ಗೆಲುವಿನ ಸಂತಸದಲ್ಲಿರುವ ಡಾರ್ಲಿಂಗ್ ಕೃಷ್ಣ ಅವರು ತರುತ್ತಿದ್ದಾರೆ ಲೋಕಲ್ ಟ್ರೇನ್

ಡಾರ್ಲಿಂಗ್ ಕೃಷ್ಣ ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ನಟ. ಮದರಂಗಿ ಚಿತ್ರದ ಮೂಲಕ ಅಧಿಕೃತವಾಗಿ ಸ್ಯಾಂಡಲ್ವುಡ್ ಗೆ ಕಾಲಿಟ್ಟ ನಟ ಕೃಷ್ಣ ಅವರಿಗೆ ಹೆಸರು ತಂದುಕೊಟ್ಟಿದ್ದು ಅವರೇ ನಿರ್ದೇಶಿಸಿ ನಟಿಸಿರುವ ಲವ್ ಮಾಕ್ ಟೇಲ್ ಚಿತ್ರ. ಲವ್ ಮಾಕ್ಟೇಲ್ ಚಿತ್ರದ ಯಶಸ್ಸಿನ ನಂತರ ಸಿಕ್ವೆಲ್ ಲವ್ ಮಾಕ್ಟೇಲ್ 2 ಕೂಡ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಲವ್ ಮಾಕ್ಟೇಲ್ ಚಿತ್ರಗಳ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಖುಷಿಯಲ್ಲಿ ತೇಲುತ್ತಿದ್ದಾರೆ. ಇದೇ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿರುವ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹೌದು ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ಅಭಿನಯಿಸಿರುವ ಹೊಸ ಸಿನಿಮಾ ಲೋಕಲ್ ಟ್ರೈನ್ ಇದೆ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ ಅಭಿನಯದ ಲೋಕಲ್ ಟ್ರೈನ್ ಚಿತ್ರವು ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದೆ. ಲೋಕಲ್ ಟ್ರೈನ್ ನಲ್ಲಿಯೇ ಸಿನಿಮಾದ ಕಥೆ ಆರಂಭವಾಗಿ ಮುಂದೆ ಸಾಗುತ್ತದೆ.

ಲೋಕಲ್ ಟ್ರೈನ್ ನಲ್ಲಿ ದಿನನಿತ್ಯ ಪ್ರಯಾಣ ಮಾಡುವವರು ಈ ಚಿತ್ರವನ್ನು ತಮ್ಮ ಜೀವನಕ್ಕೆ ರಿಲೇಟ್ ಮಾಡಿಕೊಳ್ಳಬಹುದಾ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಇನ್ನೊಂದು ಕಡೆ ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ಹಾಗೆಯೇ ಹಾಡುಗಳು ಕೂಡ ಸುಮಧುರವಾಗಿದೆ. ಹೀಗಾಗಿ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಸಿನಿಪಯಣದಲ್ಲಿ ಮತ್ತೊಂದು ಯಶಸ್ಸಿಗೆ ಕಾದುಕುಳಿತಿದ್ದಾರೆ. ಲವ್ ಮಾಕ್ಟೇಲ್2 ಸಿನಿಮಾ ಇನ್ನೂ ಕೂಡ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸಿನಲ್ಲಿ ಸದ್ದು ಮಾಡುತ್ತಲೇ ಇದೆ. ಇದೇ ಸಮಯದಲ್ಲಿ ಅವರ ಮತ್ತೊಂದು ಸಿನಿಮಾ ಯಶಸ್ಸಿನ ಶಿಖರವನ್ನೆರಲು ರೆಡಿಯಾಗಿದೆ.

ಲೋಕಲ್ ಟ್ರೈನ್ ಸಿನಿಮಾವನ್ನು ಸುಬ್ರಾಯ ವಾಳ್ಕೆ ನಿರ್ಮಾಣ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣಗೆ ಈ ಸಿನಿಮಾದಲ್ಲಿ ಎಸ್ತರ್ ನರೋನಾ ಹಾಗೂ ಮೀನಾಕ್ಷಿ ದೀಕ್ಷಿತ್ ಇಬ್ಬರು ನಾಯಕಿಯರು. ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದು, ಹಾಡುಗಳು ಸಿನಿಮಾದಲ್ಲಿ ಪ್ರಮುಖ ಹೈಲೈಟ್ ಆಗಿದೆ. ಸಾಧುಕೋಕಿಲ, ಭಜರಂಗಿ ಲೋಕಿ, ಹಾಗೂ ಟೆನ್ನಿಸ್ ಕೃಷ್ಣ ಚಿತ್ರದಲ್ಲಿ ಕಾಮಿಡಿ ಪಾತ್ರಗಳನ್ನು ಅಭಿನಯಿಸುತ್ತಿರುವುದು ಮತ್ತೊಂದು ಹೈಲೈಟ್. ಕೊರೊನಾದಿಂದ ಇಷ್ಟು ದಿನ ಸೈಲೆಂಟ್ ಆಗಿದ್ದ ಲೋಕಲ್ ಟ್ರೈನ್ ಕೋರೋನಾ ಭಾರತಕ್ಕೆ ಕಾಲಿಡುವುದಕ್ಕೂ ಮುನ್ನವೇ ಈ ಸಿನೆಮಾ ಸೆಟ್ಟೇರಿತ್ತು. ಕೊರೋನಾ ಭಾರತಕ್ಕೆ ಲಗ್ಗೆ ಇಟ್ಟ ಬಳಿಕ ಸಿನಿಮಾದ ಚಿತ್ರೀಕರಣ ಸ್ವಲ್ಪ ನಿಧಾನವಾಗಿ ಸಾಗಿತ್ತು.

ಕೋವಿಡ್ ನಿಯಮಾವಳಿಗಳಿಂದ ಚಿತ್ರೀಕರಣ ನಡೆಯದೇ ಹೋದ ಕಾರಣ, ಚಿತ್ರೀಕರಣದ ಕೆಲಸಗಳು ಸ್ವಲ್ಪ ನಿಧಾನವಾಗಿ ಸಾಗಿದವು. ಈಗ ಕೋರೋಣ ಆತಂಕ ಸ್ವಲ್ಪ ಕಡಿಮೆಯಾಗಿರುವುದರಿಂದ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿ ನಿಂತಿದೆ. ಇದೇ ಏಪ್ರಿಲ್ 1 ರಂದು ಎಲ್ಲಾ ಥಿಯೇಟರ್ ಗಳಿಗೆ ಲೋಕಲ್ ಟ್ರೈನ್ ಬರಲು ಸಜ್ಜಾಗಿದೆ. ಈಗಾಗಲೇ ನಟ ಡಾರ್ಲಿಂಗ್ ಕೃಷ್ಣ ಅವರು ಈ ಚಿತ್ರದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ತನ್ನ ಶೀರ್ಷಿಕೆಯಿಂದ ಎಲ್ಲರ ಕುತೂಹಲಕ್ಕೆ ಕಾರಣವಾದ ಲೋಕಲ್ ಟ್ರೈನ್ ನಲ್ಲಿ ನಡೆಯೋ ಕಥೆಯೇ ಈ ಸಿನಿಮಾದ ಕಥೆ. ಲೋಕಲ್ ಟ್ರೈನ್ ನ ಪರಿಚಯ ಎಲ್ಲರಿಗೂ ಇದ್ದೇ ಇರುತ್ತದೆ.

ಟ್ರೈನಿನಲ್ಲಿ ಪ್ರಯಾಣ ಮಾಡುವುದು ಒಂದು ಸುಂದರವಾದ ಅನುಭವ. ಅದೇ ಇನ್ನೊಂದು ಕಡೆ ಕೆಲಸಕ್ಕೆ, ವ್ಯಾಪಾರಕ್ಕೆ ಹೀಗೆ ಬೇರೆ ಬೇರೆ ಉದ್ದೇಶಕ್ಕೆ ಪ್ರತಿದಿನ ರೈಲಿನಲ್ಲಿ ಜನರು ಪ್ರಯಾಣ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಲೋಕಲ್ ಟ್ರೈನ್ ಬಹುತೇಕ ಸಾಮಾನ್ಯ ಜನರ ಜೀವನದ ಒಂದು ಭಾಗವಾಗಿರುತ್ತದೆ. ಈ ಸಿನಿಮಾದ ಕಥೆ ಕೂಡ ರೈಲಿನಲ್ಲಿಯೇ ಆರಂಭವಾಗಿ ರೈಲಿನಲ್ಲಿಯೇ ಸಾಗುತ್ತದೆ. ಹೀಗಾಗಿ ಲೋಕಲ್ ಟ್ರೈನ್ ಸಿನಿ ವೀಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅನಿಸಿಕೆ.

%d bloggers like this: