ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಟೀಮ್ ಇಂಡಿಯಾ ಆಟಗಾರ

ಭಾರತ ತಂಡದ ಖ್ಯಾತ ಆಲ್ ರೌಂಡರ್ ಆಟಗಾರ ತಮ್ಮ ಗೆಳತಿ ಜೊತೆ ಸಪ್ತಪದಿ ಸುತ್ತಲು ಸಜ್ಜಾಗಿದ್ದಾರೆ. ಹೌದು ಒಂದೆಡೆ ಸಿನಿಮಾ ತಾರೆಯರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದರೆ, ಇತ್ತ ಭಾರತೀಯ ಕ್ರೀಡಾಪಟುಗಳು ಕೂಡ ವೈವಾಹಿಕ ಬದುಕಿಗೆ ನಾಂದಿಯಾಡಲು ಸಿದ್ದರಾಗುತ್ತಿದ್ದಾರೆ. ಇನ್ನೇನೋ ಕೆಲವೇ ದಿನಗಳಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಡೇಟಿಂಗ್ ನಲ್ಲಿರುವ ಕಾರಣ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದೇ ನಿರೀಕ್ಷೆ ಮಾಡಲಾಗುತ್ತಿತ್ತು. ಇವರ ಬದಲು ಭಾರತ ತಂಡದ ಮತ್ತೊಬ್ಬ ಆಲ್ ರೌಂಡರ್ ಮತ್ತು ವೇಗಿ ಆಗಿರುವ ಶಾರ್ದೂಲ್ ಠಾಕೂರ್ ತಮ್ಮ ಗೆಳತಿ ಮಿಥಾಲಿ ಪರುಲ್ಕರ್ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಕ್ರಿಕೆಟಿಗ ಶಾರ್ದೂಲ್ ನರೇಂದ್ರ ಠಾಕೂರ್ ಅವರು ಉತ್ತಮ ವೇಗಿ ಬೌಲರ್ ಆಗಿರುವುದರ ಜೊತೆಗೆ ರೈಟ್ ಹ್ಯಾಂಡ್ ಬ್ಯಾಟ್ಸಮನ್. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಶಾರ್ದೂಲ್ ಠಾಕೂರ್ ಆಟವಾಡುತ್ತಾರೆ. ಶಾರ್ದೂಲ್ ಠಾಕೂರ್ ಅವರು ಇದುವರೆಗೆ ನಾಲ್ಕು ಟೆಸ್ಟ್ ಮತ್ತು ಹದಿನೈದು ಏಕದಿನ ಪಂದ್ಯಗಳಲ್ಲಿ ಆಟವಾಡಿದ್ದು, ಇಪ್ಪತ್ನಾಲ್ಕು ಟಿ-ಟ್ವೆಂಟಿ ಪಂದ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿಯೂ ಕೂಡ ಶಾರ್ದೂಲ್ ಠಾಕೂರ್ ಭಾಗವಹಿಸಿದ್ದರು.

ಸದ್ಯಕ್ಕೆ ಶಾರ್ದೂಲ್ ಠಾಕೂರ್ ಭಾರತ ತಂಡದಿಂದ ಹೊರಗುಳಿದಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆಯೇ ತಮ್ಮ ಗೆಳತಿ ಮಿಥಾಲಿ ಪರುಲ್ಕರ್ ಅವರೊಟ್ಟಿಗೆ ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮಕ್ಷಮದಲ್ಲಿ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥ ಕಾರ್ಯಕ್ರಮದ ಒಂದಷ್ಟು ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ಫೋಟೋ ಮತ್ತು ವೀಡಿಯೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಯುವಜೋಡಿಗಳಿಗೆ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಮುಂದಿನ ವರ್ಷ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆಯುವ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯ ಮುಗಿದ ಬಳಿಕ ಶಾರ್ದೂಲ್ ಠಾಕೂರ್ ಮದುವೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

%d bloggers like this: