ಸ್ಯಾಂಡಲ್ ವುಡ್ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್2 ಸಿನಿಮಾ ಎರಡೇ ವಾರದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಬಾಚಿದ್ದು ಎಷ್ಟು ಗೊತ್ತಾ! ಹೌದು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಬದಲಾವಣೆ ಕಂಡು ಬರುತ್ತಿದೆ. ಅದು ಸಿನಿಮಾ ಮೇಕಿಂಗ್ ಇರಬಹುದು ಮಾರ್ಕೇಟಿಂಗ್ ಇರಬಹುದು ಯಾವ ರೀತಿಯಾಗಿ ತಮ್ಮ ಚಿತ್ರವನ್ನು ಸಿನಿ ಪ್ರೇಕ್ಷಕರಿಗೆ ತಲುಪಿಸಬೇಕು ಎಂಬೆಲ್ಲಾ ಸ್ಟ್ರಾಟಿಜಿವರೆಗೂ ಎಲ್ಲಾ ನವ ನಿರ್ದೇಶಕರು ಉತ್ತಮವಾಗಿಯೇ ಕರಗತ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಲ್ಲಿ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಲವ್ ಮಾಕ್ಟೇಲ್ ಎಂಬ ಟ್ರ್ಯಾಜಿಟಿ ಲವ್ ಟ್ರ್ಯಾಕ್ ಸಿನಿಮಾ ನಿರ್ದೇಶನ ಮಾಡಿ ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ಯಶಸ್ವಿಯಾದ ಡಾರ್ಲಿಂಗ್ ಕೃಷ್ಣ ಇದರ ಮುಂದುವರೆದ ಸರಣಿಯಾಗಿ ಲವ್ ಮಾಕ್ಟೇಲ್2 ಸಿನಿಮಾ ಮಾಡಿ ಗೆದ್ದಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾದ ಮೊದಲ ಭಾಗದ ಮುಂದುವರಿದ ಭಾಗವಾಗಿ ಚಿತ್ರಕಥೆಯನ್ನ ತುಂಬಾ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ಚಾಕಚಕ್ಯತೆಯನ್ನ ಮೆಚ್ಚಲೇಬೇಕಾಗುತ್ತದೆ. ಲವ್ ಮಾಕ್ಟೇಲ್2 ಸಿನಿಮಾ ಪ್ರೇಕ್ಷಕರಿಗೆ ಎಲ್ಲಿಯೂ ಕೂಡ ಬೋರ್ ಹೊಡೆಸಿದೆ ಸಮಯ ಹೇಗೆ ಕಳೆಯುತ್ತದೆ ಎಂಬುದನ್ನ ಕೂಡ ತಿಳಿಸುವುದಿಲ್ಲ. ಅಷ್ಟರ ಮಟ್ಟಿಗೆ ಲವ್ ಮಾಕ್ಟೇಲ್2 ಸಿನಿಮಾ ಭಾವುಕ ಅಂಶಗಳ ಮೂಲಕ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಫೆಬ್ರವರಿ 11ರಂದು ರಾಜ್ಯಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಲವ್ ಮಾಕ್ಟೇಲ್2 ಸಿನಿಮಾ ಎಲ್ಲೆಡೆ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಅಂತೆಯೇ ನಟಿ ಕಮ್ ನಿರ್ಮಾಪಕಿ ಮಿಲನಾ ನಾಗರಜ್ ಮತ್ತು ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ರಾಜ್ಯದ್ಯಂತ ಪ್ರವಾಸ ಕೈಗೊಂಡು ಒಂದಷ್ಟು ಚಿತ್ರ ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.



ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಈ ಸ್ಟಾರ್ ದಂಪತಿಗಳು ತಮ್ಮ ದಿನ ನಿತ್ಯದ ಅಪ್ ಡೇಟ್ಸ್ ನೀಡುತ್ತಿದ್ದಾರೆ. ಅದರಂತೆ ತಾವು ಭೇಟಿ ನೀಡುತ್ತಿರುವ ಊರು ಮತ್ತು ಚಿತ್ರ ಮಂದಿರದ ಹೆಸರು ಸಮಯದ ಬಗ್ಗೆ ಮಾಹಿತಿ ನೀಡುತ್ತಾ ಮತ್ತಷ್ಟು ಸಿನಿ ಪ್ರೇಕ್ಷಕರನ್ನ ಚಿತ್ರ ಮಂದಿರದತ್ತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಬಿಡುಗಡೆಯಾದ ಎರಡೇ ವಾರದಲ್ಲಿ ಲವ್ ಮಾಕ್ಟೇಲ್ ಸಿನಿಮಾ ಬರೋಬ್ಬರಿ ಹದಿ ಮೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ. ಇನ್ನು ಲವ್ ಮಾಕ್ಟೇಲ್ ಸಿನಿಮಾಗೆ ನಕುಲ್ ಅಭಯಂಕರ್ ರಾಗ ಸಂಯೋಜನೆ ಮಾಡಿದ್ದು, ಶ್ರೀ ಕ್ರೇಜಿ಼ಮೈಂಡ್ ಅವರ ಅದ್ಭುತ ಕ್ಯಾಮೆರ ಕೈಚಳಕ ಸಖತ್ ಮೋಡಿ ಮಾಡಿದೆ. ಇನ್ನು ನಟಿ ಮಿಲನ ನಾಗರಾಜ್, ಇಂಚರಾ, ರಾಚೇಲ್ ಡೇವಿಡ್, ಅಮೃತಾ ಅಯ್ಯಂಗಾರ್,ಅಭಿಲಾಶ್, ಖುಷಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ ನಟನೆಯಲ್ಲಿ ಗಮನ ಸೆಳೆದಿದ್ದಾರೆ.