ಫೆಬ್ರುವರಿ ತಿಂಗಳಲ್ಲಿ ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಿರುತ್ತದೆ

ರಾಶಿಚಕ್ರಗಳಲ್ಲಿ ಪ್ರಥಮ ರಾಶಿಯಾಗಿರುವ ಮೇಷ ರಾಶಿಯವರ ಫೆಬ್ರವರಿ ತಿಂಗಳ ಫಲಾಫಲಗಳು ಇತರೆ ರಾಶಿಗಳಿಗಿಂತ ಭಿನ್ನವಾಗಿದೆ ಎಂದು ಜೋತಿಷ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ. ಹಾಗಾದರೆ ಈ ಮೇಷರಾಶಿಯವರಿಗೆ ಅಂತಹ ವಿಶೇಷವಾದರು ಏನು ಎಂದು ತಿಳಿಯುವುದಾದರ ಮೇಷರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಾಲದ ಸಮಸ್ಯೆಗಳಿಂದ ಮುಕ್ತಿಗೊಂಡು ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಂಡು ಆರ್ಥಿಕವಾಗಿ ಸಮೃದ್ದಿಯಾಗಬಹುದಾಗಿದೆ. ನಿಮ್ಮ ಬಹುಕಾಲದ ಆಪ್ತಮಿತ್ರರು ಮನೆಗೆ ಆಗಮಿಸುತ್ತಾರೆ, ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಸಮಾಜದಲ್ಲಿ ನಿಮಗೆ ಸ್ಥಾನ, ಮಾನ, ಮನ್ನಣೆ ಗೌರವಾತಿಥ್ಯಗಳು ಸಿಗುತ್ತದೆ.

ಸರ್ಕಾರಿ ಅಧಿಕಾರಿಗಳು ಆದಷ್ಟು ತಮ್ಮ ಮೇಲಾಧಿಕಾರಿಗಳ ಜೊತೆ ನಯ, ವಿನಯದಿಂದ ವರ್ತಿಸಬೇಕು. ಅವರೊಂದಿಗೆ ಆದಷ್ಟು ಸೌಹಾರ್ದತೆಯ ಭಾಂದವ್ಯ ಇಟ್ಟುಕೊಂಡಷ್ಟು ನಿಮ್ಮ ವೃತ್ತಿಯಲ್ಲಿ ಪ್ರಗತಿ ಕಾಣಬಹುದು. ಅತಿಯಾದ ಕೋಪ ನಿಮ್ಮ ವೃತ್ತಿಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಮಾತಿನಲ್ಲಿ ಹಿಡಿತವಿರಲಿ, ಆದಷ್ಟು ಮೌನದಿಂದ ಇದ್ದರೆ ಒಳಿತು, ಅನಾವಶ್ಯಕ ಚರ್ಚೆಗಳನ್ನು ಮಾಡಬೇಡಿ. ಇನ್ನೊಬ್ಬರ ಬಗ್ಗೆ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ಇದರಿಂದ ನಿಮ್ಮ ಮಾನನಷ್ಟ ಆಗುವ ಸಾಧ್ಯತೆ ಇರುತ್ತದೆ. ಅವಿವಾಹಿತರಿಗೆ ತಮ್ಮ ಹಳೆಯ ಸಂಬಂಧಿಗಳ ಮೂಲದಲ್ಲಿ ವಧು,ವರ ಸಿಗುತ್ತಾರೆ.

ಇನ್ನು ಮದುವೆಯಾಗಿ ಅನೇಕ ವರ್ಷಗಳು ಕಳೆದರು ದಂಪತಿಗಳಿಗೆ ಸಂತಾನಹೀನ ಸಮಸ್ಯೆ ಕಾಡುತ್ತಿದ್ದರೆ, ಈ ವರ್ಷದಲ್ಲಿ ಸಂತಾನ ಭಾಗ್ಯ ಲಭಿಸಲಿದೆ. ರಾಜಕೀಯ ಕ್ಷೇತ್ರದ ವ್ಯಕ್ತಿಗಳಿಗೆ ಉನ್ನತ ಪದವಿ ದೊರೆತು ಹೆಚ್ಚುವರಿ ಜವಬ್ದಾರಿಗಳು ಕೂಡ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಆರೋಗ್ಯವೇ ಭಾಗ್ಯ ಕಳೆದುಕೊಂಡ ಆರೋಗ್ಯ ಮತ್ತೆ ಬರಲಾರದು, ಆಹಾರದ ವಿಚಾರದಲ್ಲಿ ಕೊಂಚ ಎಚ್ಚರವಿರಲಿ, ಇತರರನ್ನು ಬೇಗ ನಂಬಲು ಹೋಗಬೇಡಿ. ನಿಮಗೆ ಬಿಳಿ ಬಣ್ಣ ಶುಭತರುತ್ತದೆ. 3, 7, 9 ಸಂಖ್ಯೆಗಳು ನಿಮಗೆ ಅದೃಷ್ಟ ತರುವಂತಹ ಸಂಖ್ಯೆಗಳಾಗಿವೆ. ಇನ್ನು ನಿಮಗೆ ಮಾಣಿಕ್ಯ ಶುಭ ರತ್ನವಾಗಿದೆ.

%d bloggers like this: