ಎಷ್ಟೇ ಗಂಭೀರ ವ್ಯಾಧಿ ಅನಾರೋಗ್ಯ, ದುಷ್ಟ ಶಕ್ತಿಗಳನ್ನು ಹೋಗಿಸಲು ಈ ಗಿಡದ ಹೂವು ಸಾಕು

ಈ ಮನುಕುಲ ನಿಂತಿರುವುದು ವನದೇವಿಯು ಸೃಷ್ಠಿಸಿರುವ ನೆಲೆಯಿಂದಲೇ ಮನುಷ್ಯ ಇಂದು ಜೀವನ ನಡೆಸುತ್ತಿದ್ದಾನೆ. ಸಮಸ್ತ ಜೀವ ತಂತುಗಳು ಪ್ರಾಣಿ ಸಂಕುಲಗಳು ಹಸಿರು ಪ್ರಕೃತಿ ಇಲ್ಲದಿದ್ದರೆ ಗ್ರಹಗಳಿಗೂ ಈ ಪ್ರಕೃತಿಗೂ ವ್ಯತ್ಯಾಸವೇ ಇರುವುದಿಲ್ಲ. ಪ್ರಕೃತಿ ಸೌಂದರ್ಯ ಅರ್ಥಪೂರ್ಣವಾಗಿದೆ. ಪ್ರಕೃತಿ ಯೆಂದರೆ ಹಾಗೆ ಸಸ್ಯಸಂಪತ್ತು ನಮ್ಮ ಜೀವನವು ಅವಲಂಬಿತವಾಗಿದೆ. ಹಿಂದೆ ನಮ್ಮ ಋಷಿ ಮುನಿಗಳು ನೈಸರ್ಗಿಕವಾದ ಹಲವು ವಿಚಾರಗಳನ್ನು ನಿರೂಪಿಸಿದ್ದಾರೆ. ಜೊತೆಗೆ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ನೈಸರ್ಗಿಕ ಗಿಡಮೂಲಿಕೆಯ ಉಪಯೋಗಗಳನ್ನು ನಿರೂಪಿಸಿ ಸಾಧಿಸಿದ್ದಾರೆ.

ನೀವು ಕೆಲವೊಮ್ಮೆ ತಲೆನೋವಿನಿಂದ ಬಳಲುತ್ತಿದ್ದು ಎಲ್ಲಾ ರೀತಿಯ ಔಷಧೋಪಚಾರಗಳನ್ನು ಬಳಸಿದರೂ ಸಹ ಅದರಿಂದ ಮುಕ್ತಿ ಹೊಂದಿರುವುದಿಲ್ಲ. ಇಂತಹ ಕೆಲವು ಸಮಸ್ಯೆಗಳು ಕೆಲವರಿಗೆ ವರ್ಷಾನು ಗಟ್ಟಲೆಯಿಂದ ಈ ಸಮಸ್ಯೆಗಳು ಕಾಡುತ್ತಿದ್ದರೆ, ನೀವು ವಾಸಿಸುವ ವಾತಾವರಣದ ಗಾಳಿಯಲ್ಲಿ ನಕರಾತ್ಮಕ ಶಕ್ತಿಯ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಿ ಸಮಸ್ಯೆಗಳಾಗಿರುತ್ತವೆ. ಹಿಂದೆ ನಮ್ಮ ಋಷಿಮುನಿಗಳು ಸೂಚಿಸಿದಂತೆ ಇಂತಹ ಅನೇಕ ಸಮಸ್ಯೆಗಳಿಗೆ ರಾಮಭಾಣವಾಗಿ ಎಕ್ಕದ ಗಿಡದ ಹೂವನ್ನು ಪರಿಹಾರಕ್ಕಾಗಿ ಬಳಸುತ್ತಿದ್ದರು.

ಕೆಲವು ಗಂಭೀರ ವ್ಯಾಧಿಗಳಿಗೆ ಈ ಎಕ್ಕದ ಗಿಡವು ಈ ಪರಿಹಾರವಾಗಿ ಬಳಸಲಾಗುತ್ತಿತ್ತು. ಈ ವ್ಯಾಧಿಗೂ ಎಕ್ಕದ ಗಿಡಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದರೆ. ಈ ಗಿಡವನ್ನು ನೆಟ್ಟು ನೋಡಿ ಈ ಗಿಡವು ನಿರೀಕ್ಷಿಸುವುದು ಕೇವಲ ಫಲವತ್ತಾದ ಭೂಮಿಯನ್ನು ಮಾತ್ರ. ಈ ಎಕ್ಕದ ಗಿಡವನ್ನು ನೆಟ್ಟರೆ ಸಾಕು ಅದನ್ನು ಎಲ್ಲಿ ನೆಟ್ಟಿರುತ್ತೀರೋ ಅಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ಈ ಎಕ್ಕದ ಗಿಡವನ್ನು ಎಲ್ಲರಿಗೂ ಕಾಣುವಂತೆ ನೆಡಬೇಕು.

ಈ ಎಕ್ಕದ ಗಿಡದ ಹೂಗಳಿಂದ ಗಿಡಮೂಲಿಕೆ ಔಷಧಿಯಾಗಿ ಮಾಡುತ್ತಿದ್ದರು, ಎಕ್ಕದ ಗಿಡವು ಮುಖ್ಯವಾದ ಗಿಡಮೂಲಿಕೆಯಾಗಿದೆ. ಈ ಎಕ್ಕದ ಗಿಡದಲ್ಲಿ ಹಾಲಿನಂತಹ ಅಂಶ ಕಂಡುಬರುತ್ತದೆ ಇದು ನಿಮ್ಮ ದೈಹಿಕ ಸಂಪೂರ್ಣ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇನ್ನು ನಮ್ಮ ಭಾರತೀಯ ಸಂಪ್ರದಾಯ ಶಾಸ್ತ್ರದ ಪ್ರಕಾರ ಈಶ್ವರನಿಗೆ ಎಕ್ಕದ ಗಿಡದ ಹೂವು ಪ್ರಿಯವಾದ ಪುಷ್ಪವಂತೆ ಆದ್ದರಿಂದಲೇ ಪಾರ್ವತಿ ದೇವಿಯು ಎಕ್ಕದ ಗಿಡ ಹೂವಿನಿಂದ ಶಿವನನ್ನು ಒಲಿಸಿಕೊಂಡಿದ್ದಾಳೆ ಎನ್ನುತ್ತಾರೆ.

ಪರಮೇಶ್ವರನಿಗೆ ಎಕ್ಕದ ಗಿಡದ ಹೂವನ್ನು ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳುತ್ತಾರೆ. ಇನ್ನು ಬಿಳಿ ಬಣ್ಣದ ಎಕ್ಕದ ಗಿಡ ಬೇರುಗಳಲ್ಲಿ ಗಣಪತಿಯನ್ನು ಹೋಲುವ ಬೇರುಗಳು ಇರುತ್ತವೆ. ಈ ಬಿಳಿಯ ಬಣ್ಣದ ಎಕ್ಕದ ಹೂವನ್ನು ನೀವು ಮಾಡುವ ವ್ಯಾಪಾರ, ವ್ಯವಹಾರ ಸ್ಥಳದಲ್ಲಿ ಇಟ್ಟುಕೊಂಡರೆ ನಿಮ್ಮ ವ್ಯಾಪರದಲ್ಲಿ ಪ್ರಗತಿ ಕಂಡು ನಿರೀಕ್ಷೆಗೂ ಮೀರಿದ ಲಾಭ ಪಡೆಯುತ್ತೀರಿ.

ಇನ್ನು ಬಿಳಿ ಎಕ್ಕದ ಹಳೆಯ ಬೇರನ್ನು ತೆಗೆದುಕೊಂಡು ಕೊಳವೆಯಾಕಾರದ ತಾವೀಜು಼ನಲ್ಲಿ ಈ ಬೇರನ್ನು ಹಾಕಿಕೊಂಡು ಕಪ್ಪುದಾರದಿಂದ ನಿಮ್ಮ ಕುತ್ತಿಗೆಗೆ ಸರದ ರೂಪದಲ್ಲಿ ಧರಿಸಿಕೊಳ್ಳಬೇಕು, ಇದರಿಂದ ನಿಮಗಿರುವ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಇದರ ಜೊತೆಗೆ ಹರಳು ಬೇರು ಅಥವಾ ಔದಲಾ ಬೇರನ್ನು ತೆಗೆದುಕೊಂಡು ಗಂಗಾಜಲದಲ್ಲಿ ಶುಭ್ರವಾಗಿಸಿ ಪೂಜಾ ಮನೆಯಲ್ಲಿ ಇಟ್ಟು ಓಂ ಗಂ ಗಣಪತಾಯೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು, ಈ ರೀತಿಯಾಗಿ ಗಣಪತಿಯ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನ ಸಮೃದ್ದಿಯಾಗಿ ಪ್ರಗತಿ ಹೊಂದುತ್ತದೆ.

%d bloggers like this: