ಗಿಣಿರಾಮ ಧಾರಾವಾಹಿಯಲ್ಲಿ ಹೊಸ ಪಾತ್ರದ ಆಗಮನ

ಧಾರಾವಾಹಿಗಳು ಇತ್ತೀಚಿನ ಜನರ ಜೀವನದ ಒಂದು ಭಾಗವಾಗಿದೆ. ಧಾರಾವಾಹಿಗಳನ್ನು ವೀಕ್ಷಿಸದೇ ಗೃಹಿಣಿಯರ ದಿನವಂತೂ ಸಂಪೂರ್ಣವಾಗುವುದಿಲ್ಲ. ಅದರಲ್ಲೂ ಇತ್ತೀಚಿನ ಧಾರಾವಾಹಿಗಳು ಕೂಡ ಹಲವಾರು ಟ್ವಿಸ್ಟ್ ಹಾಗೂ ರೋಚಕ ಕಥೆಗಳೊಂದಿಗೆ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗುತ್ತವೆ. ಉತ್ತಮ ಕಥೆ, ನಿರ್ದೇಶನ, ರೋಮ್ಯಾಂಟಿಕ್ ಸೀನುಗಳು ಎಲ್ಲವೂ ಧಾರಾವಾಹಿಗಳಲ್ಲಿ ನೋಡಲು ಸಿಗುತ್ತವೆ. ಇದಲ್ಲದೆ ಧಾರಾವಾಹಿಗಳು ದಿನನಿತ್ಯದ ಜೀವನಕ್ಕೆ ಅತಿಬೇಗ ಕನ್ನೆಕ್ಟ್ ಆಗುವುದರಿಂದ ಧಾರಾವಾಹಿಗಳನ್ನು ಎಲ್ಲರೂ ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚೆಗೆ ಧಾರಾವಾಹಿಗಳಲ್ಲಿ ಹೊಸ ಹೊಸ ಟ್ವಿಸ್ಟ್ ಗಳು ಬರುತ್ತಲೇ ಇವೆ. ನಾ ಮುಂದು ತಾ ಮುಂದು ಎಂದು ಎಲ್ಲ ಸೀರಿಯಲ್ ಗಳು ತಮ್ಮ ಕಥೆಗಳಿಗೆ ರೋಚಕ ತಿರುವುಗಳನ್ನು ಕೊಡುತ್ತಿದ್ದಾರೆ.

ಸದ್ಯ ಕಿರುತೆರೆಯ ಜಗತ್ತಿನಲ್ಲಿ ಕಲರ್ಸ್ ಕನ್ನಡ ವಾಹಿನಿ ಹಾಗೂ ಜೀ ಕನ್ನಡ ವಾಹಿನಿಗಳು ಟಾಪ್ ನಲ್ಲಿವೆ. ಇವೆರಡೂ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಅತಿ ಹೆಚ್ಚು ಜನರು ವೀಕ್ಷಿಸುತ್ತಾರೆ. ಪ್ರತಿ ಬಾರಿ ಟಿ ಆರ್ ಪಿ ನಲ್ಲಿ ಯಾವ ಸೀರಿಯಲ್ ಮುಂದೆ ಓಡುತ್ತದೆ ಎಂಬ ರೇಸ್ ನಲ್ಲಿ, ಈ ಎರಡು ವಾಹಿನಿಯ ಧಾರವಾಹಿಗಳೇ ಅತಿ ಹೆಚ್ಚು ಸ್ಪರ್ಧೆ ನೀಡುತ್ತವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಉತ್ತರ ಕರ್ನಾಟಕದ ಭಾಷೆ ಹಾಗೂ ಸಂಸ್ಕೃತಿಯನ್ನು ಒಳಗೊಂಡ ಧಾರಾವಾಹಿಯೊಂದು ಪ್ರಸಾರವಾಗುತ್ತಿದೆ. ಹೌದು ಗಿಣಿರಾಮ ಧಾರಾವಾಹಿಯಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನು ಬಳಸಿಕೊಂಡು ಕಥೆ ಹೆಣೆಯಲಾಗಿದೆ.

ಈ ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರವನ್ನು ಎಲ್ಲ ಜನರು ಮೆಚ್ಚಿಕೊಂಡಿದ್ದಾರೆ. ಈ ಕಥೆಯಲ್ಲಿ ಬರುವ ಶಿವರಾಮ ಹಾಗೂ ಮಹತಿ ಜೋಡಿ ಅಂತೂ ಎಲ್ಲರ ಫೇವರೆಟ್. ಶಿವ ಹಾಗೂ ಮಹತಿ ಜೋಡಿ ಮದುವೆಯಾಗಿದ್ದರೂ ಕೂಡ ಒಬ್ಬರನ್ನೊಬ್ಬರು ಗಂಡ ಹೆಂಡತಿಯಾಗಿ ಸ್ವೀಕರಿಸುವುದಿಲ್ಲ. ತುಂಬಾ ಅಸಹಾಯಕ ಸ್ಥಿತಿಯಲ್ಲಿ ಈ ಜೋಡಿ ಇಷ್ಟವಿಲ್ಲದಿದ್ದರೂ ಕೂಡ ಮದುವೆಯಾಗಿರುತ್ತಾರೆ. ಏಕೆಂದರೆ ಶಿವ ಹಾಗೂ ಮಹತಿ ಬೇರೆಯವರನ್ನು ಪ್ರೀತಿಸುತ್ತಿರುತ್ತಾರೆ. ಆದರೆ ವಿಧಿ ಈ ಜೋಡಿಯನ್ನು ಒಂದು ಮಾಡಿರುತ್ತದೆ. ದಿನಗಳು ಕಳೆದಂತೆ ಶಿವ ಹಾಗೂ ಮಹತಿಯಲ್ಲಿ ಬದಲಾವಣೆಗಳು ಉಂಟಾಗಿ ಇವರಿಬ್ಬರು ಪರಸ್ಪರ ಪ್ರೀತಿಸುವ ಹಂತಕ್ಕೆ ತಲುಪುತ್ತಾರೆ. ಇನ್ನೇನು ಇವರಿಬ್ಬರು ಒಂದಾಗಬೇಕು ಅನ್ನುವಷ್ಟರಲ್ಲಿ ಈ ಕತೆಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಬರುತ್ತದೆ. ಹೌದು ಮಹತಿ ಮುಂಚೆ ಗೌರವ್ ಎಂಬ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ ಆದರೆ ಅವನು ಸತ್ತು ಹೋಗಿದ್ದಾನೆ ಎಂದುಕೊಂಡು ಶಿವನನ್ನು ಮದುವೆಯಾಗಿರುತ್ತಾಳೆ.

ಮನಸಾರೆ ಇಷ್ಟವಿಲ್ಲದಿದ್ದರೂ ಶಿವನ ಜೊತೆ ಹೆಂಡತಿಯಾಗಿ ಇಷ್ಟು ದಿನ ಬದುಕುತ್ತಿರುವ ಮಹತಿ ಜೀವನದಲ್ಲಿ ನಿಜವಾಗಿಯೂ ಶಿವನ ಮೇಲೆ ಪ್ರೀತಿ ಉಂಟಾಗಿ ಅವನನ್ನೇ ಗಂಡ ಎಂದು ಭಾವಿಸುವ ಹೊತ್ತಿಗೆ ಗೌರವ್ ಹುಚ್ಚನ ರೂಪದಲ್ಲಿ ಮಹತಿ ಮುಂದೆ ಪ್ರತ್ಯಕ್ಷನಾಗುತ್ತಾನೆ. ಹಾಗಾದರೆ ಮಹತಿ ಈಗ ಯಾರನ್ನು ಸ್ವೀಕರಿಸುತ್ತಾಳೆ ಎಂಬುದು ಸದ್ಯಕ್ಕೆ ಎಲ್ಲರ ಕುತೂಹಲ. ಇನ್ನು ಗೌರವ್ ಆಗಿ ಈ ಕಥೆಯಲ್ಲಿ ಹೊಸ ಎಂಟ್ರಿ ಪಡೆಯುತ್ತಿರುವ ನಟ ರಾಕಿ ಗೌಡ. ಈಗಾಗಲೇ ವರಲಕ್ಷ್ಮಿ ಸ್ಟೋರ್ ಮತ್ತು ಹಿಟ್ಲರ್ ಕಲ್ಯಾಣದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ನಟ ಸಾಕಷ್ಟು ಅನುಭವ ಹೊಂದಿರುವ ಪ್ರತಿಭೆ. ಒಟ್ಟಿನಲ್ಲಿ ಗಿಣಿರಾಮನ ಸೀರಿಯಲ್ ಸದ್ಯಕ್ಕೆ ಹಲವಾರು ಟ್ವಿಸ್ಟಗಳಿಂದ ತನ್ನ ಅಭಿಮಾನಿಗಳನ್ನು ರಂಜಿಸುತ್ತಿದೆ.

%d bloggers like this: