ಕೆಲವೊಂದು ಸಣ್ಣ ಸಣ್ಣ ಸಮಸ್ಯೆಗಳು ಧಿಡೀರನೇ ಅನುಭವಿಸಲಾಗದಷ್ಟು ನೋವನ್ನು ಉಂಟು ಮಾಡುತ್ತವೆ. ಅದರಲ್ಲೂ ಈ ಹಲ್ಲುನೋವು ಬಂದಾಗ ಕೆಲವೊಮ್ಮೆ ದವಡೆ ಸಹ ಊದಿಕೊಳ್ಳಬಹುದು ಇದಕ್ಕೆ ಕೆಲವರು ಸಾಮನ್ಯವಾಗಿ ಆಸ್ಪತ್ರೆಗಳಿಗೆ ಹೋಗುವುದುಂಟು, ಆದರೆ ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿಯೇ ಪರಿಹಾರೋಪಾಯಗಳು ಇರುತ್ತವೆ. ಈ ಹಲ್ಲು ನೋವು ಕಾಣಿಸಿಕೊಂಡಾಗ ನೀವು ಮಾಡಬೇಕಾದ್ದು ಇಷ್ಟೆ, ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ಒಂದೆರಡು ಚಮಚ ಉಪ್ಪುಹಾಕಿ ಬಿಟ್ಟು ತದನಂತರ ತುಸು ಬಿಸಿ ಆರಿದಮೇಲೆ ಆ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಮೇಲ್ಭ್ಭಾಗ ಮತ್ತು ಕೆಳ ಭಾಗವನ್ನು ಸಂಪೂರ್ಣವಾಗಿ ಸ್ವಚ್ಚವಾಗುವುದರ ಜೊತೆಗೆ ಹಲ್ಲಿನ ಒಳಭಾಗದಲ್ಲಿರುವ ಉಳುಕಗಳ ಸಮಸ್ಯೆಯು ಕೂಡ ನಿವಾರಣೆ ಆಗುತ್ತದೆ.

ಈ ಹಲ್ಲುನೋವು ಕೆಲವೊಮ್ಮೆ ವಿಪರೀತವಾಗಿ ಕಾಣಿಸಿಕೊಂಡರಂತೂ ತಿನ್ನುವ ಮಾತು ಅಷ್ಟೇ ದೂರ, ಬಾಯಿಗೆ ಒಂದು ತುತ್ತು ಇಡಲು ಪರಿತಪಿಸಬೇಕಾಗುತ್ತದೆ. ಬಾಯಿಯೂ ತೆರೆಯದಂತೆ ಸಂಪೂರ್ಣವಾಗಿ ದವಡೆ ಊದಿಕೊಳ್ಳುತ್ತದೆ, ಇದಕ್ಕೆ ಪರಿಹಾರವಾಗಿ ಎಕ್ಕಗಿಡದ ಹಾಲು ಪ್ರಯೋಜನಕಾರಿಗೆ ಬರುತ್ತದೆ, ಈ ಎಕ್ಕೆಹಾಲಿನ ಜೊತೆಗೆ ಒಂದಷ್ಟು ಉಪ್ಪು ಬೆರೆಸಿ ಕುಡಿಯುವುದರಿಂದ ಹಲ್ಲಿನ ನೋವಿನ ಸಂಧರ್ಭದಲ್ಲಿ ದವಡೆ ಊದಿಕೊಳ್ಳುವುದನ್ನು ತಡೆಯಬಹುದು. ಈ ಹಲ್ಲು ನೋವಿಗೆ ಮತ್ತೊಂದು ಪರಿಹಾರ ಅಂದರೆ ಲವಂಗದ ಎಣ್ಣೆ, ಗಂಧವನ್ನು ತೇಯ್ದು ಹತ್ತಿಯ ಜೊತೆಗೆ ಸೇರಿಸಿ ಉಂಡೆಯಾಗಿಸಿಕೊಂಡು ನೋವಿನ ಭಾಗದಲ್ಲಿ ಇರಿಸಿಕೊಂಡರೆ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.



ಹಾಗೆ ಪೇರಳೆ ಗಿಡದ ಚಿಗುರು ಎಲೆಯನ್ನು ಅರೆದು ಕಷಾಯಮಾಡಿಕೊಂಡು, ತುಳಸಿ ಎಲೆಯನ್ನು ಸಹ ಇದೇ ರೀತಿ ಕಾಳು ಮೆಣಸಿನ ಜೊತೆಗೆ ಸೇರಿಸಿ ಹಲ್ಲು ನೋವಿನ ಮೇಲ್ಭಾಗದಲ್ಲಿ ಹತ್ತು ನಿಮಿಷಗಳ ಕಾಲ
ಒತ್ತಿಡಿಯಬೇಕು. ಹಲ್ಲುನೋವುಕಾಣಿಸಿಕೊಂಡಾಗ ಆಸ್ಪತ್ರೆಯ ಕಡೆ ಹೋಗುವುದಕ್ಕಿಂತ ಈ ರೀತಿಯಾದಂತಹ ಪರಿಹಾರಗಳನ್ನು ಮನೆಯಲ್ಲಿಯೇ ಮಾಡಬಹುದಾಗಿದೆ, ಹಿರಿಯರು ಹಿಂದೆಲ್ಲಾ ಇಂತಹ ಮನೆಮದ್ದನ್ನು ತಯಾರಿಸಿಕೊಳ್ಳುತ್ತಿದ್ದರು ಎಂದು ಆಯುರ್ವೇದ ವೈದ್ಯರು ಸಲಹೆ ನೀಡುತ್ತಾರೆ.