ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರ ಚಿತ್ರೀಕರಣ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದೆ. ಈಗ ಈ ಚಿತ್ರ ಮತ್ತೊಂದು ವಿಷಯಕ್ಕೆ ಎಲ್ಲೆಡೆ ಸುದ್ದಿ ಆಗುತ್ತಲಿದೆ. ಹೌದು ಕಿಚ್ಚ ಸುದೀಪ್ ಅವರು ಈ ಹಿಂದೆ ಎಂದು ಅಭಿನಯಿಸಿರದ ವಿಶೇಷ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಿನಿರಸಿಕರನ್ನು ತುದಗಾಲಿನಲ್ಲಿ ತಂದು ನಿಲ್ಲುವಂತೆ ಮಾಡಿದೆ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುವ ಸುದೀಪ್ ಈ ಚಿತ್ರದ ವಿಶೇಷ ಪಾತ್ರದಲ್ಲೀ ಹೇಗೆ ಕಾಣಿಸುವರು ಎಂಬ ಸಹಜ ಕುತೂಹಲ ಎಲ್ಲರಲ್ಲು ಇದೆ.

ಫ್ಯಾಂಟಮ್ ಎಂಬ ಚಿತ್ರದ ಟೈಟಲ್ ಗಿಂತ ಸುದೀಪ್ ಅವರ ಪಾತ್ರದ ಹೆಸರಾದ ವಿಕ್ರಾಂತ ರೋಣ ಎಂಬ ಹೆಸರು ಹೆಚ್ಚು ಸುದ್ದಿ ಮಾಡುತ್ತಿತ್ತು. ಅಷ್ಟರ ಮಟ್ಟಿಗೆ ಆ ಹೆಸರು ಮತ್ತು ಸುದೀಪ್ ಅವರ ಲುಕ್ ಆಕರ್ಷಣೀಯ ಆಗಿದೆ. ಹಾಗಾಗಿ ಇದೀಗ ಚಿತ್ರತಂಡ ಮಹತ್ವದ ತೀರ್ಮಾನ ಒಂದನ್ನು ತೆಗೆದುಕೊಂಡಿದೆ. ಹೌದು ಅದೇನೆಂದರೆ ಫ್ಯಾಂಟಮ್ ಎಂಬ ಶೀರ್ಷಿಕೆ ಬದಲಾಗಿ ಅದಕ್ಕಿಂತ ಹೆಚ್ಚು ಹೆಸರುವಾಸಿ ಆಗಿರುವ ವಿಕ್ರಾಂತ ರೋಣ ಎಂಬ ಹೆಸರನ್ನೇ ಚಿತ್ರಕ್ಕೆ ಟೈಟಲ್ ಆಗಿ ಇಡಲು ಮುಂದಾಗಿದೆ.

ಹೌದು ಈ ಬಗ್ಗೆ ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಮಾತನಾಡಿದ್ದು ಚಿತ್ರದ ಟೈಟಲ್ ಬದಲಾವಣೆಯ ಬಗ್ಗೆ ಮತ್ತು ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದಾರೆ. ಕಿಚ್ಚ ಸುದೀಪ್ ಅವರು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟರಾಗಿದ್ದಾರೆ ಮತ್ತು ಜನರ ಪ್ರತಿಕ್ರಿಯೆಗಳಿಗೆ ಸ್ಪಂದಿಸುತ್ತಾರೆ ಕೂಡ. ಈ ಪ್ರತಿಕ್ರಿಯೆಗಳನ್ನು ಗಮನಿಸಿಯೇ ವಿಕ್ರಾಂತ ರೋಣ ಎಂಬ ಪಾತ್ರದ ಹೆಸರು ಎಷ್ಟು ಪ್ರಖ್ಯಾತಿ ಪಡೆದಿದೆ ಎಂದು ಚಿತ್ರತಂಡಕ್ಕೆ ಅರಿವಾಗಿದೆ.

ಹಾಗಾಗಿ ಕಿಚ್ಚನ ಅಭಿಮಾನಿಗಳಿಗೆ ಖುಷಿ ನೀಡಿರುವ ಈ ಹೆಸರನ್ನೇ ಚಿತ್ರಕ್ಕೆ ಇಡಲು ಚಿತ್ರತಂಡ ಸಜ್ಜಾಗಿದೆ. ಈ ಮೂಲಕ ಫ್ಯಾಂಟಮ್ ಚಿತ್ರ ವಿಕ್ರಾಂತ ರೋಣ ಆಗಿ ಬದಲಾಗಲಿದೆ. ಇನ್ನು ಒಂದು ವಿಶೇಷ ಏನೆಂದರೆ ಇಡೀ ಜಗತ್ತಿನಲ್ಲಿ ಯಾವೊಂದು ಚಿತ್ರವೂ ಸಹ ತನ್ನ ಟಿಸರ್ ಅನ್ನು ಜಗತ್ತಿನ ಅತಿ ಎತ್ತರದ ಕಟ್ಟಡಬದ ದುಬೈನ ಬುರ್ಜ್ ದಲ್ಲಿ ಬಿಡುಗಡೆ ಮಾಡಿಲ್ಲ ಆದರೆ ವಿಕ್ರಾಂತ ರೋಣ ಚಿತ್ರತಂಡ ಈ ವಿಶೇಷ ಸಾಧನೆ ಮಾಡಿ ಕನ್ನಡಕ್ಕೆ ಹೆಮ್ಮೆ ತರಲು ಸಜ್ಜಾಗಿದೆ.