ಎಷ್ಟೇ ದೊಡ್ಡ ಮೂಲವ್ಯಾಧಿ ಇದ್ದರೂ ಇದರಿಂದ ನಿವಾರಣೆ ಆಗುತ್ತದೆ

ಇಂದಿನ ಆಧುನಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ, ಅಷ್ಟರ ಮಟ್ಟಿಗೆ ನಮ್ಮ ಜೀವನ ಶೈಲಿ, ಆಹಾರ ಕ್ರಮ ಎಲ್ಲವೂ ಏರುಪೇರಾಗಿದೆ. ಈ ನಮ್ಮ ಆಧುನಿಕ ಶೈಲಿಯ ಆಹಾರ ಕ್ರಮ ಮತ್ತು ಒತ್ತಡದ ಬದುಕಿನಲ್ಲಿ ನಮಗೆ ಹಲವು ಸಮಸ್ಯೆಗಳು ಕಾಡುತ್ತವೆ. ಅದು ಮಾನಸಿಕ ಅಥವಾ ದೈಹಿಕ ಸಮಸ್ಯೆ ಗಳಾಗಿರಬಹುದು. ಕೆಲವೊಂದು ಸಮಸ್ಯೆಗಳನ್ನು ಮುಕ್ತವಾಗಿ ಇತರೊಂದಿಗೆ ಹಂಚಿಕೊಳ್ಳಬಹುದು ಆದರೆ ಕೆಲವೊಂದು ಸಮಸ್ಯೆಗಳು ಹೇಳಿಕೊಳ್ಳುವುದಕ್ಕೆ ಆಗದೆ ಮನಸಿನಲ್ಲಿಯೇ ಕೊರಗುವಂತಹ ಪರಿಸ್ದಿತಿ ಎದುರಾಗುತ್ತದೆ. ಅಂತಹ ಕಾಯಿಲೆಗಳಲ್ಲಿ ಮೂಲವ್ಯಾಧಿ ಅಂದರೆ ಪೈಲ್ಸ್ ಸಮಸ್ಯೆ ಎಷ್ಟೋ ಜನರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಡುತ್ತವೆ. ನೋವನ್ನು ಅನುಭವಿಸಲೂ ಆಗುವುದಿಲ್ಲ ಹೇಳಿಕೊಳ್ಳಲು ಆಗುವುದಿಲ್ಲದಂತಹ ವೇದನೆಯಾಗಿ ಈ ಮೂಲವ್ಯಾಧಿ ಸಮಸ್ಯೆ ಪರಿಣಮಿಸಿ ಬಿಡುತ್ತದೆ.

ಹೆಚ್ಚು ಉಷ್ಣಾಂಶವಿರುವ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಬೇಗ ಈ ಪೈಲ್ಸ್ ಸಮಸ್ಯೆ ಉಂಟಾಗುತ್ತದೆ, ಅದರಲ್ಲಿಯೂ ಈ ಡ್ರೈವರ್ ಗಳಿಗೆ ಪೈಲ್ಸ್ ಸಮಸ್ಯೆ ಹೆಚ್ಚಾಗಿರುತ್ತದೆ ಸದಾ ಬಿಸಿಯ ವಾತವರಣದಲ್ಲಿ ಕೆಲಸ ಮಾಡುವ ಜನರಾಗಿರುವುದಿರಂದ ಇವರಿಗೆ ಮತ್ತು ಹೆಚ್ಛು ಹೊತ್ತು ಬೈಕ್ ಓಡಿಸುವ ಫೀಲ್ಡ್ ಎಕ್ಸಿಕ್ಯುಟೀವ್ ಕೆಲಸ ಮಾಡುವ ವ್ಯಕ್ತಿಗಳಿಗೂ ಸಹ ಈ ಪೈಲ್ಸ್ ತೊಂದರೆ ನೀಡುತ್ತದೆ. ಇದು ಶೀಘ್ರವಾಗಿ ಗುಣವಾಗುವುದಿಲ್ಲ ಎಷ್ಟೇ ವೈಧ್ಯಕೀಯ ಚಿಕಿತ್ಸೆ ಪಡೆದರು ಸಹ ಇದರ ನೋವಿನಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿರುವುದಿಲ್ಲ.

ಈ ಪೈಲ್ಸ್ ತೊಂದರೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಔಷಧಿ ಪಡೆದರು ಸಹ ಕೆಲವರಿಗೆ ಇಲ್ಲಾ ಬಹುತೇಕರಿಗೆ ಯಾವುದೇ ರೀತಿಯಾಗಿ ಪರಿಹಾರ ಸಿಗುವುದಿಲ್ಲ. ಇಂತಹ ಸಮಸ್ಯೆಗಳಿಗೆ ಕೆಲವು ಸಲ ಮನೆಯಲ್ಲಿರುವ ಪಧಾರ್ಥಗಳಿಂದಲೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮನೆಮದ್ದು ಕೆಲವೊಮ್ಮೆ ಎಂತಹ ಸಮಸ್ಯೆಗಳನ್ನು ನಿವಾರಣೆ ಮಾಡಬಹುದಾಗಿದೆ. ಇದರಿಂದ ಯಾವುದೇ ರೀತಿರ ಅಡ್ಡ ಪರಿಣಾಮ ಬೀರುವುದಿಲ್ಲ. ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ಬಟ್ಟಲಿನಲ್ಲಿ ಹೆಸರುಕಾಳನ್ನು ರಾತ್ರಿಯಿಡಿ ನೆನೆಸಿಡಿ. ತದನಂತರ ಮಾರನೇಯ ದಿನ ಹೆಸರುಕಾಳು ನೆನೆದು ಸಿಪ್ಪೆ ಬಿಟ್ಟುಕೊಂಡಿರುತ್ತದೆ.

ಆ ಸಿಪ್ಪೆಯನ್ನು ಬಿಡಿಸಿ ಆ ಹೆಸರುಕಾಳನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಚಿವುಟಿ ಒಂದೆಡೆ ಇಟ್ಟು ಅದಕ್ಕೆ 21ಕರಿಬೇವಿನ ಎಲೆಗಳನ್ನು ನೀರನ್ನು ಬಳಸದೆ ಚೆನ್ನಾಗಿ ರುಬ್ಬಿಕೊಂಡು ಪುಡಿಯಂತೆ ಮಾಡಿಕೊಂಡು ನಂತರ ಈ ಪುಡಿಯನ್ನು ತುಪ್ಪದ ಜೊತೆಯಲ್ಲಿ ಉರಿದು ಒಂದು ಪಾತ್ರೆಯಲ್ಲಿ ಇಡಿ. ತದ ನಂತರದಲ್ಲಿ ಇದನ್ನು ಕಿವುಚಿದ ಹೆಸರುಕಾಳಿನ ಜೊತೆ ಮಿಶ್ರಣ ಮಾಡಿ, ಈ ಮಿಶ್ರಣವನ್ನು 21 ಉಂಡೆಗಳನ್ನಾಗಿ ಮಾಡಿ ತುಪ್ಪದಲ್ಲಿ ಕರಿದ ನಂತರ ಪ್ರತಿದಿನ ಇದನ್ನು ಬೆಳಿಗ್ಗೆಯ ಸಮಯ ಅಥವಾ ರಾತ್ರಿಯ ಊಟವಾದ ಬಳಿಕ ಸೇವಿಸಾದರೆ ನಿಮ್ಮ ಮೂಲವ್ಯಾಧಿ ಸಮಸ್ಯೆ ನಿವಾರಣೆ ಆಗುತ್ತದೆ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ.

%d bloggers like this: