ಆಧುನಿಕ ಯಾಂತ್ರಿಕ ಬದುಕಿನಲ್ಲಿ ಆರೋಗ್ಯದ ವಿಚಾರವಾಗಿ ಅನೇಕ ಸಮಸ್ಯೆಗಳು ಮನುಷ್ಯನನ್ನು ನಿರಂತರವಾಗಿ ಕಾಡುತ್ತವೆ. ಅದರಲ್ಲಿಯೂ ಸಹ ಸರಿಯಾದ ಊಟದ ವಿಚಾರವಾಗಿ ಈ ಗ್ಯಾಸ್ಟಿಕ್ ಸಮಸ್ಯೆ ಮನುಷ್ಯನನ್ನು ಭಾದಿಸುತ್ತದೆ. ಈ ಹೊಟ್ಟೆಯ ಉಬ್ಬರ (ಗ್ಯಾಸ್ಟಿಕ್ ) ಉಂಟಾಗಲು ಎರಡು ಪ್ರಮುಖ ಕಾರಣಗಳಿವೆ. ಒಂದು ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು, ಮತ್ತೊಂದು ಸದಾ ಹೋಟೆಲ್ ನಲ್ಲಿ ಊಟಮಾಡುವ ಪರಿಪಾಠ ಇದರಿಂದ ನಿಮಗೆ (ಗ್ಯಾಸ್ಟಿಕ್) ಹೊಟ್ಟೆ ಉಬ್ಬರದ ಸಮಸ್ಯೆಗಳು ಉದ್ಬವಿಸುತ್ತವೆ. ಅಂದರೆ ಇಂದಿನ ದಿನಮಾನಗಳಲ್ಲಿ ಊಟ ಮಾಡಲು ಸಹ ಸಮಯದ ಅರಿವಿಲ್ಲದೆ, ದುಡಿಯುವ ಎಷ್ಟು ಜನರು ನಮ್ಮ ನಡುವೆ ಇದ್ದಾರೆ ಆದ್ದರಿಂದ ಈ ಗ್ಯಾಸ್ಟಿಕ್ ಸಮಸ್ಯೆ ಎಂಬುದು ಸಾಮಾನ್ಯವಾಗಿಬಿಟ್ಟಿದೆ. ಹಾಗಾದರೆ ಈ ಗ್ಯಾಸ್ಟಿಕ್ ಸಮಸ್ಯೆಗೆ ಪರಿಹಾರ ಏನು ಎಂಬುವುದಾದರೆ ಮನೆಮದ್ದಿನ ಮುಖಾಂತರ ಈ ಗ್ಯಾಸ್ಟಿಕ್ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ. ಒಂದು ಚಮಚದಷ್ಟು ಅಜ್ವಾನ ಕಾಳುಗಳನ್ನು ಉಗುರುಬೆಚ್ಚಗಿನಷ್ಟು ಬಿಸಿ ಮಾಡಿಕೊಳ್ಳಬೇಕು, ನಂತರ ಮೃದುವಾಗಿ ಅದನ್ನು ಪುಡಿ ಮಾಡಿಕೊಂಡು, ಒಂದು ಚಿಟಿಕಿಯಷ್ಟು ಕಪ್ಪುಉಪ್ಪು ಅಂದರೆ ಬ್ಲಾಕ್ ಸಾಲ್ಟ್ ಈ ಎರಡನ್ನು ಚೆನ್ನಾಗಿ ಪುಡಿಮಾಡಿ ಮಿಶ್ರಣ ಮಾಡಿಕೊಳ್ಳಬೇಕು.

ತದನಂತರ ಈ ಮಿಶ್ರಣ ಮಾಡಿದ ಪುಡಿಯನ್ನು ಒಂದು ಒಂದು ಲೋಟ ಬಿಸಿ ನೀರಿಗೆ ಮಿಶ್ರಣ ಮಾಡಿಕೊಂಡು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಗ್ಯಾಸ್ಟಿಕ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಡುವಂತಹ ಇನ್ನೊಂದು ಮನೆಮದ್ದಿನ ಪರಿಹಾರ ಅಂದರೆ ಒಂದು ಲೋಟ ನೀರಿಗೆ ಅರ್ಧವೋಳಿನ ನಿಂಬೆಹಣ್ಣಿನ ರಸ ಹಾಕಿ ಹಾಕಿ ಅದಕ್ಕೆ ಚಿಟಿಕೆ ಅಡುಗೆ ಸೋಡಾವನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣ ಮಾಡಿದ ಜ್ಯುಸ್ ಅನ್ನು ಊಟವಾದ ನಂತರ ಸೇವಿಸಬೇಕು, ಪ್ರತಿನಿತ್ಯ ಈ ಜ್ಯುಸ್ ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆಗಳು ಬೇಗ ಕಡಿಮೆಯಾಗುತ್ತದೆ ಎಂದು ಆಯುರ್ವೇದ ಪಂಡಿತರು ತಿಳಿಸುತ್ತಾರೆ.