ಕನ್ನಡದ ಈ ಜನಪ್ರಿಯ ಧಾರಾವಾಹಿ ಇದೀಗ ಗುಜರಾತಿ ಭಾಷೆಗೆ ಡಬ್ ಆಗುವ ಮೂಲಕ ಹೊಸದೊಂದು ದಾಖಲೆಗೆ ಸಾಕ್ಷಿಯಾಗುತ್ತಿದೆ. ಹೌದು ಕಳೆದೆರಡು ವರ್ಷಗಳಿಂದ ಕನ್ನಡ ಕಿರುತೆರೆ ಯಾರೂ ಕೂಡ ನಿರೀಕ್ಷೆ ಮಾಡಲಾದಷ್ಟು ಬದಲಾವಣೆ ಕಂಡಿದೆ. ಕನ್ನಡ ಚಿತ್ರರಂಗ ಒಂದು ದಿಕ್ಕಿನಲ್ಲಿ ಸಾಗಿದರೆ, ಕನ್ನಡ ಕಿರುತೆರೆ ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿದೆ. ಇಂದು ಕನ್ನಡದ ಧಾರಾವಾಹಿಗಳು ಪರಭಾಷೆಗೆ ಡಬ್ ಆಗುತ್ತಿರುವುದು ನಿಜಕ್ಕೂ ಕೂಡ ಕನ್ನಡರಿಗೆ ಹೆಮ್ಮೆಯ ವಿಷಯ ಅಂತ ಹೇಳಬಹುದು. ನಮ್ಮ ನೆಲದ ಕಥೆ ಇನ್ನಿತರ ರಾಜ್ಯಗಳಲ್ಲಿ ವಿವಿಧ ಭಾಷೆಗಳಲ್ಲಿ ನಿರೂಪಿತವಾಗುವುದು ಒಂದು ರೀತಿಯಾಗಿ ಸಂತಸದ ವಿಚಾರ. ಇನ್ನು ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳೇ ಪರಭಾಷೆಗೆ ಡಬ್ ಆಗುತ್ತಿವೆ. ಅವುಗಳ ಸಾಲಿಗೆ ಇದೀಗ ಮತ್ತೊಂದು ಜನಪ್ರಿಯ ಧಾರಾವಾಹಿ ಕೂಡ ಸೇರ್ಪಡೆಗೊಳ್ಳುತ್ತಿದೆ.

ಇದರಲ್ಲಿ ವಿಶೇಷ ಅಂದರೆ ಈ ಜನಪ್ರಿಯ ಧಾರಾವಾಹಿಯು ನೆರೆ ಭಾಷೆಯಲ್ಲಿ ಡಬ್ ಆಗುವುದಕ್ಕಿಂತ ಗುಜರಾತಿ ಭಾಷೆಯಲ್ಲಿ ಡಬ್ ಆಗಲು ಸಿದ್ದವಾಗುತ್ತಿದೆ. ಆ ಸೀರಿಯಲ್ ಯಾವುದು ಅಂದ್ರೆ ನೀವು ನಿಜಕ್ಕೂ ಕೂಡ ಅಚ್ಚರಿ ವ್ಯಕ್ತಪಡಿಸುತ್ತೀರಿ. ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಜನಪ್ರಿಯ ಧಾರಾವಾಹಿ ನಮ್ಮನೆ ಯುವರಾಣಿ ಸೀರಿಯಲ್ ಇದೀಗ ಗುಜರಾತಿ ಭಾಷೆಗೆ ಡಬ್ ಆಗಲು ಸಿದ್ದಗೊಳ್ಳುತ್ತಿದೆ. ಈಗಾಗಲೇ ಕಲರ್ಸ್ ಗುಜರಾತಿ ವಾಹಿನಿಯಲ್ಲಿ ನಮ್ಮನೆ ಯುವರಾಣಿ ಧಾರಾವಾಸಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಗುಜರಾತಿನಲ್ಲಿ ನಮ್ಮನೆ ಯುವರಾಣಿ ಧಾರಾವಾಹಿಯ ಪ್ರೋಮೋ ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಇನ್ನು ಈ ನಮ್ಮನೆ ಯುವರಾಣಿ ಧಾರಾವಾಹಿಯು 2019 ರಲ್ಲಿ ಟೆಲಿಕಾಸ್ಟ್ ಆಗಿದ್ದು, ಇಲ್ಲಿಯವರೆಗೆ ಉತ್ತಮವಾಗಿ ಸಾಗುತ್ತಾ ಬಂದಿದೆ.



ಮಿಲನ ಚಿತ್ರದ ನಿರ್ದೆಶಕ ಪ್ರಕಾಶ್ ಅವರು ನಮ್ಮನೆ ಯುವರಾಣಿ ಧಾರಾವಾಹಿಗೆ ಬಂಡವಾಳ ಹೂಡಿದ್ದಾರೆ. ಕಲಾವಿದರಾದ ರಘು ಎನ್, ದೀಪಕ್ ಗೌಡ, ಕಾವ್ಯ ಮಹದೇವ್, ಅಂಕಿತಾ ಅಮರ್ ಅವರು ತಮ್ಮ ಪಾತ್ರ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮೀರಾ ಪಾತ್ರ ನಾಡಿನ ಮನೆ ಮನಗಳಲ್ಲಿ ಹೆಸರು ಮಾಡಿದೆ. ಇದೀಗ ಈ ಧಾರಾವಾಹಿಯು ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಿದಂತೆ ಗುಜರಾತಿ ಕಿರುತೆರೆ ವೀಕ್ಷಕರಿಗೂ ಕೂಡ ಮನರಂಜನೆ ನೀಡಲು ಮುಂದಾಗುತ್ತಿದೆ. ಒಟ್ಟಾರೆಯಾಗಿ ಕನ್ನಡದ ನಮ್ಮನೆ ಯುವರಾಣಿ ಧಾರಾವಾಹಿಯು ಗುಜರಾತಿನಲ್ಲಿ ಮಿಂಚಲು ಸಜ್ಜಾಗಿದ್ದು, ಎಷ್ಟರ ಮಟ್ಟಿಗೆ ಗುಜರಾತಿ ವೀಕ್ಷಕರ ಮನ ಗೆಲ್ಲುತ್ತದೆ ಎಂಬುದನ್ನ ಮುಂದಿನ ದಿನಮಾನಗಳಲ್ಲಿ ಕಾದು ನೋಡಬೇಕಾಗಿದೆ.