ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಮದಗಜ ಸಿನಿಮಾ ಮೂರೇ ದಿನಕ್ಕೆ ಮಾಡಿದ ಕೆಲೆಕ್ಷನ್ ನೋಡಿ ನಿಬ್ಬೆರಗಾದ ಗಾಂಧಿನಗರ! ಹೌದು ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಸಿನಿಮಾ ಕಳೆದ ವಾರ ಡಿಸೆಂಬರ್ 3ರಂದು ರಾಜ್ಯದ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಮದಗಜ ಚಿತ್ರ ಕೂಡ ಒಂದಾಗಿತ್ತು. ಮದಗಜ ಚಿತ್ರ ಬಿಡುಗಡೆಗೆ ಮುನ್ನ ತನ್ನ ಟ್ರೇಲರ್ ನಿಂದಾನೇ ಸಖತ್ ಸೌಂಡ್ ಮಾಡಿತ್ತು. ಅಂತೆಯೇ ಸಿನಿಮಾ ಬಿಡುಗಡೆಯಾದ ಮೇಲೂ ಕೂಡ ಅದೇ ನಿರೀಕ್ಷೆಯನ್ನು ಉಳಿಸಿಕೊಂಡು ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಶ್ರೀ ಮುರುಳಿ ಅವರ ಉಗ್ರಂ, ರಥಾವರ, ಮಫ್ತಿ, ಭರಾಟೆ ಈ ಯಾವ ಸಿವಿಮಾಗಳು ಮಾಡದಷ್ಟು ಗಳಿಕೆಯನ್ನು ಮದಗಜ ಸಿನಿಮಾ ಮಾಡಿದೆಯಂತೆ. ಶ್ರೀ ಮುರುಳಿ ಅವರ ಅಭಿಮಾನಿಗಳಿಗೆ ಮದಗಜ ಸಿನಿಮಾ ಭರ್ಜರಿ ಫುಲ್ ಮೀಲ್ಸ್ ಆಗಿದೆ. ಶ್ರೀ ಮುರುಳಿ ಮತ್ತು ಆಶಿಕಾ ರಂಗನಾಥ್ ಅವರ ಜೋಡಿ ವರ್ಕೌಟ್ ಆಗಿದ್ದು, ರವಿ ಬಸ್ರೂರ್ ಅವರ ಮ್ಯೂಸಿಕ್ ಮದಗಜ ಚಿತ್ರಕ್ಕೆ ಮೈಲೇಜ್ ನೀಡಿದೆ. ದಿನದಿಂದ ದಿನಕ್ಕೆ ಥಿಯೇಟರ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಮದಗಜ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರದ ಕಲೆಕ್ಷನ್ ಕಂಡು ಖುಷಿ ಆಗಿದ್ದಾರಂತೆ.

ಮದಗಜ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಏಳು ಕೋಟಿ ಎಂಭತ್ತೆರಡು ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತು. ಎರಡನೇ ದಿನ ವೀಕೆಂಡ್ ಶನಿವಾರ ಐದು ಕೋಟಿ ಅರವತ್ನಾಲ್ಕು ಲಕ್ಷ ಗಳಿಕೆ ಮಾಡದರೆ, ಭಾನುವಾರ ಬರೋಬ್ಬರಿ ಆರು ಕೋಟಿ ಮೂವತ್ತೊಂದು ಲಕ್ಷ ಕಮಾಯಿ ಮಾಡಿದೆ. ಒಟ್ಟಾರೆಯಾಗಿ ಕನ್ನಡದ ಸಿನಿಮಾಗಳು ಬಿಡುಗಡೆಯಾದ ಮೊದಲ ವಾರದಲ್ಲಿಯೇ ಹಾಕಿದ ಬಂಡವಾಳವನ್ನ ತೆಗೆಯುವಷ್ಟರ ಮಟ್ಟಿಗೆ ರಿಚ್ ಆಗಿ ಬರುತ್ತಿದ್ದು, ನಿರ್ಮಾಪಕರು ಕೂಡ ಇನ್ನೊಂದಷ್ಟು ಸಿನಿಮಾಗಳನ್ನ ಮಾಡಲು ಉತ್ಸುಕರಾಗಿದ್ದಾರೆ. ಅಂತೆಯೇ ಮದಗಜ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕೂಡ ಮದಗಜ ಚಿತ್ರದ ಕಲೆಕ್ಷನ್ ಕಂಡು ತೆಲುಗು ಮತ್ತು ತಮಿಳಿನಲ್ಲಿಯೂ ಕೂಡ ಶೀಘ್ರದಲ್ಲಿ ಬಿಡುಗಡೆ ಮಾಡಲು ಆಲೋಚನೆ ಮಾಡಿದ್ದಾರಂತೆ.