ಗುಜರಾತ್ ಸರ್ದಾರ್ ವಲ್ಲಭಾಯ್ ಪ್ರತಿಮೆಯಿಂದ ಬರುವ ಆದಾಯ ಎಷ್ಟು ಗೊತ್ತೇ

2018ರಲ್ಲಿ ನಮ್ಮ ದೇಶ ಒಂದು ವಿಶೇಷ ಕ್ಷಣಕೆ ಸಾಕ್ಷಿಯಾಯಿತು. ಹೌದು 2018 ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಮೂರ್ತಿ ಅನಾವರಣವಾಯಿತು. ಬರೋಬ್ಬರಿ ಒಂದು 182 ಮೀಟರ್ ಎತ್ತರವಿರುವ ಈ ಪ್ರತಿಮೆ ದೇಶದ ಏಕತಾ ಮೂರ್ತಿ ಎಂದೇ ಹೆಸರುವಾಸಿಯಾಯಿತು. ಗುಜರಾತ್ ಜಿಲ್ಲೆಯ ಕೆವಾಡಿಯ ಗ್ರಾಮದಲ್ಲಿ ನರ್ಮದಾ ನದಿಯ ದಂಡೆಯ ಮೇಲೆ ಈ ಮೂರ್ತಿ ತಲೆಯೆತ್ತಿ ನಿಂತಿದೆ. ಅಂದಿನಿಂದ ಇದು ನಮ್ಮ ದೇಶದ ಪ್ರಸಿದ್ಧ ಪ್ರವಾಸೋದ್ಯಮ ತಾಣಗಳಲ್ಲಿ ಒಂದೆನಿಸಿದೆ. ಸ್ವಾತಂತ್ರದ ನಂತರ ಹರಿದು ಹಂಚಿಹೋಗಿದ್ದ ನಮ್ಮ ದೇಶದ ವಿವಿಧ ಭಾಗಗಳನ್ನು ಒಟ್ಟುಗೂಡಿಸಿದ ಮಹಾನ್ ಚೇತನ ಗಾಂಧಿವಾದಿ ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಿದ ದಿನ ಅದು. ಆದರೆ ವಿಪರ್ಯಾಸದ ಸಂಗತಿಯೆಂದರೆ ಈ ಏಕತಾ ಮೂರ್ತಿಯ ಪ್ರವಾಸೋದ್ಯಮದಿಂದ ಬಂದ ಹಣ ಈಗ ಭ್ರಷ್ಟಾಚಾರಕ್ಕೆ ಎಲ್ಲೆಡೆ ಸುದ್ದಿಯಾಗಿದೆ. ಹೌದು ಇಡೀ ವಿಶ್ವದಲ್ಲಿಯೇ ಅತಿ ಎತ್ತರವಾದ ಈ ಪ್ರತಿಮೆಯನ್ನು ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಬಹಳ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದರಿಂದ ಸಂಗ್ರಹಿಸಲಾದ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಈಗ ದುರ್ಬಳಕೆ ಮಾಡಿಕೊಂಡ ಅಪರಾಧ ಕೇಳಿಬರುತ್ತಿದೆ.

ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 5 ಕೋಟಿ 24 ಲಕ್ಷ ರೂಪಾಯಿ ಪ್ರವಾಸೋದ್ಯಮದಿಂದ ಸಂಗ್ರಹವಾಗಿದ್ದು ಇದರಲ್ಲಿ ಐದು ಕೋಟಿ ಗುಳುಂ ಆಗಿದೆ. ಇದರ ಆಡಳಿತ ಮಂಡಳಿಯು ವಡೋದರ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದು ಅದಕ್ಕೆ ಇಲ್ಲಿಯವರೆಗೆ ಯಾವ ಒಂದು ರೂಪಾಯಿ ಕೂಡ ಜಮಾ ಆಗಿಲ್ಲವಂತೆ. ಎಲ್ಲ ಹಣವನ್ನು ಏಜೆನ್ಸಿ ಸದಸ್ಯರು ನುಂಗಿ ನೀರು ಕುಡಿದಿದ್ದಾರೆ ಎನ್ನಲಾಗುತ್ತಿದೆ, ಹೀಗಾಗಿ ಎಲ್ಲ ಸದಸ್ಯರ ವಿರುದ್ಧ ಈಗ ಕೆವಾಡಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಖಂಡ ಭಾರತವನ್ನು ಒಗ್ಗೂಡಿಸಿದ ಪಟೇಲರನ್ನು ಇದು ಅವಮಾನಿಸಿದಂತೆ ಆಗಿದ್ದು, ದೇಶವೇ ನಾಚಿಕೆ ಪಡುವಂತಹ ಸಂಗತಿಯಾಗಿದೆ. ಈ ಪ್ರತಿಮೆಯನ್ನು ನೋಡಲು ವರ್ಷಕ್ಕೆ ಸುಮಾರು 30ಲಕ್ಷ ಜನ ಬರುತ್ತಾರೆ ಎಂದು ಗುಜರಾತ್ ರಾಜ್ಯದ ಪ್ರವಾಸ ಇಲಾಖೆ ಹೇಳಿದೆ, ವರ್ಷಕ್ಕೆ 85ಕೋಟಿ ಹಣವನ್ನು ಈ ಪ್ರತಿಮೆಯನ್ನು ನೋಡಲು ಪ್ರವಾಸಿಗರಿಂದ ಸಂಗ್ರಹವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ ಹಾಗು ಕಳೆದ ಎಂಟು ತಿಂಗಳಲ್ಲಿ ಐವತ್ತು ಕೋಟಿ ಹಣ ಸಂಗ್ರಹವಾಗುತ್ತದೆ ಎಂದು ತಿಳಿಸಿದ್ದಾರೆ.

%d bloggers like this: