ಹಲವಾರು ಸಮಸ್ಯೆಗಳಿಗೆ ಮನೆಮದ್ದು ಈ ಹಣ್ಣು

ನಮ್ಮ ಸುತ್ತ ಮುತ್ತ ಇರುವ ಎಷ್ಟೋ ಗಿಡ, ಮರ, ಹಣ್ಣು ತರಕಾರಿಗಳಲ್ಲಿ ಔಷಧಿಯ ಅಂಶಗಳು ಇರುತ್ತವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಸಹ ನಾವು ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ಹಿತ್ತಲ ಗಿಡ ಮದ್ದಲ್ಲ ಎಂಬ ಭ್ರಮಾಲೋಕದಲ್ಲಿದ್ದು ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗುತ್ತೇವೆ. ಹೌದು ಹಾಗದರೆ ನಮ್ಮ ದಿನನಿತ್ಯ ಜೀವನದಲ್ಲಿ ನಾವು ಮಾಡುವಂತಹ ತಪ್ಪುಗಳು ಯಾವುವು ಎಂದಾದರೆ ಕೆಲವರು ಡಯಟ್ ಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುತ್ತಾರೆ. ಆರೋಗ್ಯದ ದೃಷ್ಠಿಯಿಂದ ಇದು ಒಳ್ಳೆಯದು ಆದರೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದು ಅಪಾಯಕಾರಿ ಎನ್ನುತ್ತಾರೆ ವೈದ್ಯರು, ಹೌದು ಈ ಹಣ್ಣುಗಳಲ್ಲಿ ಸಿಟ್ರೆಕ್ ಅಂಶಗಳು ಇರುವುದರಿಂದ ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತವೆ.

ರಾತ್ರಿಯ ಊಟವಾದ ಬಳಿಕ ಸುಮಾರು 8 ರಿಂದ 9ತಾಸು ಮಲಗಿರುತ್ತೇವೆ. ತದನಂತರ ಜೀರ್ಣವಾಗಿರುವ ಖಾಲಿ ಹೊಟ್ಟೆಗೆ ತಕ್ಷಣ ಸಿಟ್ರೆಕ್ ಅಂಶ ಒಳಗೊಂಡಿರುವ ಹಣ್ಣುಗಳನ್ನು ಸೇವಿಸಬಾರದು. ಅದರ ಬದಲು ಬೆಳಿಗ್ಗೆ ಮಿಥ ಆಹಾರ ಸೇವಿಸಿದ ನಂತರ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ, ಇನ್ನು ನಿಮ್ಮ ಸುಕ್ಕುಗಟ್ಟಿದ,ಮುಪ್ಪಿಗೆ ಹೊರಳಿದಂತೆ ಕಾಣುತ್ತಿದ್ದರೆ ಹಿಪ್ಪು ನೇರಳೆಯ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಿಪ್ಪು ನೇರಳೆಯು ಕೇವಲ ಚರ್ಮದ ಸಮಸ್ಯೆಗಳಿಗೆ ರಾಮಬಾಣ ಆಗುವುದಲ್ಲದೆ ನಿಮ್ಮ ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತ ಗೊಳಿಸುತ್ತದೆ.

ಇನ್ನು ಕ್ಯಾರೇಟ್, ಎಲೆಕೋಸು, ಸೌತೆಕಾಯಿಗಳನ್ನು ಮಿಶ್ರಣ ಮಾಡಿಕೊಂಡು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಇದಕ್ಕೆ ಕೊಂಚ ಅರಿಶಿನ ಪುಡಿ ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮಂದವಾಗಿರುವ ನಿಮ್ಮ ಮುಖವು ಕಾಂತಿಯುತವಾಗಿ ಹೊಳೆಯುತ್ತದೆ. ಮನುಷ್ಯನಿಗೆ ವಯಸ್ಸಾದಂತೆ ಮುಪ್ಪು ಆವರಿಸಿ ಮರೆಗುಳಿ ಸಮಸ್ಯೆ ಕಾಡುತ್ತದೆ. ಇದಕ್ಕೆ ಪರಿಹಾರವಾಗಿ ಹಿಪ್ಪುನೇರಳೆ ಸೇವನೆ ಉತ್ತಮ ಫಲಿತಾಂಶ ನೀಡುತ್ತದೆ. ಮತ್ತು ನಿಮ್ಮ ಜ್ಞಾಪಕಶಕ್ತಿಯನ್ನು ವೃದ್ದಿಸುತ್ತದೆ ಎಂದು ಆಯುರ್ವೇದ ಪಂಡಿತರು ತಿಳಿಸುತ್ತಾರೆ.

%d bloggers like this: