ಗಿಣಿರಾಮ ಧಾರಾವಾಹಿ ಅಂತ್ಯದ ಬಗ್ಗೆ ಸ್ವತಃ ಧಾರಾವಾಹಿಯ ನಾಯಕ ಕೊಟ್ರು ಸ್ಪಷ್ಟನೆ

ಕನ್ನಡ ಕಿರುತೆರೆಯ ಅನೇಕ ಧಾರಾವಾಹಿಗಳು ಕೆಲವು ಕಾರಾಣಾಂತರಗಳಿಂದ ಅರ್ಧದಲ್ಲೇ ಸ್ಥಗಿತವಾಗುತ್ತಿವೆ. ಬಹು ಮುಖ್ಯವಾಗಿ ಉತ್ತಮವಾಗಿ ವೀಕ್ಷಕರಿಗೆ ಮನ ರಂಜನೆ ನೀಡುತ್ತಾ ಅಪಾರ ಜನಪ್ರಿಯತೆ ಪಡೆದು ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದಂತಹ ಧಾರಾವಾಹಿಗಳು ದಿಢೀರ್ ಅಂತ್ಯ ಕಾಣುವುದು ಆಯಾ ಧಾರಾವಾಹಿಗಳ ಅಭಿಮಾನಿಗಳು ಭಾರಿ ಬೇಸರವಾಗುತ್ತಿದ್ದರು. ಅದೇ ರೀತಿಯಾಗಿ ಇದೀಗ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಗಿಣಿರಾಮ ಕೂಡ ಅಂತ್ಯ ಕಾಣಲಿದೆ ಎಂಬ ಸುದ್ದಿ ಭಾರಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿದೆ. ಹೌದು ಕನ್ನಡ ಕಿರುತೆರೆಯ ಜನಪ್ರಿಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕರ್ನಾಟಕ ಭಾಷೆ ಸೊಗಡಿನ ಕಥೆವುಳ್ಳ ಗಿಣಿರಾಮ ಧಾರಾವಾಹಿ ಹೊಸ ಹೊಸ ತಿರುವುಗಳನ್ನ ಪಡೆಯುವ ಮೂಲಕ ನಾಡಿನಾದ್ಯಂತ ಅಪಾರ ಜನ ಮೆಚ್ಚುಗೆ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿದೆ.

ಇತ್ತೀಚೆಗೆ ತಾನೇ 250 ಸಂಚಿಕೆಗಳನ್ನ ಪೂರೈಸಿ ಸಂಭ್ರಮಚಾರಣೆಯನ್ನು ಕೂಡ ಗಿಣಿರಾಮ ಧಾರಾವಾಹಿ ತಂಡ ಆಚರಣೆ ಮಾಡಿಕೊಂಡಿತು‌. ಗಿಣಿ ರಾಮ ಧಾರಾವಾಹಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನ ಅತ್ಯಂತ ಸಹಜವಾಗಿ ಬಳಸಿಕೊಳ್ಳುವುದರ ಜತೆಗೆ ಅಲ್ಲಿನ ಸ್ಥಳೀಯ ಸಂಪ್ರಾದಾಯವನ್ನು ಸೊಗಸಾಗಿ ನಿರೂಪಣೆ ಮಾಡುತ್ತಿದ್ದಾರೆ ನಿರ್ದೇಶಕರಾದ ನಿರ್ದೇಶಕ ಆರ್.ಪ್ರೀತಮ್ ಶೆಟ್ಟಿ. ಇತ್ತೀಚಿನ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿಗಳ ಪೈಕಿ ಗಿಣಿರಾಮ ಮೊದಲ ಸಾಲಿನಲ್ಲಿ ನಿಲುತ್ತದೆ. ಅದರ ಟಿ.ಆರ್.ಪಿ ಕೂಡ ಅಷ್ಟೇ ಉತ್ತಮವಾಗಿ ಸಿಗುತ್ತಿದೆ. ಗಿಣಿರಾಮ ಧಾರಾವಾಹಿಯ ಕಥಾ ನಾಯಕನಾಗಿ ನಟ ರಿತ್ವಿಕ್ ಮಠದ್ ಮತ್ತು ಕಥಾ ನಾಯಕಿಯಾಗಿ ನಟಿ ನಯನಾ ನಾಗರಾಜ್ ಅಭಿನಯಿಸುತ್ತಿದ್ದಾರೆ.

ಗಿಣಿ ರಾಮ ಧಾರಾವಾಹಿ ಉತ್ತಮವಾಗಿ ಸಾಗುತ್ತಿರುವ ನಡುವೆ ಗಾಳಿಸುದ್ದಿಯೊಂದು ಹೊರ ಬಿದ್ದಿದೆ. ಅದೇನಪ್ಪಾ ಅಂದರೆ ಗಿಣಿರಾಮ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ ಎಂದು‌. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಭಾರಿ ವೈರಲ್ ಆಗಿದೆ. ಇದಕ್ಕೆ ಸ್ಪಷ್ಟನೆಯಾಗಿ ನಟ ರಿತ್ವಿಕ್ ಅವರು ಗಿಣಿ ರಾಮ ಧಾರಾವಾಹಿ ಅಂತ್ಯ ಕಾಣಲಿದೆ ಎಂಬ ಸುದ್ದಿ ಸುಳ್ಳಿನ ವಿಚಾರ. ಗಿಣಿ ರಾಮ ಧಾರಾವಾಹಿ ತಂಡ ಯಾವುದೇ ರೀತಿಯಾಗಿ ಈ ರೀತಿಯ ಆಲೋಚನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೊಸ ಹೊಸ ರೋಚಕತೆಯೊಂದಿಗೆ ನಿಮ್ಮನ್ನ ರಂಜಿಸಲಿದ್ದೇವೆ ನೀವು ನಮಗೆ ಇದುವರೆಗೆ ನೀಡಿದ ಪ್ರೀತಿ ಪ್ರೋತ್ಸಾಹ ಹೀಗೆ ಮುಂದೆಯೂ ಇರಲಿ ಎಂದು ತಿಳಿಸಿದ್ದಾರೆ.

%d bloggers like this: