವು. ಲೋಕಲ್ ಸಿಂಗಲ್ ಸ್ಕ್ರೀನ್ ಗಳಲ್ಲಿ ಪುಷ್ಪ ಚಿತ್ರ ನೋಡಲು ಬಹಳಷ್ಟು ಮಂದಿ ನೆಲದ ಮೇಲೆ ಕೂತು ನೋಡಿದ್ದಾರೆ. ಇಷ್ಟೆಲ್ಲಾ ಹವಾ ಕ್ರಿಯೆಟ್ ಮಾಡಿದ್ದ ಪುಷ್ಪ ಸಿನಿಮಾ ಒಂದೇ ದಿನಕ್ಕೆ ತನ್ನ ಎಲ್ಲಾ ನೋಡುಗ ವರ್ಗವನ್ನು ಕಳೆದುಕೊಂಡಿದೆ.

ಪುಷ್ಪ ಸಿನಿಮಾದಲ್ಲಿ ಕೇವಲ ಕಥಾ ನಾಯಕನನ್ನ ಮಾತ್ರ ವೈಭವೀಕರಿಸಿ ಕಥೆಯ ಗಟ್ಟಿತನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿರುವ ಕಾರಣ ಪುಷ್ಪ ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ದಿನ ಬರೋಬ್ಬರಿ ರಾಜ್ಯದಲ್ಲಿ ಎಂಟುನೂರಕ್ಕೂ ಅಧಿಕ ಪ್ರದರ್ಶನ ಕಂಡಿದ್ದ ಪುಷ್ಪ ಸಿನಿಮಾ ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಅಡ್ವಾನ್ಸ್ ಬುಕ್ಕಿಂಗ್ ಗಣನೀಯವಾಗಿ ಕಡಿಮೆ ಆಗಿದೆ. ಈ ಅಂಕಿ ಅಂಶಗಳು ಪುಷ್ಪ ಚಿತ್ರತಂಡಕ್ಕೆ ಆಘಾತವೆಂದರೂ ತಪ್ಪಿಲ್ಲ. ಹೌದು ಎರಡನೇ ದಿನಕ್ಕೆ ಪುಷ್ಪ ಸಿನಿಮಾ ಮುಗ್ಗರಿಸಿದೆ ಎನ್ನಬಹುದು. ಇದಕ್ಕೆ ಪೂರಕವಾಗಿ ನೋಡುವುದಾದರೆ ಎರಡನೇ ದಿನದಲ್ಲಿ ಬೆಂಗಳೂರಿನಲ್ಲಿ ಒಟ್ಟು 451ಪ್ರದರ್ಶನಗಳಿವೆ.

ಈ ಪ್ರದರ್ಶನಗಳಿಗೆ ಮುಂಗಡ ಬುಕ್ಕಿಂಗ್ ಆಗಿರುವುದು ಕೇವಲ ಶೇಕಡ 19% ರಷ್ಟು ಮಾತ್ರ. ಮಹಾರಾಷ್ಟ್ರದಲ್ಲಿ ಅಂದರೆ ಮುಂಬೈ ಸಿಟಿಯಲ್ಲಿ ಪುಷ್ಪ ಸಿನಿಮಾ 334 ಶೋ ಇದೆ. ಇಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆಗಿರುವುದು ಶೇಕಡ 23% ಮಾತ್ರ. ಇನ್ನು ತಮಿಳುನಾಡಿನ ಚೆನ್ನೈನಲ್ಲಿ 329 ಪ್ರದರ್ಶನಗಳಿದ್ದು 28% ರಷ್ಟು ಮುಂಗಡ ಕಾಯ್ದಿರಿಸುವಿಕೆ ಪಡೆದುಕೊಂಡಿದೆ. ಇನ್ನು ಕೇರಳದಲ್ಲಿ ಒಟ್ಟು 350 ಪ್ರದರ್ಷನಗಳಿದ್ದು ಇಲ್ಲಿಯೂ ಕೂಡ ಅಡ್ವಾನ್ಸ್ ಬುಕ್ಕಿಂಗ್ ಆಗಿರುವುದು ತೀರಾ ಕಡಿಮೆ ಅಲ್ಲದಿದ್ದರು ಕೂಡ ಮೊದಲನೇ ದಿನಕ್ಕೆ ಹೋಲಿಸಿಕೊಂಡರೆ ಎರಡನೇ ದಿನದಲ್ಲಿ ಕೇವಲ 34%ರಷ್ಟು ಮಾತ್ರ ಮುಂಗಡ ಕಾಯ್ದಿರಿಸುವಿಕೆ ಅಗಿದೆ. ಒಟ್ಟಾರೆಯಾಗಿ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪ್ರಮುಖವಾಗಿದ್ದ ಪುಷ್ಪ ಭಾಗ1 ಸಿನಿಮಾ ತನ್ನ ನಿರೀಕ್ಷೆಯನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.