2021ರ ನೂತನ ವರ್ಷದಲ್ಲಿ ಈ ವೃಷಭ ರಾಶಿಯವರಿಗೆ ಅದೃಷ್ಟ! ಹೌದು ಈ ರಾಶಿಯವರು ಶ್ರಮಜೀವಿಗಳು, ಜೀವನದಲ್ಲಿ ಎನನ್ನಾದರೂ ಸಾಧಿಸಬೇಕು ಎಂಬ ಹಠ, ಛಲ ಹೊಂದಿರುವವರು, ಆದರುಲಕೂಡ ಇವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರುವುದಿಲ್ಲ. ಆದರೆ ಈ ವರ್ಷದ ಫೆಬ್ರವರಿ ತಿಂಗಳಿಂದ ಇವರಿಗೆ ಅದೃಷ್ಟದ ದಿನಗಳು ಶುರುವಾಗಲಿವೆ ಎನ್ನಬಹುದು. ಯಾವಾಗಲೂ ಅಷ್ಟೇ ಹಸಿದು, ಸುಸ್ತಾದ ತದನಂತರ ಊಟ ಮಾಡಿದಾಗಲೇ ಅನ್ನದ ಮಹತ್ವ ಅರಿಯುವುದು. ಹಾಗೆಯೇ ಜೀವನದಲ್ಲಿ ಸತತ ಸೋಲು, ನೋವು, ಅವಮಾನವಾದ ನಂತರವೇ ಸುಖದ, ಸಂಭ್ರಮದ ಕ್ಷಣಗಳು ಎದುರಾಗುವುದು.

ಜೀವನದ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಆದಷ್ಟು ಎಚ್ಚರ ವಹಿಸಿ, ಜಾಗೃತಿಯಿಂದ ಮುನ್ನೆಚ್ಚರಿಕೆ ವಹಿಸಿ, ಗುರು ಹಿರಿಯರ ಸಲಹೆ ಪಡೆದ ನಂತರ ನಿಮ್ಮ ಜೀವನದ ಬಗ್ಗೆ ತೀರ್ಮಾನ ಕೈಗೊಳ್ಳಿ. ತಂದೆ ತಾಯಿಗಳನ್ನು ಗೌರವದಿಂದ ಕಾಣಿ, ಅವರ ಆಶೀರ್ವಾದದಿಂದ ನಿಮ್ಮ ಜೀವನವು ಉಜ್ವಲವಾಗುತ್ತದೆ. ಅವಿವಾಹಿತ ಹೆಣ್ಣುಮಕ್ಕಳಿಗೆ ತಮಗೊಪ್ಪುವ ವರ ಸಿಗುವಂತಾಗಿ ಮದುವೆಯ ಯೋಗ ಲಭಿಸುತ್ತದೆ. ಆದಷ್ಟು ಸೋದರ ಸಂಬಂಧಿಗಳ ಜೊತೆಗೆ ಹಣಕಾಸಿನ ವ್ಯವಹಾರ ಮಾಡಬೇಡಿ. ಇದರಿಂದ ಅನಾವಶ್ಯಕ, ಜಗಳ, ಮನಸ್ತಾಪ ಉಂಟಾಗುತ್ತದೆ.

ನಿಮ್ಮ ಬದುಕನ್ನು ಬದಲಿಸಬಲ್ಲ, ನಿಮ್ಮ ಬಾಳ ಸಂಗಾತಿಯ ಜೊತೆಗೆ ಪ್ರೀತಿ, ವಾತ್ಸಲ್ಯ ಅನುರಾಗದಿಂದ ಜೀವನ ನಡೆಸಿ. ಪರ ಸ್ತ್ರೀಯರನ್ನು ಗೌರವದಿಂದ ಕಾಣಿ. ಯಾವುದೇ ಕಾರಣಕ್ಕೂ ಅನಾವಶ್ಯಕ ಖರ್ಚು ಮಾಡಲು ಹೋಗಬೇಡಿ. ಹಾಸಿಗೆ ಇದ್ದಷ್ಟು ಕಾಲುಚಾಚಿ ಅನ್ನುವ ಹಾಗೆ ಅವಶ್ಯಕತೆಯ ಅರಿತು ವಸ್ತುಗಳನ್ನು ಖರೀದಿಸಿ, ಕೊಳ್ಳಬಾಕ ಸಂಸ್ಕೃತಿಯಿಂದ ದೂರವಾಗಿರಿ. ನಿಮ್ಮಲ್ಲಿ ಇತರರನ್ನು ಸೆಳೆಯುವ ಗುಣ, ವ್ಯಕ್ತಿತ್ವ ಇರುವುದರಿಂದ ನಿಮಗೆ ಉತ್ತಮವಾದ ಅನುಕೂಲಗಳಿದ್ದು, ಶುಭವಾಗುತ್ತದೆ. ನೀಲಿ ಬಣ್ಣ ಶುಭತರುವ ಬಣ್ಣವಾಗಿದೆ. 6, 4, 8 ಶುಭ ಸಂಖ್ಯೆಗಳಾಗಿವೆ. ಸಕಲ ಸಮಸ್ಯೆಗಳ ಪರಿಹಾರಕ್ಕಾಗಿ ದುರ್ಗಾಷ್ಟೋತ್ತರಗಳನ್ನು ಪಠಿಸಿ ಒಳಿತಾಗುತ್ತದೆ.