ಗೆಳತಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಚಿತ್ರದ ಹಿಂದಿ ವಿತರಕ ಹಾಗೂ ಖ್ಯಾತ ನಟ

ಹಿಂದಿ ಚಿತ್ರರಂಗದ ಹಿರಿಯ ಸಾಹಿತಿ ಜಾವೇದ್ ಅಖ್ತರ್ ಅವರ ಪುತ್ರ ಫರ್ಹಾನ್ ಅಖ್ತರ್. ಇವರು ಕೇವಲ ಬಾಲಿವುಡ್ ನ ನಟರಷ್ಟೇ ಅಲ್ಲದೆ ನಿರ್ದೇಶಕ, ಸ್ಕ್ರೀನ್ ರೈಟರ್, ಪ್ಲೇ ಬ್ಯಾಕ್ ಸಿಂಗರ್, ನಿರ್ಮಾಪಕ ಹಾಗೂ ನಿರೂಪಕರಾಗಿ ಗುರುತಿಸಿಕೊಂಡವರು. ಮಲ್ಟಿ ಟಾಲೆಂಟೆಡ್ ಆಗಿರುವ ಫರ್ಹಾನ್ ಅಖ್ತರ್ ಬಾಲಿವುಡ್ ನ ಹೆಸರಾಂತ ನಟ. ಲಕ್ಷ್ಯ ಚಿತ್ರದ ಮೂಲಕ ನಿರ್ದೇಶಕರಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಇವರು, ಜಿಂದಗಿ ನಾ ಮಿಲೇಗಿ ದೊಬಾರಾ, ಭಾಗ್ ಮಿಲ್ಕ ಭಾಗ್, ದಿ ಸ್ಕೈ ಈಸ್ ಪಿಂಕ್ ಇವರ ಅತ್ಯುತ್ತಮ ಚಿತ್ರಗಳು. ಭಾರತದ ಹೆಮ್ಮೆಯ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಆತ್ಮಚರಿತ್ರೆಯನ್ನು ಸಿನಿಮಾ ರೂಪದಲ್ಲಿ ಹೊರ ತಂದು, ಭಾಗ್ ಮಿಲ್ಕ ಭಾಗ್ ಚಿತ್ರ ಮಾಡಲಾಯಿತು. ಈ ಚಿತ್ರದ ಅತ್ಯುನ್ನತ ನಟನೆಗಾಗಿ ಫರ್ಹಾನ್ ಅಖ್ತರ್ ಅವರಿಗೆ ಉತ್ತಮ ನಟ ಪ್ರಶಸ್ತಿ ದೊರೆತಿದೆ.

2000 ರಲ್ಲಿ ಅಧುನಾ ಭಧಾನಿ ಅವರನ್ನು ವಿವಾಹವಾಗಿದ್ದ ಫರ್ಹಾನ್ ಅಖ್ತರ್ ಅವರು 2017 ರಲ್ಲಿ ಅವರಿಂದ ದೂರವಾಗಿದ್ದರು. ಆದರೆ ಇತ್ತೀಚಿಗೆ ನಟಿ ಹಾಗೂ ಮಾಡೆಲ್ ಆಗಿರುವ ಶಿಭಾನಿ ದಂಡೇಕರ್ ಅವರ ಜೊತೆ ಫರ್ಹಾನ್ ಅಖ್ತರ್ ಅವರ ಹೆಸರು ಕೇಳಿಬರುತ್ತಿತ್ತು. ಆದರೆ ಇದರ ಬಗ್ಗೆ ಅಧಿಕೃತವಾಗಿ ಖಚಿತ ಪಡಿಸದ ಈ ಜೋಡಿ, ಈಗ ಎಲ್ಲರಿಗೂ ಸಡನ್ ಶಾಕ್ ನೀಡಿದ್ದಾರೆ. ಹೌದು ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಂಡೇಕರ್ ಇದೇ ಫೆಬ್ರವರಿ 19 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಶಿಬಾನಿ ದಾಂಡೇಕರ್ ಅವರು ಕೆಂಪು ಬಣ್ಣದ ಗೌನ್ ಧರಿಸಿದರೆ, ಫರ್ಹಾನ್ ಅವರು ಕಪ್ಪು ಬಣ್ಣದ ಸೂಟ್ ಧರಿಸಿ ಮಿಂಚುತ್ತಿದ್ದರು.

ಮುಂಬೈನಲ್ಲಿ ಇವರ ವಿವಾಹ ಜರುಗಿದ್ದು, ವಿವಾಹದ ತಯಾರಿಗಳ ಎಲ್ಲಾ ಜವಾಬ್ದಾರಿಯನ್ನು ವೆಡ್ಡಿಂಗ್ ಪ್ಲಾನರ್ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಇದೀಗ ಮದುವೆ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇವರ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ಇರುವುದರಿಂದ ವಿವಾಹವನ್ನು ದೊಡ್ಡಮಟ್ಟದಲ್ಲಿ ಏರ್ಪಡಿಸಲು ಸಾಧ್ಯವಾಗುತ್ತಿಲ್ಲ. ಸಿಂಪಲ್ ಆಗಿ ಫ್ಯಾಮಿಲಿ ಜೊತೆ ವಿವಾಹ ಜರುಗಿದ್ದು, ಹೀಗಾಗಿ ಆಪ್ತರು, ಸ್ನೇಹಿತರು, ಚಿತ್ರರಂಗದ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು ಸ್ನೇಹಿತರು ಮತ್ತು ಬಾಲಿವುಡ್ ನ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.

%d bloggers like this: