ಎರಡೇ ವಾರಕ್ಕೆ 100 ಕೋಟಿ ಗಳಿಕೆ ಮಾಡಿದ ಚಿತ್ರ, ನಟಿಗೆ ವಿದೇಶದಲ್ಲೂ ಪ್ರಶಂಸೆ

ಬ್ಯಾಕ್ ಟು ಬ್ಯಾಕ್ ಭರ್ಜರಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ಅಲಿಯಾ ಭಟ್ ಸದ್ಯಕ್ಕೆ ಬಾಲಿವುಡ್ ಟಾಪ್ ಹೀರೋಯಿನ್ ಗಳ ಲಿಸ್ಟ್ ನಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ತಾವು ನಟಿಸಿರುವ ಎಲ್ಲಾ ಪಾತ್ರಗಳಿಗೂ ತಮ್ಮ ಹಂಡ್ರೆಡ್ ಪರ್ಸೆಂಟ್ ನೀಡುವ ಈ ನಟಿ ನಿರ್ದೇಶಕರ ಫೇವರೆಟ್. ಎಂತಹುದೇ ಪಾತ್ರವನ್ನು ಕೂಡ ಸರಳವಾಗಿ ನಿಭಾಯಿಸುವ ಜಾಣ್ಮೆ ಆಲಿಯಾ ಭಟ್ ಅವರಿಗಿದೆ. ಸದ್ಯಕ್ಕೆ ಆಲಿಯಾ ಭಟ್ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಆಲಿಯಾ ಭಟ್ ನಟನೆಯ ಬಹು ನಿರೀಕ್ಷಿತ ಚಿತ್ರ ಗಂಗೂಬಾಯಿ ಕಾಠಿಯಾವಾಡಿ ಸಿನೆಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ನೋಡಿದವರೆಲ್ಲಾ ಗಂಗೂಬಾಯಿ ಆಗಿ ನಟಿಸಿರುವ ಆಲಿಯಾ ಅವರ ನಟನೆಗೆ ಮೂಕವಿಸ್ಮಿತರಾಗಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನ ಹಾಗೂ ಆಲಿಯಾ ಭಟ್ ಅವರ ನಟನೆ ಎಂದರೆ ಕೇಳಬೇಕೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ ಭರ್ಜರಿ ಸಕ್ಸಸ್ ಕಾಣಲೇಬೇಕು ಎಂಬುದು ವಿಮರ್ಶಕರ ಅಭಿಪ್ರಾಯವಾಗಿತ್ತು. ಆದರೆ ಈ ಚಿತ್ರ ಆರಂಭದಿಂದಲೇ ವಿವಾದಕ್ಕೆ ಸಿಲುಕಿತ್ತು. ಗಂಗೂಬಾಯಿ ಎಂಬ ಹೆಣ್ಣು ಮಗಳ ನಿಜವಾದ ಕಥೆಯಾಧಾರಿತವಾಗಿರುವ ಈ ಸಿನಿಮಾ, ಬಿಡುಗಡೆಗೂ ಮೊದಲೇ ಕೋರ್ಟ್ ಮೆಟ್ಟಿಲೇರಿತ್ತು. ಹಲವು ದಿನಗಳ ಕಾಲ ಕೋರ್ಟ್ ಕಟಕಟೆಯಲ್ಲಿದ್ದ ಈ ಚಿತ್ರದ ಟೈಟಲ್ ನ್ನು ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು. ಇಷ್ಟೆಲ್ಲಾ ವಿವಾದಗಳನ್ನು ಸೃಷ್ಟಿ ಮಾಡಿದ ಈ ಚಿತ್ರದ ಟೈಟಲ್ ನಿಂದ ಚಿತ್ರ ಬಿಡುಗಡೆಯಾಗುವುದು ಅನುಮಾನವಾಗಿತ್ತು. ಕೊನೆಗೂ ಈ ಸಿನೆಮಾ ತೆರೆಕಂಡು ಉತ್ತಮ ಪ್ರತಿಕ್ರಿಯೆ ಎಲ್ಲರಿಂದ ವ್ಯಕ್ತವಾಗುತ್ತಿದೆ.

ಚಿತ್ರ ನೋಡಿದ ಪ್ರತಿಯೊಬ್ಬರೂ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮತ್ತು ಆಲಿಯಾ ಭಟ್ ಅವರ ನಟನೆಯನ್ನು ಹಾಡಿಹೊಗಳಿದ್ದಾರೆ. ಆಲಿಯಾ ಅವರು ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರ ರಿಯಾಕ್ಷನ್ ನ್ನು ನೇರವಾಗಿ ವೀಕ್ಷಿಸಲು ಮುಂಬೈನ ಗ್ಯಾಲಕ್ಸಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ಇನ್ನೂ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಟ್ರೋಲರ್ ಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಯಾವುದೇ ವಿವಾದವಾಗಲಿ ಅಥವಾ ಯಾವುದೇ ಹೇಳಿಕೆಯಾಗಲಿ ನನ್ನನ್ನು ಹೆಚ್ಚಾಗಿ ಕಾಡುವುದಿಲ್ಲ. ಒಂದು ಕ್ಷಣಕ್ಕಿಂತ ಹೆಚ್ಚು ಯಾವುದು ನನ್ನನ್ನು ಭಾಧಿಸುವುದಿಲ್ಲ. ನಿಸ್ಸಂಶಯವಾಗಿ ಚಿತ್ರದಲ್ಲಿ ಹೊಸತನವಿದೆ ಎಂದು ನಾನು ಭಾವಿಸುತ್ತೇನೆ. ಚಿತ್ರವು ಒಳ್ಳೆಯ ಚಿತ್ರವೋ ಅಥವಾ ಕೆಟ್ಟ ಚಿತ್ರವೋ ಎಂಬುದನ್ನು ಚಿತ್ರ ನೋಡಿದ ನಂತರ ಪ್ರೇಕ್ಷಕರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮೊದಲು ಅಥವಾ ನಂತರ ಏನಾಗುತ್ತದೆ ಎಂಬುದು ನಿಜವಾಗಿಯೂ ಯಾರ ಅದೃಷ್ಟವನ್ನು ಬದಲಾಯಿಸುವುದಿಲ್ಲ ಎಂದು ಆಲಿಯಾ ಹೇಳಿದ್ದಾರೆ. ಇನ್ನು ಈ ಚಿತ್ರ ನೋಡಿದ ಹಲವಾರು ಸೆಲೆಬ್ರಿಟಿಗಳು ಆಲಿಯಾ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಗಂಗೂಬಾಯಿ ಕಾಠಿಯವಾಡಿ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನ ಗಂಗೂಬಾಯಿಯ ಕಲೆಕ್ಷನ್ 10.50 ಕೋಟಿ, ಎರಡನೇ ದಿನ ಸುಮಾರು 13 ಕೋಟಿ ಕಲೆಕ್ಷನ್ ಆಗಿದೆ. ಎರಡು ದಿನಕ್ಕೆ ಒಟ್ಟಾರೆ 23 ಕೋಟಿ ಕಲೆಕ್ಷನ್ ಆಗಿದ್ದು, ಈ ವಾರ ಮುಗಿಯುವುದರೊಳಗೆ 40 ಕೋಟಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಒಂದು ವೇಳೆ ಗಂಗೂಬಾಯಿ ಸಿನಿಮಾ ನೂರು ಕೋಟಿ ಗಳಿಕೆ ದಾಟಿದರೆ ಮಾರ್ಚ್ 25 ರಿಲೀಸ್ ಆಗುತ್ತಿರುವ ತ್ರಿಬಲ್ ಆರ್ ಚಿತ್ರದಲ್ಲಿ ನಟಿ ಆಲಿಯಾ ಭಟ್ ಅವರ ಬೇಡಿಕೆ ಹೆಚ್ಚಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ಇದೀಗ ಈ ಮಾತು ನಿಜವಾದಂತೆ ಕಾಣುತ್ತದೆ. ಚಿತ್ರ ಬಿಡುಗಡೆಯಾದ ಕೇವಲ ಒಂದೇ ವಾರಕ್ಕೆ ಬಾಕ್ಸಾಫೀಸ್ ನಲ್ಲಿ ಕಲೆಕ್ಷನ್ ಭಾರೀ ಏರಿಕೆಯಾಗಿದೆ. ವಿಶ್ವದಾದ್ಯಂತ ಎಲ್ಲರ ಮೆಚ್ಚುಗೆಗಳಿಸಿರುವ ಈ ಸಿನಿಮಾ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ನೂರು ಕೋಟಿ ಬಾಚಿಕೊಂಡಿದೆ. ದಿನದಿಂದ ದಿನಕ್ಕೆ ಗಂಗೂಬಾಯಿ ಕಾಠಿಯಾವಾಡಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾಳೆ. ಕೋವಿಡ್ ಪ್ರೋಟೋಕಾಲ್ ಸರಳಗೊಳಿಸಿದ ನಂತರ ಎಲ್ಲಾ ಸಿನಿಮಾಗಳ ಗಳಿಕೆಯು ಏರಿಕೆಗೊಂಡಿದೆ. ಇದು ಜನರು ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಹಂಡ್ರೆಡ್ ಪರ್ಸೆಂಟ್ ಕಾರಣವಾಯಿತು. ಗಂಗೂಬಾಯಿ ಒಂದು ವಾರದ ನಂತರ ಜಾಗತಿಕ ಬಾಕ್ಸಾಫೀಸ್ ನಲ್ಲಿ 100 ಕೋಟಿ ಮೈಲುಗಲ್ಲು ಸ್ಥಾಪಿಸಿದೆ. ಅತಿಶೀಘ್ರದಲ್ಲೇ ಈ ಸಿನಿಮಾದ ಗಳಿಕೆಯೂ ಡಬಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

%d bloggers like this: