ಫೆಬ್ರವರಿ ತಿಂಗಳಲ್ಲಿ ಈ ರಾಶಿಯವರಿಗೆ ಗುರುಬಲ ಲಭ್ಯವಿದೆ, ಅನಿರೀಕ್ಷಿತ ಧನಲಾಭ ಆಗುವುದು

2021ರ ಫೆಬ್ರವರಿ ತಿಂಗಳಲ್ಲಿ ಕೆಲವು ರಾಶಿಗಳ ವ್ಯಕ್ತಿಯ ಜೀವನದಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣದೆ, ನಿಂತ ಜಾಗದಲ್ಲೇ ನಿಂತಿರುವಂತೆ ಪ್ರಗತಿ ಆಗುವುದಿಲ್ಲ. ಹೌದು ಕೆಲವರು ಎಷ್ಟೇ ಶ್ರಮ ಪಟ್ಟರು ಆರಕ್ಕೆ ಏರಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬಂತೆ ಜೀವನ ನಡೆಸುತ್ತಾರೆ. ಅಶ್ವಿನಿ ನಕ್ಷತ್ರದ ನಾಲ್ಕು ಚರಣ, ಭರಣಿ ನಕ್ಷತ್ರದ ನಾಲ್ಕು ಪಾದ ಮತ್ತು ಕೃತಿಕಾ ನಕ್ಷತ್ರದ ಒಂದು ಪಾದವನ್ನು ‘ಮೇಷ’ ರಾಶಿ ಒಳಗೊಂಡಿದೆ. ಈ ರಾಶಿಯ ಜನರಿಗೆ ಉತ್ತಮ ಆದಾಯ ಬರುತ್ತಿದ್ದರು ಸಹ ಉಳಿತಾಯ ಮಾತ್ರ ಆಗುತ್ತಿಲ್ಲ. ಎಷ್ಟೇ ದುಡಿದರು ಕೂಡ ಅತ್ಯಧಿಕ ಖರ್ಚಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಬಯಸಿದರು ಸಹ ತಮ್ಮ ಅರಿವಿಗೆ ಬಾರದೆ ಧನ ವ್ಯಯವಾಗುತ್ತದೆ.

ಈ ಹಣಕಾಸಿನ ಸಮಸ್ಯೆಗಳಿಂದ ಮಾನಸಿಕವಾಗಿ ಒತ್ತಡ ಹೆಚ್ಚಾಗಿ ಜೀವನದಲ್ಲಿ ನೆಮ್ಮದಿ ಕೆಡುತ್ತದೆ, ಇನ್ನು ನಿಮ್ಮ ಉಧ್ಯೋಗದಲ್ಲಿ ನಿಮ್ಮ ಕಾರ್ಯ ಕ್ಷಮತೆ, ಬದ್ದತೆಯನ್ನು ಕಂಡು ನಿಮಗೆ ಬಡ್ತಿದೊರೆತು, ಉನ್ನತ ಸ್ಥಾನಕ್ಕೆ ತಲುಪಬಹುದಾಗಿದೆ. ನಿಮ್ಮ ಮಾತಿನಲ್ಲಿ ಆದಷ್ಟು ನಯ ನಾಜೂಕು ಇರಲಿ, ಇಲ್ಲವಾದಲ್ಲಿ ಅನಾವಶ್ಯಕ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ. ಅನಿರೀಕ್ಷಿತ ಧನಲಾಭ, ಜಮೀನು ಖರೀದಿ ಮಾಡುವ ಯೋಗವಿದೆ. ಸಂತಾನಹೀನ ದಂಪತಿಗಳಿಗೆ ಮಕ್ಕಳಾಗುವ ಯೋಗವಿದೆ. ನೀವು ಹಣಕ್ಕಿಂತ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡಿ, ಕೇವಲ ಹಣದ ವಿಚಾರವಾಗಿ ಸಂಬಂಧಗಳನ್ನು ಕಳೆದುಕೊಳ್ಳಬೇಡಿ. ಇನ್ನು ತೆರೆ ಮರೆಯಲ್ಲಿ ಇರುವ ಸಿನಿಮಾ ಕಲಾವಿದರಿಗೆ ಅದೃಷ್ಟ ಒಲಿದು ಬಂದು, ವೃತ್ತಿ ಜೀವನದಲ್ಲಿ ಹೊಸದೊಂದು ತಿರುವು ಕಂಡು ಬರುತ್ತದೆ.

ಫೆಬ್ರವರಿ ಒಂದರಿಂದ ಹದಿನೈದು ತಾರೀಖು ವರೆಗೆ ಶುಭಫಲ ದೊರೆಯುತ್ತದೆ, ಆದರೆ ಫೆಬ್ರವರಿ ತಿಂಗಳ ಮಧ್ಯಭಾಗದಿಂದ ನಿಮಗೆ ಕೊಂಚ ಆಸ್ತಿ ವ್ಯಾಜ್ಯಗಳು ಎದುರಾಗುತ್ತದೆ. ಇದರಿಂದಾಗಿ ಅಪಾರ ಧನನಷ್ಟ ಆಗುತ್ತದೆ. ಸತಿ ಪತಿ ಕಲಹಗಳು ಹೆಚ್ಚಾಗಿ, ವಿಚ್ಛೇದನಕ್ಕೆ ಹೋಗುವ ಮಟ್ಟಿಕ್ಕೆ ದಾಂಪತ್ಯದಲ್ಲಿ ಬಿರುಕು ಏರ್ಪಡುತ್ತದೆ. ಆದ್ದರಿಂದ ನಿಮ್ಮ ಕೋಪವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ, ಇಲ್ಲವಾದಲ್ಲಿ ತೊಂದರೆ ತಾಪತ್ರಯಗಳು ಕಾಡುತ್ತವೆ. ಇನ್ನು ನಿಮ್ಮ ಸಮಸ್ಯೆ, ದೋಷ ಪರಿಹಾರಕ್ಕಾಗಿ ಶನಿದೇವಾಲಯಕ್ಕೆ ಎಳ್ಳೆಣ್ಣೆ ಮತ್ತು ಬತ್ತಿಯನ್ನು ನೀಡಿ. ಪ್ರತಿ ಮಂಗಳವಾರ ದುರ್ಗದೇವಿಯ ಪೂಜೆಯನ್ನು ಮಾಡುವುದರಿಂದ ಫಲಪ್ರಾಪ್ತಿ ಆಗುತ್ತದೆ, ಜೊತೆಗೆ ದತ್ತಾತ್ರೇಯ ಸ್ವಾಮಿಯ ಆರಾಧನೆಯಿಂದ ಶುಭಫಲ ಲಭಿಸುತ್ತದೆ.

%d bloggers like this: