ಸೌತ್ ಆಫ್ರಿಕಾ ವಿರುದ್ದ ನಡೆಯುತ್ತಿರುವ ಸರಣಿ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶ್ವ ದಾಖಲೆ ಮಾಡಿದ ಶಾರ್ದುಲ್ ಠಾಕೂರ್, ಸೆಂಚುರಿಯನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ದ ಭಾರತ ತಂಡ ಗೆಲುವು ಪಡೆಯಿತು. ಅದರಂತೆ ಮಂಗಳವಾರ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಆರಂಭಿಕವಾಗಿ ಹಿನ್ನಡೆ ಅನುಭವಿಸಿತು. ಆರಂಭದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೇವಲ ಎಂಟು ರನ್ ಮಯಾಂಕ್ ಅಗರ್ವಾಲ್ ಅವರು 23 ರನ್ ಗಳಿಸಿ ಔಟ್ ಆದರು. ಇದು ಭಾರತ ತಂಡಕ್ಕೆ ಭಾರಿ ಹೊಡೆತ ನೀಡಿತು. ಆದರೆ ಮಂಗಳವಾರ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಲಾರ್ಡ್ ಖ್ಯಾತಿಯ ಆಲ್ ರೌಂಡರ್ ಆಟಗಾರ ಶಾರ್ದುಲ್ ಠಾಕೂರ್ ಅವರಿಗೆ ಅತ್ಯುತ್ತಮವಾದ ಪಂದ್ಯವಾಯಿತು ಎನ್ನಬಹುದು.

ಮಧ್ಯಮ ವೇಗಿ ಶಾರ್ದುಲ್ ಠಾಕೂರ್ ಅವರು 61 ರನ್ ಗಳನ್ನ ನೀಡಿ ಬರೋಬ್ಬರಿ ಏಳು ವಿಕೆಟ್ ಕಬಳಿಸುವ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ. ಹೌದು ದಕ್ಷಿಣಾ ಆಫ್ರಿಕಾ ನೆಲದಲ್ಲೇ ಅತಿಥೇಯ ತಂಡದ ವಿರುದ್ದ ಈ ಸಾಧನೆ ಮಾಡಿದ ವಿಶ್ವದ ಎರಡನೇ ವೇಗದ ಬೌಲರ್ ಎಂಬ ಕೀರ್ತಿಗೆ ಶಾರ್ದುಲ್ ಠಾಕೂರ್ ಪಾತ್ರರಾಗಿದ್ದಾರೆ. ಮಂಗಳವಾರದಂದು ಭಾರಥ ತಂಡ ಇಪ್ಪತ್ತು ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 85 ರನ್ ಗಳನ್ನ ಗಳಿಸಿ 58 ರನ್ ಗಳ ಮುನ್ನಡೆ ಸಾಧಿಸಿಕೊಂಡಿತ್ತು. ಕಳೆದ ವರ್ಷ 2021 ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಟೇನ್ ನಲ್ಲಿ 61.ಕ್ಕೆ ನಾಲ್ಕು ವಿಕೆಟ್ ಪಡೆಯುವ ಮೂಲಕ ಸಿದ್ದು ಅವರು ದಾಖಲೆ ಮಾಡಿದ್ದರು.

ಇನ್ನು ವಾಂಡರರ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಬೌಲಿಂಗ್ ನಲ್ಲಿ ಸಿಂಹಸ್ವಪ್ನವಾಗಿ ಕಾಡಿದ್ದು ಅಂದರೆ ಭಾರತ ತಂಡದ ಆಲ್ ರೌಂಡರ್ ಶಾರ್ದುಲ್ ಠಾಕೂರ್. ಒಂದು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿದ್ದ ಆರಂಭದ ಪಂದ್ಯದಲ್ಲಿ ಎಲ್ಗರ್ ಮತ್ತು ಪೀಟರ್ಸನ್ ಜೊತೆಯಾಟದಲ್ಲಿ ಭಾರತದ ಬೌಲರ್ ಗಳನ್ನ ಕಾಡಿದರು. ಇದಾದ ಬಳಿಕ ವೇಗದ ಬೌಲರ್ ಶಾರ್ದುಲ್ ಠಾಕೂರ್ ಅವರು ಸೌತ್ ಆಫ್ರಿಕಾ ತಂಡದ ರನ್ ರೇಟ್ ಏರಿಕೆ ಆಗುತ್ತಿದ್ದುದ್ದನ್ನು ಕಡಿಮೆ ಮಾಡಿ ಒಬೊಬ್ಬ ಆಟಗಾರರನ್ನೆ ಔಟ್ ಮಾಡುತ್ತಾ ಹೋದರು ಶಾರ್ದುಲ್.

ಈ ಮೂಲಕ 61 ರನ್ ಗಳನ್ನು ನೀಡಿ ಏಳು ವಿಕೆಟ್ ಪಡೆದು ಶಾರ್ದುಲ್ ಠಾಕೂರ್ ಜೀವನ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ದಕ್ಷಿಣಾ ಆಫ್ರಿಕಾ ನೆಲದಲ್ಲಿ ಭಾರತೀಯ ಬೌಲರ್ ಗಳು ಐದಕ್ಕಿಂತ ಹೆಚ್ಚು ವಿಕೆಟ್ ಗಳಿಸಿ ಸಾಧಿಸಿರುವ ಬೌಲರ್ ಗಳನ್ನು ತಿಳಿಯುವುದಾದರೆ ಶಾರ್ದುಲ್ ಠಾಕೂರ್ ಅವರು 61 ರನ್ ಗಳನ್ನು ನೀಡಿ ಏಳು ವಿಕೆಟ್ ಪಡೆದಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಹರ್ಭಜನ್ ಸಿಂಗ್ ಅವರು 120 ರನ್ ಗಳನ್ನು ನೀಡಿ ಏಳು ವಿಕೆಟ್ ಗಳಿಸಿದ್ದಾರೆ. ಅನಿಲ್ ಕುಂಬ್ಳೆ 53 ರನ್ ನೀಡಿ ಆರು ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.