2014ರಲ್ಲಿ ಎಲ್ಲರ ಅಚ್ಚು ಮೆಚ್ಚಿನ ಧಾರವಾಹಿಯಾಗಿದ್ದ ಕುಲವಧು ಸೀರಿಯಲ್ ನ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಈ ನಟಿ, ನಂತರ ಡ್ಯಾನ್ಸಿಂಗ್ ಸ್ಟಾರ್ ವೇದಿಕೆಯಲ್ಲಿ ಧೂಳೆಬ್ಬಿಸಿ, ಎಲ್ಲರ ಮನಸು ಕದ್ದು ಸೈ ಎನಿಸಿಕೊಂಡು ನಂತರ ಬೆಳ್ಳಿಪರದೆಗೆ ನಟಿಯಾಗಿ ಎಂಟ್ರಿ ಕೊಟ್ಟು, ಸ್ಯಾಂಡಲ್ವುಡ್ ನ ನಟಿ ಎನಿಸಿಕೊಂಡರು. ಹೌದು ನಟಿ ದಿಶಾ ಮದನ್ ಅವರು ಕುಲವಧು ಸೀರಿಯಲ್ ನಲ್ಲಿ ಮೊದಲಿಗೆ ವಚನಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು, ನಂತರ ಡ್ಯಾನ್ಸಿಂಗ್ ಸ್ಟಾರ್ ಸೀಸನ್1 ನಲ್ಲಿ ಪಾಲ್ಗೊಂಡರು. ಮೊದಲಿನಿಂದಲೂ ಡಾನ್ಸ್ ಬಗ್ಗೆ ಆಸಕ್ತಿ ಉಳ್ಳ ಈ ನಟಿ, ಡ್ಯಾನ್ಸಿಂಗ್ ಸ್ಟಾರ್ ಸೀಸನ್1ರ ಪ್ರಶಸ್ತಿಯನ್ನೂ ಕೂಡ ಬಾಚಿಕೊಂಡರು. ಸದಾ ಸೋಶಿಯಲ್ ಮೀಡಿಯಾ ದಲ್ಲಿ ಆಕ್ಟಿವ್ ಆಗಿರುವ ದಿಶಾ ಮದನ್, ರೀಲ್ಸ್ ಹಾಗೂ ಕಾಮಿಡಿ ಕ್ಲಿಪ್ ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಸದ್ಯಕ್ಕೆ ಹುಂಬಲ್ ಪೊಲಿಟಿಸಿಯನ್ ನೋಗರಾಜ್ ಅನ್ನೋ ವೆಬ್ ಸೀರೀಸ್ ನಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ ನಟಿ ದಿಶಾ ಮದನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಹೌದು 2017 ರಲ್ಲಿ ಶಶಾಂಕ್ ವಾಸುಕಿ ಗೋಪಾಲ್ ಅವರನ್ನು ವಿವಾಹವಾಗಿದ್ದ ಇವರು, ಈಗಾಗಲೇ ಒಂದು ಮಗುವಿನ ತಾಯಿಯಾಗಿರುವ ದಿಶಾ ಮದನ್ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತಸದ ವಿಚಾರವಿದೆ. ಕೆಲವು ದಿನಗಳಿಂದ ನಾನು ಸೋಶಿಯಲ್ ಮೀಡಿಯಾ ಗಳಲ್ಲಿ ಆಕ್ಟಿವ್ ಆಗಿರದ ಕಾರಣ ಇಲ್ಲಿದೆ.



ಮಾರ್ಚ್ 2022ಕ್ಕಾಗಿ ನಾವು ಕಾಯುತ್ತಿದ್ದೇವೆ. ನಾವು ಮೂವರಿಂದ ನಾಲ್ವರಾಗುತ್ತಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ದಿಶಾ ಅವರು ತಮ್ಮ ಜರ್ನಿ ಯನ್ನು ಕುರಿತು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ದಿಶಾ ಅವರು 2016 ರಲ್ಲಿ ಶಶಾಂಕ್ ಅವರನ್ನು ಭೇಟಿಯಾಗಿದ್ದೆ. 2017 ರಲ್ಲಿ ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟೆವು. 2018ರಲ್ಲಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದೆವು. 2019 ರಲ್ಲಿ ಗಂಡು ಮಗು ಜನಿಸಿತು. 2022ರಲ್ಲಿ ನಮ್ಮ ಮೊದಲನೇ ಮಗ ಅಣ್ಣನಾಗಲಿದ್ದಾನೆ. 2022 ರಲ್ಲಿ ನಾವು ಮೂವರಿಂದ ನಾಲ್ವರಾಗುತ್ತಿದ್ದೇವೆ ಎಂದು ವಿಡಿಯೋ ಮೂಲಕ ನಟಿ ದಿಶಾ ಮದನ್ ಮತ್ತು ಶಶಾಂಕ್ ವಾಸುಕಿ ಗೋಪಾಲ್ ತಿಳಿಸಿದ್ದಾರೆ.