ಯುರೋಪ್ ರಾಷ್ಟ್ರಗಳಲ್ಲಿ ಕರೋನ ಎರಡನೇ ಅಲೆ, ಮತ್ತೆ ಲಾಕ್ ಡೌನ್

ಜಗತ್ತಿನಾದ್ಯಂತ ಕೊರೋನ ವೈರಸ್ ಮತ್ತೆ ತನ್ನ ಎರಡನೇ ಅಲೆಯನ್ನು ಎಬ್ಬಿಸಲು ಸಜ್ಜಾದಂತೆ ತನ್ನ ಆಕ್ರಮಣವನ್ನು ಆರಂಭಿಸಿದೆ. ಕೊರೋನ ಜನಕ ಚೀನಾ ದೇಶದಲ್ಲಿ ಕೋವಿಡ್ ನ ಪ್ರಮಾಣ ಇಳಿಮುಖವಾಗಿ ಕಾಣುತ್ತಿದೆ ಅದರ ಜೊತೆಗೆ ಅದರ ನಿಯಂತ್ರಣವನ್ನು ಕೂಡ ಅಷ್ಟೇ ಪರಿಣಾಮಕಾರಿಯಾಗಿ ನಿರ್ವಹಿಸಿದೆ. ಆದರೆ ನೆರೆ ರಾಷ್ಟ್ರಗಳಾದ ಯುರೋಪ್ ನಲ್ಲಿ ಕೊರೋನದ ಮತ್ತೊಂದು ಸುತ್ತಿನ ಮರಣ ಮೃದಂಗ ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ಫ್ರಾನ್ಸ್, ಜರ್ಮನ್, ಬ್ರಿಟನ್, ಸ್ಪೇನ್, ಬೆಲ್ಜಿಯಂ, ಪೋಲೆಂಡ್ ದೇಶಗಳಲ್ಲಿ ವೈರ್ ಲೆಸ್ ನೆಟ್ ವರ್ಕ್ ರೀತಿಯಲ್ಲಿ ಗಣನೀಯವಾಗಿ ವೈರಸ್ ಹರಡುತ್ತಿದೆ.

ಇದರಿಂದ ಆತಂಕಕಾರಿ ಬೆಳವಣಿಗೆಗಳು ಈ ದೇಶಗಳಲ್ಲಿ ಕಂಡುಬಂದಿದ್ದು ಕೋವಿಡ್ ನಿಯಂತ್ರಣಕ್ಕಾಗಿ ಮತ್ತೆ ಲಾಕ್ಡೌನ್ ಮೊರೆ ಹೋಗಲು ಯುರೋಪ್ ರಾಷ್ಟ್ರಗಳು ಚಿಂತಿಸುತ್ತಿವೆ. ಇದೀಗ ತಾನೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿರುವ ಈ ದೇಶಗಳು ಜನರ ಜೀವನ ಮತ್ತು ಅವರ ಆರೋಗ್ಯದ ದೃಷ್ಟಿಯಿಂದಾಗಿ ಮತ್ತೆ ಲಾಕ್ಡೌನ್ ಮಾಡುವ ಅನಿವಾರ್ಯತೆ ಎದುರಾಗಿದೆ. ಒಟ್ಟಿನಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಕೊರೋನ ಸೋಂಕು ವಿಪರೀತವಾಗಿ ಜನರನ್ನು ಆಕ್ರಮಿಸಿಕೊಂಡು ತನ್ನ ಇನ್ನೊಂದು ಕ್ರೂರಿ ಮುಖವನ್ನು ತೋರಿಸುತಿದ್ದು ಮತ್ತೆ ಲಾಕ್ಡೌನ್ ಮಾಡಿದರೆ ಅಲ್ಲಿನ ಜನರ ಪರಿಸ್ಥಿತಿ ಚಿಂತಾಜನಕವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

%d bloggers like this: