ಹಲವಾರು ವರ್ಷಗಳ ನಂತರ ಮತ್ತೆ ಕನ್ನಡ ಕಿರುತೆರೆಗೆ ಮರಳಿದ ಸುಪ್ರಸಿದ್ಧ ಕಿರುತೆರೆ ನಟಿ

ಕಿರುತೆರೆಗೆ ಮತ್ತೆ ಮರಳಿದ ಸಮಾಜ ಸೇವಕಿ ಲಲಿತಾಂಬ, ಸಮಾಜ ಸೇವಕಿ ಲಲಿತಾಂಬ ಅಂದಾಕ್ಷಣ ಕಿರುತೆರೆ ವೀಕ್ಷಕರಿಗೆ ಥಟ್ಟನೆ ನೆನಪಾಗುವುದು ಸಿಲ್ಲಿಲಲ್ಲಿ ಧಾರಾವಾಹಿ. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಅಂತಹ ಹಾಸ್ಯ ಧಾರಾವಾಹಿ ಸಿಲ್ಲಿ ಲಲ್ಲಿ ಯಲ್ಲಿ ಸಮಾಜ ಸೇವಕಿ ಲಲಿತಾಂಬ ಪಾತ್ರದ ಮೂಲಕ ನಾಡಿನ ಮನೆ ಮನೆ ಮಾತಾದ ನಟಿ ಮಂಜು ಭಾಷಿಣಿ ಹಲವು ವರ್ಷಗಳ ನಂತರ ಪುನಃ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಭೂಮಿಗೀತ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ನಟಿ ಮಂಜು ಭಾಷಿಣಿ ಶಿವರಾಜ್ ಕುಮಾರ್ ನಟನೆಯ ಅಮ್ಮಾವ್ರ ಗಂಡ, ಗಂಡ ಹೆಂಡತಿ, ರಾಜ್ ದಿ ಶೋ ಮ್ಯಾನ್, ಸುಗ್ರೀವ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.

ಟಿ.ಎನ್ ಸೀತಾರಾಮ್ ಅವರ ಮಾಯಾಮೃಗ, ವಿಜಯ್ ಪ್ರಸಾದ್ ಅವರ ಹಾಸ್ಯ ಪ್ರಧಾನ ಸಿಲ್ಲಿ ಲಲ್ಲಿ ಸೀರಿಯಲ್ ನಲ್ಲಿ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಈ ಧಾರಾವಾಹಿಗಳು ಮುಕ್ತಾಯಗೊಂಡ ಬಳಿಕ ಅವಕಾಶಗಳಿಂದ ಕೊಂಚ ದೂರವಾದ ನಟಿ ಮಂಜು ಭಾಷಿಣಿ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಸಿಲ್ಲಿ ಲಲ್ಲಿ ತಂಡದ ಜೊತಗೆ ತಮ್ಮದೇಯಾದ ಯೂಟ್ಯೂಬ್ ಚಾನೇಲ್ ನಲ್ಲಿ ಸಣ್ಣ ಪುಟ್ಟ ಹಾಸ್ಯ ಕಂಟೆಂಟ್ ವೀಡಿಯೋ ಕೂಡ ಮಾಡುತ್ತಿದ್ದರು.

ಇದೀಗ ಪುಟ್ಟಕ್ಕನ ಮಕ್ಕಳು ಎಂಬ ಹೊಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೌದು ಜೋಡಿಹಕ್ಕಿ, ಜೊತೆ ಜೊತೆಯಲಿ ಅಂತಹ ಯಶಸ್ವಿ ಧಾರಾವಾಹಿಗಳ ನಿರ್ದೇಶಕ ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿ ಮಂಜು ಭಾಷಿಣಿ ಬಡ್ಡಿ ಬಂಗಾರಮ್ಮ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಖ್ಯಾತ ನಟಿ ಉಮಾಶ್ರೀ ಅವರು ಪುಟ್ಟಕ್ಕ ಎಂಬ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಟಿ ಮಂಜು ಭಾಷಿಣಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಥಾನಾಯಕನ ತಾಯಿ ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಇಷ್ಟು ದಿನಗಳ ಕಾಲ ಧಾರಾವಾಹಿ ಮತ್ತು ಸಿನಿಮಾದಿಂದ ದೂರ ಉಳಿಯಲು ತಮ್ಮ ಪತಿಯ ಕಂಪನಿಯ ಕೆಲಸದ ನಿಮಿತ್ತ ಹೊರ ದೇಶಗಳಿಗೆ ಹೋಗಬೇಕಾಗಿತ್ತಂತೆ. ಸದ್ಯಕ್ಕೆ ಇದೀಗ ಕೋವಿಡ್ ಪರಿಣಾಮ ಹೊರ ದೇಶದ ಎಲ್ಲಾ ಕೆಲಸ ಕಾರ್ಯಗಳನ್ನ ಇಲ್ಲೇ ಮಾಡಬಹುದಾಗಿರುವುದರಿಂದ ಇನ್ಮುಂದೆ ಬಣ್ಣ ಹಚ್ಚುತ್ತೇನೆ ಎಂದಿದ್ದಾರೆ. ಜೊತೆಗೆ ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

%d bloggers like this: