ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ

ಹಲವಾರು ಹಿಟ್ ಹಿಂದಿ ಸೀರಿಯಲ್ ಗಳನ್ನೂ ನೀಡಿರುವ ಈ ನಟಿ, ಕನ್ನಡದ ಹೆಸರಾಂತ ಹೀರೋ ಜೊತೆಗೆ ಕನ್ನಡದ ಸಿನಿಮಾ ಕೂಡ ಮಾಡಿದ್ದಾರೆ. ಹೌದು ನೆನಪಿರಲಿ ಪ್ರೇಮ್ ಅವರಿಗೆ ಜೋಡಿಯಾಗಿ ಅಭಿನಯಿಸಿರುವ ಈ ನಟಿ, ಸಿಂಪಲ್ ಆಗಿ ತಮ್ಮ ಗೆಳೆಯನೊಂದಿಗೆ ವಿವಾಹವಾಗಿದ್ದಾರೆ. ಐಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋನ ಎಂಬ ಚಿತ್ರದಲ್ಲಿ ಪ್ರೇಮ್ ಹಾಗೂ ಕರೀಷ್ಮ ತನ್ನಾ ಜೋಡಿಯಾಗಿದ್ದರು. ಕಹಿ ತೋ ಮಿಲೆಂಗೆ, ಕುಸುಮ್, ಏಕ್ ಲಡ್ಕಿ ಅಂಜಾನಿ, ವಿರಾಸತ್, ನಾಗಿನ್3 ಸೇರಿದಂತೆ ಅನೇಕ ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕರೀಷ್ಮ ಅಭಿನಯಿಸಿದ್ದಾರೆ. ಕನ್ನಡದಲ್ಲಿ ನೆನಪಿರಲಿ ಪ್ರೇಮ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ ಈ ನಟಿ ತಮ್ಮ ಗೆಳೆಯನೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ವರ್ಷ ಕರಿಷ್ಮಾ ಮತ್ತು ಅವರ ಸ್ನೇಹಿತ ವರುಣ್ ಅವರು ಸರಳವಾಗಿ ಉಂಗುರ ಬದಲಾಯಿಸಿಕೊಂಡಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಹಂಚಿಕೊಂಡ ನಟಿ ಕರಿಷ್ಮಾ ಉಂಗುರದ ಫೋಟೋವನ್ನು ಮಾತ್ರ ಎಲ್ಲಿಯೂ ಅಪ್ಲೋಡ್ ಮಾಡಿರಲಿಲ್ಲ. ಇದೀಗ ಈ ಜೋಡಿ ಸಮುದ್ರದ ಎದುರು ಮಂಟಪ ಸೆಟ್ ಹಾಕಿಸಿ ಮದುವೆಯಾಗಿದ್ದಾರೆ. ಸತತ ಮೂರು ದಿನಗಳ ಕಾಲ ನಡೆದ ಈ ಮದುವೆಯಲ್ಲಿ ಕರಿಷ್ಮಾ ಪಿಂಕ್ ಪೆಸ್ಟಲ್ ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದು, ವರುಣ್ ಅವರು ಬಿಳಿ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದಾರೆ. ಮೊದಲ ದಿನ ಅರಿಶಿಣ ಶಾಸ್ತ್ರ, ಎರಡನೇ ದಿನ ಮೆಹಂದಿ ಕಾರ್ಯಕ್ರಮ ಹಾಗೂ ಸಂಗೀತ ಸಮಾರಂಭ ನಡೆಯಿತು.

ಮೂರನೇ ದಿನ ಸಾಂಪ್ರದಾಯಿಕವಾಗಿ ಈ ಜೋಡಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವರುಣ್ ಅವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಡೈರೆಕ್ಟರ್ ಆಗಿದ್ದಾರೆ. ಕರಿಷ್ಮಾ ಮತ್ತು ವರುಣ್ ಕಾಮನ್ ಸ್ನೇಹಿತರ ಮೂಲಕ ಭೇಟಿ ಮಾಡಿದ್ದು, ಮೊದಲು ಪರಿಚಯವಾಗಿ ನಂತರ ಸ್ನೇಹಿತರಾಗಿ ಡೇಟಿಂಗ್ ಮಾಡಲು ಶುರುಮಾಡಿದ್ದರು. ಹಲವು ವರ್ಷಗಳ ಕಾಲ ಇಬ್ಬರೂ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಕರಿಷ್ಮಾ ಹೇಳಿದ್ದಾರೆ. ಇವರಿಬ್ಬರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿವೆ.

%d bloggers like this: