ಗೋವಾ ಮುಖ್ಯಮಂತ್ರಿ ಜೊತೆಗೆ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಅವರು

ಪತ್ನಿ ರಾಧಿಕಾ ಪಂಡಿತ್ ಜೊತೆಗೂಡಿ ರಾಕಿಂಗ್ ಸ್ಟಾರ್ ಯಶ್ ಅವರು ಗೋವಾದ ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಕೊಂಚ ಆರಾಮದಾಯಕವಾಗಿ ತಮ್ಮ ಮಕ್ಕಳು ಮತ್ತು ಪತ್ನಿಯೊಟ್ಟಿಗೆ ಗೋವಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಯಶ್ ಅವರು ತಮ್ಮ ಕುಟುಂಬವನ್ನು ಬಿಟ್ಟು ದೇಶಾದ್ಯಂತ ಹಲವೆಡೆ ಕೆಜಿಎಫ್ ಚಾಪ್ಟರ್2 ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ಸಖತ್ ಬಿಝಿ಼ ಆಗಿದ್ದರು. ಅದಾದ ನಂತರ ಕೆಜಿಎಫ್2 ಸಿನಿಮಾ ಅದ್ದೂರಿಯಾಗಿ ವರ್ಲ್ಡ್ ವೈಡ್ ರಿಲೀಸ್ ಆಗಿ ಎಲ್ಲಾ ಕಡೆ ನಿರೀಕ್ಷೆಗೆ ಮೀರಿ ಅಭೂತಪೂರ್ವ ರೆಸ್ಪಾನ್ಸ್ ಪಡೆದುಕೊಂಡಿದೆ. ಚಿತ್ರ ನೋಡಿದ ಸಿನಿ ಪ್ರೇಕ್ಷಕರು ಕೆಜಿಎಫ್2 ಚಿತ್ರಕ್ಕೆ ಫಿದಾ ಆಗಿದ್ದಾರೆ. ಕೆಜಿಎಫ್ ಪಾರ್ಟ್ ಒನ್ ಗಿಂತ ಪಾರ್ಟ್ ಇನ್ನೂ ಅದ್ಭುತವಾಗಿದೆ ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ವಿಶ್ವದೆಲ್ಲೆಡೆ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಇನ್ನು ಕೆಜಿಎಫ್2 ಸಿನಿಮಾ ಬರೋಬ್ಬರಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದೆ. ಕೆಜಿಎಫ್2 ಚಿತ್ರ ಸಾವಿರ ಕೋಟಿ ಗಳಿಕೆ ಮಾಡಿರುವುದು ಕನ್ನಡ ಸಿನಿಮಾ ರಂಗದ ಹೊಸ ಮೈಲಿಗಲ್ಲು ಅಂತಾನೇ ಹೇಳಬಹುದು. ಕೆಜಿಎಫ್2 ಸಿನಿಮಾ ಇಷ್ಟೆಲ್ಲಾ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ತಮ್ಮ ನಟನೆಯ ಕೆಜಿಎಫ್2 ಸಿನಿಮಾ ಸೂಪರ್ ಸಕ್ಸಸ್ ಕಂಡ ಕಾರಣ ನಟ ಯಶ್ ಅವರು ಸಖತ್ ಖುಷಿ ಅಲ್ಲಿದ್ದಾರೆ. ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ಯಶ್ ಕುಟುಂಬ ಸಮೇತ ಗೋವಾದ ಕಡಲತೀರದಲ್ಲಿ ಸಕ್ಸಸ್ ಪಾರ್ಟಿ ಕೂಡ ಮಾಡಿದ್ರು. ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಇನ್ನು ನಟ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಇಬ್ಬರು ಗೋವಾದಲ್ಲೇ ಇದ್ದು ಕೊಂಚ ಅಲ್ಲೇ ಸಮಯ ಕಳೆಯುತ್ತಿದ್ದಾರೆ.

ಇದರ ನಡುವೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳಿಬ್ಬರು ಭೇಟಿ ಮಾಡಿ ಒಂದಷ್ಟು ಕಾಲ ಸೌಜನ್ಯದ ಮಾತುಕತೆ ನಡೆಸಿದ್ದಾರೆ. ಗೋವಾದ ಸಿ.ಎಂ ಪ್ರಮೋದ್ ಸಾವಂತ್ ಅವರು ಈ ಪೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಂತೆ ನಟಿ ರಾಧಿಕಾ ಪಂಡಿತ್ ಅವರು ಕೂಡ ಈ ಫೋಟೊವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅಚ್ಚರಿಯ ಬೆಳವಣಿಗೆ ಅಂದರೆ ಗೋವಾದಲ್ಲಿ ಯಶ್ ಅವರ ಜೊತೆ ಕೆ.ವಿ.ಎನ್ ಪ್ರೊಡಕ್ಷನ್ ಸಂಸ್ಥೆಯ ಮಾಲೀಕರಾದ ವೆಂಕಟ್ ಕೊಣಂಕಿ ಅವರು ಕಾಣಿಸಿಕೊಂಡಿದ್ದಾರೆ. ಇದು ಹೊಸ ಪ್ರಾಜೆಕ್ಟ್ ಮಾಡುವ ಆಲೋಚನೆ ಇರಬಹುದು ಎಂಬುದು ಒಂದಷ್ಟು ಜನರ ಅಭಿಪ್ರಾಯ ಆಗಿದೆ.

%d bloggers like this: