ಗಂಡನಿಂದ ದೂರಾದ ಬಳಿಕ ಪುಷ್ಪಾ ಚಿತ್ರದಲ್ಲಿ ಕಾಣಿಸಿಕೊಂಡ ದಕ್ಷಿಣ ಭಾರತದ ಸ್ಟಾರ್ ನಟಿ

ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಆಗಿರುವ ಪುಷ್ಪ ಚಿತ್ರದ ಹ್ಞೂಂ ಅಂಟೆ ವಾಮಾವ ಹ್ಞೂಂಹ್ಞೂ ಅಂಟೆ ವಾವಾ ಮಾವ ಎಂಬ ಲಿರಿಕಲ್ ಸಾಂಗ್ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಆದಿತ್ಯಾ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿ ಚಿತ್ರ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ದೇವಿ ಶ್ರೀ ಪ್ರಸಾದ್ ಅವರ ಮ್ಯೂಸಿಕ್ ಮತ್ತು ಚಂದ್ರಬೋಸ್ ಅವರ ಸಾಹಿತ್ಯಕ್ಕೆ ಮಾದಕವಾಗಿ ಹಾಡಿರುವ ಗಾಯಕಿ ಇಂದ್ರವತಿ ಚೌಹಾನ್ ಅವರ ವಾಯ್ಸ್ ಯಂಗ್ ಸ್ಟರ್ಸ್ ಗಳಿಗೆ ಈ ಸಾಂಗ್ ಮತ್ತೇರಿಸಿದೆ. ಈ ಲಿರಿಕಲ್ ಸಾಂಗ್ ಬರೋಬ್ಬರಿ 23ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆದು ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಅಂತೆಯೇ ನಿನ್ನೆ ಬಿಡುಗಡೆಯಾದ ವೀಡಿಯೋ ಪ್ರೋಮೋ ಸಾಂಗ್ ಕೂಡ ಒಂದೇ ದಿನದಲ್ಲಿ ಬರೋಬ್ಬರಿ ಐದು ಮಿಲಿಯನ್ ಕ್ಕಿಂತ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಇದೀಗ ನಿನ್ನೆ ತಾನೇ ಇದೇ ಹ್ಞೂಂ ಅಂಟೆ ವಾ ಮಾವ ಹಾಡಿನ ವೀಡಿಯೋ ಪ್ರೋಮೋ ಬಿಡುಗಡೆಯಾಗಿದೆ. ಕೇವಲ 19ಸೆಕೆಂಡ್ ಇರುವ ಈ ಹಾಡಿದ ವೀಡಿಯೋ ಪ್ರೋಮೋದಲ್ಲಿ ನಟಿ ಸಮಂತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಮೈ ಚಳಿ ಬಿಟ್ಟು ಸಮಂತಾ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರೊಟ್ಟಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಜಸ್ಟ್ 19ಸೆಕೆಂಡ್ ಗಳ ಈ ವೀಡಿಯೋದಲ್ಲೇ ಆಪಲ್ ಬ್ಯೂಟಿ ಸಮಂತಾ ಇಷ್ಟು ಮತ್ತೇರಿಸಿರಬೇಕಾದರೆ ಇನ್ನ ಪೂರಾ ಹಾಡಿನಲ್ಲಿ ಇನ್ಯಾವ ರೀತಿಯ ಮಾದಕ ನೋಟದ ನೃತ್ಯ ಮಾಡಿದ್ದಾರೆ ಎಂಬುದು ಸಿನಿ ಪ್ರೇಕ್ಷಕರ ಕುತೂಹಲವಾಗಿದೆ.

ಇನ್ನು ಪುಷ್ಪ ಸಿನಿಮಾ ಇದೇ ಡಿಸೆಂಬರ್ 17ರಂದು ಪಂಚ ಭಾಷೆಗಳಲ್ಲಿ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನವೀನ್ ಎರ್ನೇನಿ ಮತ್ತು ರವಿಶಂಕರ್
ಬರೋಬ್ಬರಿ 250 ಕೋಟಿ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಪುಷ್ಪಾ ಚಿತ್ರ ಈಗಾಗಲೇ ಟೀಸರ್, ಟ್ರೇಲರ್, ಸಾಂಗ್ ಗಳ ಮೂಲಕ ಅಪಾರ ಜನ ಮೆಚ್ಚುಗೆ ಪಡೆದುಕೊಂಡಿದ್ದು ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಡಾಲಿ ಧನಂಜಯ್, ಮಲೆಯಾಳಂನ ಖ್ಯಾತ ನಟ ಫಹಾದ್ ಫಾಸಿಲ್, ತೆಲುಗಿನ ಜಗಪತಿ ಬಾಬು, ತಮಿಳಿನ ನಟ ಸುನೀಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

%d bloggers like this: