ದ್ವಾದಶ ರಾಶಿಗಳ ಫಲಾಫಲಗಳಲ್ಲಿ ವೃಷಭ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ದುಷ್ಟಯೋಗ! ಹೌದು ಹಲವು ವಿಶೇಷ ದಿನಗಳನ್ನು ಹೊಂದಿರುವ ಫೆಬ್ರವರಿ ತಿಂಗಳ ಮಾಸದಲ್ಲಿ ಶುಭ ಅಶುಭ ಸಂಗತಿಗಳು ಈ ವೃಷಭರಾಶಿ ವ್ಯಕ್ತಿಗಳ ಜೀವನದಲ್ಲಿ ಗತಿಸುತ್ತವೆ. ಫೆಬ್ರವರಿ ಒಂದನೇ ತಾರೀಕಿನಂದು ಸಂಕಷ್ಟಹರ ಚತುರ್ಥಿ ಇರುವುದರಿಂದ ಅಂದು ಮಹಿಳೆಯರು ವ್ರತ ಮಾಡುವುದು ಒಳಿತಾಗುತ್ತದೆ. ಅದೇ ದಿನ ಸಂಜೆ 9ಗಂಟೆ 5ನಿಮಿಷಕ್ಕೆ ಉದಯವಾಗುವ ಚಂದ್ರನನ್ನು ದರ್ಶನ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಇನ್ನು ಫೆಬ್ರವರಿ 11ರಂದು ಗರುಡ ಜಯಂತಿ ಇರುವುದರಿಂದ ಸುಬ್ರಹ್ಮಣ್ಯನ ದರ್ಶನ ಮಾಡುವುದು ಒಳ್ಳೆಯದು, ಸರ್ಪ ದೋಷ ಇರುವವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಸುಬ್ರಮಣ್ಯನ ದರ್ಶನ ಮಾಡುವುದರಿಂದ ಶುಭಫಲ ದೊರೆಯುತ್ತದೆ.

ಫೆಬ್ರವರಿ ತಿಂಗಳ 19ನೇ ತಾರೀಕು ರಥ ಸಪ್ತಮಿ ಇರುವುದರಿಂದ ಅಂದಿನ ಯಾವುದಾದರು ರಥೋತ್ಸವ ದರ್ಶನ ಮಾಡುವುದರ ಜೊತೆಗೆ ರಥೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದರಿಂದ ನಿಮಗೆ ಶುಭವಾಗುತ್ತದೆ. ಫೆಬ್ರವರಿ 12ನೇ ತಾರೀಖಿನಂದು ಕುಂಭ ರಾಶಿಗೆ ರವಿ ಅಂದರೆ ಸೂರ್ಯ ಗ್ರಹ ಪ್ರವೇಶವಾಗುತ್ತದೆ, ಜೊತೆಗೆ ಶುಕ್ರ ಗ್ರಹವು ಕೂಡ ಕುಂಭರಾಶಿಗೆ ಆಗಮಿಸುತ್ತಾನೆ. ಸೂರ್ಯ ಮತ್ತು ಶುಕ್ರ ಗ್ರಹ ಮಿತ್ರ ಗ್ರಹ, ಹಾಗಾಗಿ ವೃಷಭ ರಾಶಿಯವರಿಗೆ ಉತ್ತಮವಾದ ಫಲಗಳು ದೊರೆಯುತ್ತದೆ.

ಇನ್ನು ಈ ಕುಜಗ್ರಹ ಮತ್ತು ರಾಹುಗ್ರಹವು ಶತ್ರುಗ್ರಹ ಒಂದೇ ಮನೆರಲ್ಲಿ ಸ್ದಾನ ಪಡೆಯುವುದರಿಂದ ವೃಷಭ ರಾಶಿಯವರಿಗೆ ಇದು ಭಯಾನಕ ಸಂಗತಿ ಎಂದು ಹೇಳಬಹುದು. ಕಾರಣ ಇವೆರಡು ಗ್ರಹ ಶತ್ರು ಗ್ರಹಗಳಾಗಿರುವುದರಿಂದ ಇದೊಂದು ರೀತಿಯಲ್ಲಿ ದುಷ್ಟ ಯೋಗ ಸಂಭವಿಸುವ ಸಾಧ್ಯತೆ ಇರುತ್ತದೆ. ಅಂದರೆ ವಾಹನ ಚಾಲನೆ ಮಾಡುವಾಗ ಆದಷ್ಟು ಜಾಗ್ರತೆ ವಹಿಸಬೇಕಾಗುತ್ತದೆ ಹಲವಾರು ಅಪಾಯಕಾರಿ ಸಂಗತಿಗಳನ್ನು, ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ವೃಷಭ ರಾಶಿಯ ಅಧಿಪತಿಯಾಗಿರುವ ಶುಕ್ರನು ಮಕರ ರಾಶಿಯಲ್ಲಿ ಸ್ಥಾನಗೊಳ್ಳುತ್ತಾನೆ. ಕುಂಭರಾಶಿಗೆ ಶುಕ್ರನು ಪ್ರವೇಶ ಪಡೆಯುತ್ತಾನೆ ಇದರಿಂದ ಆರೋಗ್ಯ ವಿಚಾರದಲ್ಲಿ ಕ್ಷೇಮವಾಗಿರುತ್ತದೆ. ಈ ತಿಂಗಳಿನಲ್ಲಿ ವಿಧ್ಯಾರ್ಥಿಗಳಿಗೆ ಅರ್ಧದಷ್ಟು ಮಾತ್ರ ಶುಭ.

ಇನ್ನರ್ಧ ಅಷ್ಟು ಕಠಿಣ ಅನುಭವ ಗೋಚರಿಸುತ್ತದೆ, ಆದ್ದರಿಂದ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಧನಲಾಭ ವಾಗುತ್ತದೆ. ವಿವಾಹ ಸಂದರ್ಭಗಳಲ್ಲಿ ಜಗಳಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ, ಗಮನವಹಿಸುವುದು ಒಳಿತು. ಇನ್ನು ಪಾಲುದಾರಿಕೆ ವ್ಯವಹಾರದಲ್ಲಿ ಆದಷ್ಟು ಎಚ್ಚರಿಕೆವಹಿಸಿ ಇಲ್ಲವಾದಲ್ಲಿ ಆರ್ಥಿಕವಾಗಿ ಬಾರಿ ಹೊಡೆತ ಅನುಭವಿಸ ಬೇಕಾಗುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಸುಬ್ರಮಣ್ಯನ ದರ್ಶನ ಪಡೆಯುವುದರಿಂದ ಶುಭಫಲಗಳನ್ನು ಕಾಣಬಹುದು. ಉದ್ಯೋಗದಲ್ಲಿ ಪ್ರಗತಿ, ಬಡ್ತಿ ಸಿಗುತ್ತದೆ. ಶನಿಯು ಶುಕ್ರಗ್ರಹದ ಆಪ್ತನಾಗಿರುವುದರಿಂದ ಸಮಸ್ಯೆಗಳಿಗೆ ಎದುರುವ ಅಗತ್ಯವಿಲ್ಲ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.