ಎರಡೂವರೆ ವರ್ಷಗಳ ನಂತರ ತೆರೆಯಮೇಲೆ ಅಬ್ಬರಿಸಲಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ ಅವರು

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಕೋವಿಡ್ ಎರಡನೇ ಅಲೆಯ ಅವಾಂತರದ ನಂತರ ಮೂರನೇ ಅಲೆಯ ಆತಂಕದಿಂದಾಗಿ ಬಿಡುಗಡೆಗೆ ಸಿದ್ದವಾಗಿದ್ದ ಕನ್ನಡದ ಬಹುತೇಕ ಸಿನಿಮಾಗಳು ಡಬ್ಬಾದಲ್ಲೇ ಉಳಿಯುವಂತಾಗಿತ್ತು. ಕೋವಿಡ್ ಮಾರ್ಗಸೂಚಿಯಲ್ಲಿ ಸಂಪೂರ್ಣ ವಿನಾಯಿತಿ ದೊರೆತು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕ ಬಳಿಕ ಸ್ಟಾರ್ ನಟರ ಸಿನಿಮಾಗಳು ಥಿಯೇಟರ್ ನತ್ತ ದಾಪುಗಾಲಿಟ್ಟವು. ದುನಿಯಾ ವಿಜಯ್ ಅವರ ಸಲಗ, ಕಿಚ್ಚ ಸುದೀಪ್ ಅಭಿನಯ ಕೋಟಿಗೊಬ್ಬ 3, ಭಜರಂಗಿ 2 ಸೇರಿದಂತೆ ಬಿಗ್ ಬಜೆಟ್ ನ ಎಲ್ಲಾ ಸಿನಿಮಾಗಳು ರಿಲೀಸ್ ಆಗಿ ಸಿನಿ ಪ್ರೇಕ್ಷಕರನ್ನ ಮತ್ತೆ ಚಿತ್ರ ಮಂದಿರಗಳತ್ತ ಕರೆ ತರುವಲ್ಲಿ ಯಶಸ್ವಿಯಾಗಿದ್ದಾವೆ.

ಇತ್ತೀಚೆಗೆ ಬಿಗ್ ಬಜೆಟ್ ಸಿನಿಮಾಗಳ ನಡುವೆಯೇ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ, ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ, ರಾಜ್.ಬಿ ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಸಿನಿಮಾಗಳು ಬಿಡುಗಡೆಯಾಗಿ ಯಶಸ್ವಿಯಾಗಿ ಸಾಗುತ್ತಿವೆ. ಇದೀಗ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ರೈಡರ್ ಚಿತ್ರ ಕೂಡ ಇದೇ ಡಿಸೆಂಬರ್ 24 ರಂದು ರಿಲೀಸ್ಗೆ ರೆಡಿ ಆಗಲು ಸಿದ್ದವಾಗಿದೆ. ಈ ರೈಡರ್ ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಬ್ಯಾಸ್ಕೆಟ್ ಬಾಲ್ ಆಟಾಗಾರನಾಗಿ ಕಾಣಿಸಿಕೊಂಡಿದ್ದಾರೆ.

ಕ್ರೀಡಾಧಾರಿತ ಆಕ್ಷನ್ ಕಥಾ ಹಂದರ ಹೊಂದಿರುವ ರೈಡರ್ ಸಿನಿಮಾಗೆ ಟಾಲಿವುಡ್ ಖ್ಯಾತ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ನಿರ್ದೇಶನ ಮಾಡಿರುವ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರಿಗೆ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆಯಂತೆ. ಲಹರಿ ಮ್ಯುಸಿಕ್ ಟಿ ಸೀರಿಸ್ ಪ್ರೊಡಕ್ಷನ್ ಮತ್ತು ಶಿವನಂದಿ ಎಂಟರ್ಟೈನ್ ಮೆಂಟ್ಸ್ ಅಡಿಯಲ್ಲಿ ಸುನಿಲ್ ಗೌಡ ಬಂಡವಾಳ ಹೂಡಿದ್ದಾರೆ. ವಿಶೇಷ ಪಾತ್ರದಲ್ಲಿ ಕೆಜಿಎಫ್ ಸಿನಿಮಾ ಖ್ಯಾತಿಯ ನಟ ಗರುಡರಾಮ್ ಕೂಡ ನಟಿಸಿದ್ದು, ನಿಖಿಲ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಕಶ್ಮೀರ ಪರದೇಶಿ ನಟಿಸಿದ್ದಾರೆ.

ಪೋಷಕ ಪಾತ್ರಗಳಲ್ಲಿ ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ, ದತ್ತಣ್ಣ, ಅಚ್ಯೂತ್ ಕುಮಾರ್, ಚಿಕ್ಕಣ್ಣ ಅಭಿನಯಿಸಿದ್ದಾರೆ. ಇನ್ನು ಈ ಸ್ಪೋರ್ಟ್ಸ್ ಕಥಾಹಂದರ ಹೊಂದಿರುವ ರೈಡರ್ ಸಿನಿಮಾಗೆ ಮ್ಯಾಜಿ಼ಕಲ್ ಕಂಪೋಸರ್ ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದು, ಶ್ರೀಶ ಕೂದುವಳ್ಳಿ ಅವರ ಕ್ಯಾಮೆರ ಕೈ ಚಳಕವಿದೆ. ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್ ಕುಮಾರ್ ಅವರ ರೈಡರ್ ಸಿನಿಮಾ ಅವರ ಅಭಿಮಾನಿಗಳಿಗೆ ಭಾರಿ ಕುತೂಹಲ ಮೂಡಿಸಿದೆ.

%d bloggers like this: