ಸಂಪಾದನೆಗಿಂತ ಉಳಿತಾಯವೇ ಸಂಪಾದನೆ ಎಂಬ ಹಿರಿಯರ ವಾಣಿಯಿದೆ. ಅಂದರೆ ನೀವು ಎಷ್ಟು ದುಡಿಯುತ್ತಿದ್ದೀರಿ ಅನ್ನೋದು ಮುಖ್ಯವಲ್ಲ ಎಷ್ಟು ಹಣವನ್ನು ಕೂಡಿಕೆ ಮಾಡುತ್ತಿದ್ದೀರಿ, ಎಷ್ಟು ಖರ್ಚನ್ನು ಮಿತಿ ಗೊಳಿಸುತ್ತಿದ್ದೀರಿ ಎಂಬುದು ಪ್ರಾಮುಖ್ಯ ಪಡೆಯುತ್ತದೆ. ಹೌದು ನಾವು ಇಂದು ಕೈ ತುಂಬಾ ಸಂಪಾದನೆ ಮಾಡಿದರು ತಿಂಗಳ ಕೊನೆಗೆ ಸಾವಿರ ರುಪಾಯಿ ಉಳಿಸೋಕೂ ಕಷ್ಟ ಪಡುತ್ತೇವೆ. ಅದು ಇನ್ನೊಬ್ಬರ ಬಳಿ ಸಾಲ ಮಾಡುವಷ್ಟರ ಮಟ್ಟಿಗೆ ಖರ್ಚು ಅನಾವಶ್ಯಕ ಒಡಂಬಡಿಕೆ, ಕಂಡದ್ದೆಲ್ಲಾ ಬೇಕೆಂಬ ಆಸೆಗಳು ಇಂತಹ ಆನೇಕ ದುಂದು ವೆಚ್ಚಗಳಿಂದ ನಿಮಗೆ ಅರಿವಿಲ್ಲದೆ ಎಷ್ಟೋ ಹಣ ಪೋಲಾಗುತ್ತಿರುತ್ತದೆ. ಮನುಷ್ಯ ಆಸೆಗೆ ಬಲಿಯಾಗಿ ಹಣ ಕಳೆಯಬಾರದು. ಅವಶ್ಯಕತೆಗೆ ತಕ್ಕಂತೆ ಹಣವನ್ನು ಖರ್ಚುಮಾಡಬೇಕು.ಆದರೆ ಇಂದು ಯಾಂತ್ರಿಕ ಬದುಕು ದುಡಿದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೂ ಸಮಯವಿರುವುದಿಲ್ಲ.

ಈ ಸಣ್ಣ ಪುಟ್ಟ ವ್ಯಾಪಾರಿಗಳು ಹೆಚ್ಚಾಗಿ ದಿನನಿತ್ಯದ ಬಜೆಟ್ ನಲ್ಲಿ ಜೀವನ ನಡೆಸುವುದುಂಟು ಆದರೆ ತಿಂಗಳ ಸಂಬಳದ ಕೆಲಸಕ್ಕೆ ಹೋಗುವವರು ಪ್ರತಿಯೊಂದು ಹಣಕಾಸಿನ ಖರ್ಚಿಗೂ ಅದೇ ಸಂಬಳವನ್ನು ಅವಲಂಬಿತರಾಗಿರುತ್ತಾನೆ. ಒಂದೇ ಮೂಲದ ಆದಾಯ ಯಾವತ್ತಿಗೂ ಅಪಾಯ ಆದ್ದರಿಂದ ನಿಮ್ಮ ಆದಾಯ ಸಂಪನ್ಮೂಲಗಳನ್ನು ದ್ವಿಗುಣಗೊಳಿಸಿಕೊಂಡರೆ, ನಿಮಗೆ ಆರ್ಥಿಕ ನಿರ್ವಹಣೆಯ ಜೊತೆಗೆ ಹಣದ ಸಧ್ಬಳಕೆ ಹೇಗೆ ಮಾಡಬೇಕು ಎಂಬ ಜ್ಞಾನ ನಿಮ್ಮ ಅನುಭವದಿಂದ ಕಲಿಯುತ್ತೀರಿ. ಆದರೂ ನೀವು ಸಂಪಾದಿಸಿದ ಹಣ ಯಾವುದಾದರು ಸಮಸ್ಯೆ ಉದ್ಭವಿಸಿ ಉಳಿಸಿದ ಹಣವೆಲ್ಲಾ ಖರ್ಚಾಗುತ್ತಿದ್ದರೆ. ಅದಕ್ಕೆ ಒಂದು ಸರಳ ಪರಿಹಾರವಿದೆ. ಹೌದು ನಿಮ್ಮ ಮಕ್ಕಳಿಂದ ಪ್ರತಿದಿನ ಸಂಜೆ ಸಂಧ್ಯಾಕಾಲದಲ್ಲಿ ಗಣಪತಿ ಪೂಜೆಯನ್ನು ಮಾಡಬೇಕು.

ಹಾಗದರೆ ಈ ಪೂಜೆ ಪ್ರಕ್ರಿಯೆ ಹೇಗಿರಬೇಕು ಎಂದರೆ 108 ಗರಿಕೆ ಕಡ್ಡಿಯಿಂದ ಗಣನಾಥನ ಅಷ್ಟೋತ್ತರಗಳನ್ನು ಪಠಿಸುತ್ತಾ ವಿನಾಯಕನಿಗೆ ಹಾಲಿನ ಅಭಿಷೇಕ ಅಥವಾ ತುಪ್ಪದ ಅಭಿಷೇಕ ಮಾಡಬೇಕು. ಇದಾದ ಬಳಿಕ ಅಭಿಷೇಕದ ಗರಿಕೆಯನ್ನು ಶುಭ್ರಗೊಳಿಸಿ ನಿಮ್ಮ ದೆವರಮನೆಯಲ್ಲಿ ಇಡಬೇಕು. ವ್ಯಾಪಾರಸ್ಥರು ನಿಮ್ಮ ವ್ಯಾಪಾರ ಸ್ಥಳದಲ್ಲಿ ನಗದು ಇಡುವ ಜಾಗದಲ್ಲಿ ಇದನ್ನು ಇಟ್ಟು ಪ್ರತಿ ಶುಕ್ರವಾರ ಪೂಜಿಸಿದರೆ ನಿಮ್ಮ ಹಣಕಾಸಿನ ಸಮಸ್ಯೆಗಳು ಸುಧಾರಣೆ ಯಾಗಿ ಲಕ್ಷ್ಮಿ ಯು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಯಾಗಿ ನಿಲ್ಲುತ್ತಾಳೆ ಎಂದು ಜ್ಯೋತಿಷ್ಯಶಾಸ್ಥ್ರಜ್ಞರು ತಿಳಿಸುತ್ತಾರೆ.