ಫೆಬ್ರುವರಿ ತಿಂಗಳಲ್ಲಿ ಈ ರಾಶಿಯವರಿಗೆ ಶುಭಫಲ, ಕೆಲಸಗಳು ಸುಗಮವಾಗಿ ಸಾಗುತ್ತವೆ

ಜೆಮಿನಿ ನಕ್ಷತ್ರ ಪುಂಜದಿಂದ ಹುಟ್ಟಿಕೊಂಡಿರುವ ಈ ಮಿಥುನ ರಾಶಿಯು ದ್ವಾದಶ ರಾಶಿಚಕ್ರಗಳಲ್ಲಿ ಮೂರನೇಯ ಸ್ಥಾನವೊಂದಿದ್ದು, ಇದು ಸಕರಾತ್ಮಕ ರೂಪಾಂತರಿ ಚಿಹ್ನೆ ಒಳಗೊಂಡಿದೆ. ಕ್ಯಾಸ್ಟರ್ ಮತ್ತು ಪೊಲಕ್ಸ್ ಎಂಬ ಅವಳಿ ಮಕ್ಕಳು ಈ ಮಿಥುನ ರಾಶಿಯನ್ನು ಪ್ರತಿನಿಧಿಸುತ್ತವೆ. ಇನ್ನು ಈ ವಿಶಿಷ್ಟ ಮಿಥುನ ರಾಶಿಯ 2021ರ ಫೆಬ್ರವರಿ ತಿಂಗಳ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯುವುದಾದರೆ ಈ ಮಿಥುನ ರಾಶಿಯ ಜನರಿಗೆ ಈ ಫೆಬ್ರವರಿ ತಿಂಗಳು ಮಿಶ್ರಫಲ ಎಂದು ಹೇಳಬಹುದು. ನಿಮ್ಮ ಬುದ್ದಿವಂತಿಕೆಯಿಂದ ನಿಮ್ಮ ಬದುಕನ್ನು ನೀವು ಸುಂದರವಾಗಿ ಕಟ್ಟಿಕೊಳ್ಳಬಹುದಾಗಿದೆ. ನೀವು ಅನಾವಶ್ಯಕವಾಗಿ ನಿಮ್ಮ ಉದ್ಯೋಗವನ್ನು ಬದಲಾಯಿಸಲು ಹೋಗಬೇಡಿ. ಕೊಂಚ ತಾಳ್ಮೆಯಿದ್ದರೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯುವ ಅವಕಾಶವಿದೆ.

ಅಗತ್ಯಬಿದ್ದಲ್ಲಿ ಮಾತ್ರ ನೂತನ ಉದ್ಯೋಗದ ಬಗ್ಗೆ ಗಮನಹರಿಸಿ. ಇನ್ನು ಮನೆಗೆ ಅತಿಥಿಗಳು ಆಗಮನವಾಗುವುದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಏರ್ಪಡುತ್ತದೆ.ಫೆಬ್ರವರಿ ತಿಂಗಳಲ್ಲಿ ಯಾವುದೇ ಕಿರಿಕಿರಿ ತೊಂದರೆ ಯಿಲ್ಲದೆ, ನಿಮ್ಮ ಕೆಲಸ ಕಾರ್ಯಗಳು ಸುಗುಮವಾಗಿ ನಡೆಯುತ್ತದೆ. ಆದರೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಪಾಲುದಾರಿಕೆಯ ಬಗ್ಗೆ ಎಚ್ಚರವಿರಲಿ, ತಪ್ಪಿದಲ್ಲಿ ಪಾಲುದಾರರ ನಡುವೆ ಮನಸ್ತಾಪ ಹೆಚ್ಚಾಗಲಿವೆ. ಇನ್ನು ಸುಮಾರು ವರ್ಷಗಳಿಂದ ಪಿತ್ರಾರ್ಜಿತ ಆಸ್ತಿಗಾಗಿ ಕೋರ್ಟು ಕಛೇರಿ ಅಲೆಯುತ್ತಿದ್ದವರಿಗೆ ಜಯ ಸಿಗಲಿದೆ. ಇನ್ನು ವಿಧ್ಯಾರ್ಥಿಗಳ ವಿಧ್ಯಾಭ್ಯಾಸದಲ್ಲಿ ಉನ್ನತಿ ಕಾಣಬಹುದಾಗಿದೆ. ಸರ್ಕಾರಿ ನೌಕರರು ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆದು, ತಮ್ಮ ಹುದ್ದೆಯಂದ ಉನ್ನತ ಮಟ್ಟದ ಹುದ್ಧೆಗೆ ಬಡ್ತಿ ಪಡೆಯಬಹುದಾಗಿದೆ.

ಈ ಮಿಥುನ ರಾಶಿಯ ಮಹಿಳೆಯರು ಅನಾವಶ್ಯಕ ಖರ್ಚನ್ನು ಮಾಡಬಾರದು, ಅವಶ್ಯಕತೆಯ ವಸ್ತುಗಳಿಗೆ ಮಾತ್ರ ಗಮನವರಿಸಿ, ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚು ಜಾಗೃತಿವಹಿಸಿ, ಇಲ್ಲವಾದಲ್ಲಿ ಅವುಗಳನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಅಭಿಯಂತರರಿಗೆ ಹೊಸದೊಂದು ಸರ್ಕಾರಿ ಯೋಜನೆ ನಿಮ್ಮ ಸಂಸ್ಥೆಗೆ ಸಿಗಲಿದ್ದು, ಹೆಚ್ಚಿನ ಜವಬ್ದಾರಿ ನಿಮ್ಮದಾಗುತ್ತದೆ. ಕುಟುಂಬದ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಆದರೆ ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗಬಹುದು, ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇನ್ನು ಈ ಮಿಥುನ ರಾಶಿಯವರಿಗೆ5 ಮತ್ತು 6 ಸಂಖ್ಯೆಗಳು ಶುಭ ತರುತ್ತವೆ. ಹಳದಿ ಬಣ್ಣ ಶುಭತರುವ ಬಣ್ಣವಾಗಿದ್ದು,ವಜ್ರ ಶುಭ ರತ್ನವಾಗಿದೆ. ವಿಷ್ಣು ಸ್ತೋತ್ರಗಳನ್ನು ಪಠಿಸುವುದರಿಂದ ನಿಮ್ಮ ಸಕಲ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ.

%d bloggers like this: