ಗೋವಾದ ಅಂತಾರಾಷ್ಟ್ರೀಯ ಸಿನಿಮಾ ಹಬ್ಬಕ್ಕೆ ಚಾಲನೆ ನೀಡುತ್ತಿದ್ದಾರೆ ಕನ್ನಡದ ಖ್ಯಾತ ನಟ

ಜನವರಿ 16ರಿಂದ ಗೋವಾದ ಪಣಜಿಯಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಈ ಬಾರಿ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಚಾಲನೆಗೊಳಿಸುತ್ತಿರುವುದು ವಿಶೇಷವಾಗಿದೆ. ಈ ಚಲನಚಿತ್ರೋತ್ಸವದ ಉದ್ಘಟನಾ ಸಮಾರಂಭ ಪಣಜಿಯ ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಗೋವಾ ಚಿತ್ರೋತ್ಸವ ಇಂದಿನಿಂದ 12 ದಿನಗಳ ಕಾಲ ನಡೆಯಲಿದ್ದು, ಜನವರಿ 24ರಂದು ಸಮಾರೋಪಗೊಳ್ಳಲಿದೆ. ಇನ್ನು ಈ ಗೋವಾ ಸಿನಿಮಾ ಉತ್ಸವಕ್ಕೆ ಕೇಂದ್ರ ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬರೋಬ್ಬರಿ 60 ದೇಶಗಳ ಸಿನಿಮಾಗಳು ಭಾಗವಹಿಸಲಿವೆ. ಇನ್ನು ನಾಲ್ಕು ಅಡಿಟೋರೀಯಂಗಳಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ, ಈ ಚಿತ್ರೋತ್ಸವದಲ್ಲಿ ಅಮೇರಿಕಾ, ಬ್ರಿಟನ್, ಬಾಂಗ್ಲಾದೇಶ, ಇರಾನ್, ಕೆನಡಾ, ಜರ್ಮನಿ, ಫ್ರಾನ್ಸ್, ಇಟಿಲಿ ಸೇರಿದಂತೆ ವಿಶ್ವದ 60 ದೇಶಗಳ ಚಿತ್ರಗಳು ಪ್ರದರ್ಶನವಾಗಲಿದೆ. ಈ ಬಾರಿ ವಿಶೇಷವಾಗಿ ಗೋವಾ ಚಲನ ಚಿತ್ರೋತ್ಸವವನ್ನು ಓಟಿಟಿ ವೇದಿಕೆ ಮುಖಾಂತರ ವೀಕ್ಷಿಸಬಹುದಾಗಿದೆ.

%d bloggers like this: