ಗೆಳತಿ ಜೊತೆ ಸಪ್ತಪದಿ ತುಳಿದ ಬಾಲಿವುಡ್ ನಟ ವರುಣ್ ಧವನ್

ವರುಣ್ ಧವನ್ ಭಾರತೀಯ ಹಿಂದಿ ಚಿತ್ರ ನಟನಾಗಿದ್ದು, ಇವರ ವಿಧ್ಯಾಭ್ಯಾಸ ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ವ್ಯವಹಾರ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿದ್ದರು ಸಹ, ಇವರ ತಂದೆ ಚಲನಚಿತ್ರ ನಿರ್ದೇಶಕರಾದ ಡೇವಿಡ್ ಧವನ್ ಪ್ರೇರಣೆಯಿಂದ ಚಲನಚಿತ್ರಕ್ಕೆ ಪ್ರವೇಶಿಸಿದ್ದು, 2010 ರಲ್ಲಿ ಮೈ ನೇಮ್ ಈಸ್ ಖಾನ್ ಸಿನಿಮಾದಲ್ಲಿ ಕರಣ್ ಜೋಹರ್ ರವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವುದರ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದು, ಇದುವರೆಗೂ ಹನ್ನೊಂದು ಚಿತ್ರಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ತನ್ನನ್ನು ಉತ್ತಮ ನಾಯಕನಟನನ್ನಾಗಿ ಜನರು ಮೆಚ್ಚಿಕೊಳ್ಳುವ ರೀತಿಯಲ್ಲಿ ಮಿಂಚಿದ್ದಾರೆ.

ಧವನ್ ರವರ ನಟನೆಗೆ ಫೇವರೇಟ್ ಡೆಬ್ಯೂಟ್, ಬೆಸ್ಟ್ ಮೇಲ್ ಡೆಬ್ಯೂಟ್, ಮೋಸ್ಟ್ ಪ್ರಾಫಿಟೇಬಲ್ ಡೆಬ್ಯೂಟ್, ಅತ್ಯುತ್ತಮ ನಟನಾಗಿ 14 ಅವಾರ್ಡ್ ಗಳನ್ನು, ಸ್ಟಾರ್ ಡಸ್ಟ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ ಇನ್ ಕಾಮಿಡಿ/ರೊಮ್ಯಾನ್ಸ್ ಹೀಗೆ ಒಟ್ಟು 40 ಅವಾರ್ಡ್ಗಳನ್ನೂ ಪಡೆದು ಭರ್ಜರಿಯಾಗಿ ಒಂದರ ನಂತರ ಒಂದು ಹಿಟ್ ಕೊಟ್ಟಿದ್ದು ಮಾಡೆಲಿಂಗ್ ಕೆರಿಯರ್ ನಲ್ಲೂ ಆಗಾಗೆ ಸದ್ದು ಮಾಡುತ್ತಿರುತ್ತಾರೆ. ಬಾಲಿವುಡ್ ಅಲ್ಲಿ ಧೂಳೆಬ್ಬಿಸಿದ್ದ ವರುಣ್ ಹಾಗು ಆಲಿಯ ಭಟ್ ರ ಕಾಂಬಿನೇಶನ್ ಚಿತ್ರಗಳು ಅವರಿಬ್ಬರ ನಡುವಿನ ಪ್ರೀತಿಯನ್ನು, ಸಂಭಂದವನ್ನು ಬೇರೆ ರೀತಿಯಲ್ಲಿ ತೋರಿಸಿದ್ದವು. ಸಧ್ಯ ವರುಣ್ ಧವನ್ ತನ್ನ ಬಾಲ್ಯದ ಗೆಳತಿ ನತಾಶ ದಲಾಲ್ ಅವರೊಂದಿಗೆ ತಮ್ಮ ಸ್ನೇಹ ಸಂಬಂಧವನ್ನು ಮದುವೆಯ ನಂಟಿನೊಂದಿಗೆ ಕೊನೆಮಾಡಲಿದ್ದು, ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಇಷ್ಟಕ್ಕೂ ಯಾರಿ ಬಾಲ್ಯದ ಗೆಳತಿ ನತಾಶ ಅಂತ ಯೋಚನೆ ಮಾಡ್ತಿದ್ದೀರ, ಯಾರ್ ತಾನೇ ಸಿಂಪಲ್ ಹುಡುಗಿಯೊಂದಿಗೆ ಮದ್ವೆ ಆಗ್ತಾರ್ರಿ! ನತಾಶ ಈಕೆ ರಾಕೇಶ್ ದಲಾಲ್ ಹಾಗು ಗೌರಿ ದಲಾಲ್ ಎಂಬ ವ್ಯವಹಾರ ಉದ್ಯಮಿ ದಂಪತಿಗಳ ಮಗಳಾಗಿದ್ದು, ಈಕೆಯ ೬ನೆ ತರಗತಿಯಲ್ಲಿ ವಿಧ್ಯಾಭ್ಯಾಸ ನಡೆಸುವಾಗ ನತಾಶ ಹಾಗು ಧವನ್ ರವರ ಸ್ನೇಹ ಸಂಭಂದ ಮಾತ್ರ ಶುರುವಾಗಿತ್ತಂತೆ, ಆದರೆ ನತಾಶ ತನ್ನ ಕೆರಿಯರ್ ಅನ್ನು ನ್ಯೂಯಾರ್ಕ್ ನ ಫ್ಯಾಷನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಗಿಸಿದ್ದು, ಹೆಸರಾಂತ ಫ್ಯಾಷನ್ ಡಿಸೈನರ್ ಆಗಿ ತಮ್ಮ ಜೀವನ ಶೈಲಿಯನ್ನು ನಡೆಸುತ್ತಿದ್ದಾರೆ. ಆದರೆ ಇವರಿಬ್ಬರ ಮದ್ಯೆ ಪ್ರೇಮಾಂಕುರ ಆದದ್ದು ಮಾತ್ರ ಧವನ್ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ನಂತರ ನತಾಶರನ್ನು ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ಭೇಟಿಯಾದ ನಂತರದಲ್ಲಾಗಿದೆ.

ತಮ್ಮ ಪ್ರೇಮದ ಬಗ್ಗೆ ಧವನ್, ಕಾಫಿ ವಿಥ್ ಕರಣ್ ಎಂಬ ಶೋ ನಲ್ಲಿ ಬಾಯ್ಬಿಟ್ಟಿದ್ದು, ಕೊರೊನ ಮಹಾಮಾರಿ ಪ್ರೇಮಿಗಳನ್ನು ಅಂತರದಲ್ಲಿಡುವಂತೆ ಮಾಡಿದ್ದು ಸದ್ಯ ಪ್ರೇಮಿಗಳನ್ನು ವಿವಾಹ ಜೀವನಕ್ಕೆ ಕಾಲಿಡುವಂತೆ ಮಾಡಿದೆ. ವರುಣ್ ಧವನ್ ಹಾಗು ತನ್ನ ಬಾಲ್ಯದ ಗೆಳತಿ ನತಾಶ ದಲಾಲ್ 24 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಹಾಗು ಸಾಮಾಜಿಕ ಅಂತರದ ಕಾರಣದಿಂದಾಗಿ ಕೇವಲ ೪೦-೫೦ ಅಥಿತಿಗಳನ್ನೂ ಮಾತ್ರ ಆಹ್ವಾನಿಸಿದ್ದು, ಜೀವನದ ಸಂಗಾತಿಗಳಾಗಿ ಮದುವೆಯ ಸೆಟ್ ನಲ್ಲಿ ಮಿಂಚುತ್ತಿದ್ದಾರೆ. ಧವನ್ ರವರ ವೈವಾಹಿಕ ಜೀವನ ಖುಷಿಯಿಂದ ಇರ್ಲಿ ಅಂತ ಹಾರೈಸೋಣ.

%d bloggers like this: