ಗಂಡು ಮಗುವಿಗೆ ಜನ್ಮ ನೀಡಿದ ಭಾರತೀಯ ಮೂಲದ ಬಾಲಿವುಡ್, ಹಾಲಿವುಡ್ ನಟಿ

ಭಾರತದ ಪ್ರಸಿದ್ದ ಸಿನಿಮಾಗಳಲ್ಲಿ ಒಂದಾದ 2008 ರಲ್ಲಿ ತೆರೆಕಂಡ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೋ ಗಂಡು ಮಗುವಿನ ತಾಯಿಯಾಗಿರುವ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪತಿ ಕೋರಿ ಟ್ರಾನ್ ಅವರು ತಮ್ಮ ಮಗುವನ್ನು ಎದೆಯ ಮೇಲೆ ಆಲಂಗಿಸಿಕೊಂಡು ಮಲಗಿರುವ ಪೋಟೋವೊಂದನ್ನ ನಟಿ ಫ್ರೀಡಾ ಪಿಂಟೋ ಅವರು ತಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ನಟಿ ಫ್ರೀಡಾ ಪಿಂಟೋ ತಾಯಿಯಾಗಿರುವ ವಿಚಾರವೇ ಗೊತ್ತಿಲ್ಲದಿದ್ದ ಕಾರಣ ಒಂದಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸುತ್ತಾ ಈ ಫೋಟೋಗೆ ಮೆಚ್ಚುಗೆ ಪಟ್ಟಿದ್ದಾರೆ.

ನಟಿ ಫ್ರಿಡೋ ಸೆಲೆನಾ ಪಿಂಟೋ ಅವರು ಭಾರತೀಯ ಮೂಲದವರಾಗಿದ್ದು, ಅಮೇರಿಕನ್ ಮತ್ತು ಬ್ರಿಟೀಷ್ ಸಿನಿಮಾಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. 1984 ರಂದು ಮುಂಬೈನಲ್ಲಿ ಜನಿಸಿದ ಫ್ರೀಡಾ ಪಿಂಟೋ ಬಾಲ್ಯದಿಂದಾನೂ ಬಣ್ಣದ ಲೋಕದ ಸೆಳೆತಕ್ಕೆ ಒಳಗಾಗಿದ್ದರು. ಕಾಲೇಜು ವಿಧ್ಯಾಭ್ಯಾಸ ಮುಗಿದ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡ ಫ್ರೀಡಾ ತದ ನಂತರ ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಲು ಅವಕಾಶ ಪಡೆದುಕೊಳ್ಳುತ್ತಾರೆ. 2008 ರಲ್ಲಿ ತೆರೆಕಂಡ ಸ್ಲಂ ಡಾಗ್ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಫ್ರೀಡಾ ಪಿಂಟೋ ತಮ್ಮ ಮೊದಲ ಚಿತ್ರದಲ್ಲಿಯೇ ಅಪಾರ ಪ್ರಸಿದ್ದತೆ ಗಳಿಸಿಕೊಳ್ಳುತ್ತಾರೆ.

ನಿರ್ದೇಶಕ ಡ್ಯಾನಿ ಬೋಯ್ಲೆ ನಿರ್ದೇಶನದ ಈ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾ ಜಗತ್ತಿನಾದ್ಯಂತ ಅಪಾರ ಜನಪ್ರಿಯತೆ ಗಳಿಸುತ್ತದೆ. ಸರಿ ಸುಮಾರು 118 ಪ್ರಶಸ್ತಿಗಳ ಪಡೆದಿರುವ ಈ ಚಿತ್ರ ಬರೋಬ್ಬರಿ 175 ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ಇದಾದ ನಂತರದಲ್ಲಿ ಫ್ರೀಡಾ ಪಿಂಟೋ ಅವರಿಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ದೊರೆಯುತ್ತದೆ. 2020 ರಲ್ಲಿ ಕೋರಿಟ್ರಾನ್ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದು ಇದೀಗ ಒಂದು ಗಂಡು ಮಗುವಿನ ತಾಯಿಯಾಗಿರುವ ಫ್ರೀಡಾ ಪಿಂಟೋ ಸುಂದರ ಸಾಂಸಾರಿಕ ಬದುಕನ್ನ ಕಟ್ಟಿಕೊಂಡಿದ್ದಾರೆ.

ಪತಿ ಕೋರಿ ಟ್ರಾನ್ ಮಗುವನ್ನ ಎದೆಯ ಮೇಲೆ ಮಲಗಿಸಿಕೊಂಡಿರುವ ಪೋಟೋವನ್ನು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿರುವ ನಟಿ ಫ್ರೀಡಾ ಪಿಂಟೋ ಅವರು ತಮ್ಮ ಮಗನ ಹೆಸರು ರೂಮಿ ರೇ ಎಂದು ಪರಿಚಯಿಸಿ,ತಮ್ಮ ಪತಿಯ ಬಗ್ಗೆ ನನ್ನ ಗಂಡ ನನಗೆ ಒಳ್ಳೆಯ ಗೆಳೆಯ ಮತ್ತು ಬಾಳ ಸಂಗಾತಿಯಾಗಿದ್ದಾರೆ.ನಮ್ಮ ಕುಟುಂಬಕ್ಕೆ ಗಂಡು ಮಗುವೊಂದು ಆಗಮನವಾಗಿದ್ದು, ಅವರು ಈಗ ಸೂಪರ್ ಡ್ಯಾಡಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

%d bloggers like this: