ಹಿಂದಿ ಚಿತ್ರರಂಗದ ಖ್ಯಾತ ನಟಿ ಮೌನಿರಾಯ್ ಬಿಂದಾಸ್ ಬ್ಯಾಚ್ಯೂಲರ್ ಪಾರ್ಟಿ ಮಾಡುವ ಮೂಲಕ ಬಿ-ಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಹೌದು ಬಾಲಿವುಡ್ ನ ಅನೇಕ ಯುವ ನಟ-ನಟಿಯರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇತ್ತೀಚೆಗೆ ಮದುವೆಗೆ ಮುನ್ನ ತಮ್ಮ ಅಂತಿಮ ಕ್ಷಣದ ಸಿಂಗಲ್ ಲೈಫ್ ಅಂದರೆ ಬ್ಯಾಚ್ಯೂಲರ್ ಲೈಫ್ ಅನ್ನು ತಮ್ಮ ಆಪ್ತ ಗೆಳೆಯರೊಟ್ಟಿಗೆ ಸಂಭ್ರಮಿಸಿ ಸಂತೋಷ ಪಡುತ್ತಾರೆ. ಅಂತೆಯೇ ಇದೀಗ ಬಾಲಿವುಡ್ ಬ್ಯೂಟಿಯಾದ ನಟಿ ಮೌನಿರಾಯ್ ಅವರು ತಮ್ಮ ಬಹುದಿನಗಳ ಗೆಳೆಯ ಸೂರಜ್ ಉದ್ಯಮಿ ನಂಬಿಯಾರ್ ಅವರ ಜೊತೆ ಸಪ್ತಪದಿ ತುಳಿಯಲು ಸಿದ್ದರಾಗಿದ್ದಾರೆ. ಹೌದು ಬಾಲಿವುಡ್ ನ ಮೌನಿರಾಯ್ ಅವರು ಕೇವಲ ನಟಿ ಮಾತ್ರ ಅಲ್ಲದೆ ಗಾಯಕಿ, ಕಥಕ್ ಡ್ಯಾನ್ಸರ್, ಮಾಡೆಲ್ ಕೂಡ ಹೌದು.

2007 ರಲ್ಲಿ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟರು. ಮೌನಿರಾಯ್ ಇತ್ತೀಚೆಗಷ್ಟೇ ತಾನೇ ಆಲಿಯಾ ಭಟ್ ಟ್ವೀಟ್ ಮಾಡಿದಂತಹ ಬ್ರಹ್ಮಾಸ್ತ್ರ ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ. ಈ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣ್ ಬೀರ್ ಕಪೂರ್, ಅಮಿತಾಬ್ ಬಚ್ಚನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಮೌನಿರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಅವರ ವಿವಾಹ ಕಾರ್ಯಕ್ರಮವು ಮುಂದಿನ 2022 ನೇ ವರ್ಷದ ಜನವರಿ 26 ರಂದು ಆರತಕ್ಷತೆ ನಡೆಯಲಿದ್ದು 27 ರಂದು ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆಯುತ್ತಿದ್ದಾರೆ.



ಇನ್ನ ಇವರಿಬ್ಬರ ಆರತಕ್ಷತೆ ಕಾರ್ಯಕ್ರಮ ಕೂಚ್ ಬಿಹಾರದಲ್ಲಿಯೂ ಕೂಡ ನಡೆಯಲಿದೆಯಂತೆ. ಹೀಗಾಗಿ ನಟಿ ಮೌನಿರಾಯ್ ಅವರು ಮದುವೆಗೆ ಮುನ್ನ ತಮ್ಮ ಆಪ್ತ ಸ್ನೇಹಿತೆರೊಟ್ಟಿಗೆ ಗೋವಾ ಬೀಚ್ ನಲ್ಲಿ ಬ್ಯಾಚುಲರ್ ಪಾರ್ಟಿ ಮಾಡಿ ಮಸ್ತ್ ಮಜಾ ಮಾಡಿದ್ದಾರೆ. ಈ ಫೋಟೋವನ್ನು ನಟಿ ಮೌನಿರಾಯ್ ಅವರ ಗೆಳತಿ ಆಗಿರುವ ನಟಿ ಆಶ್ಕಾ ಗೊರಾಡಿಯಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.