ಹಲ್ಲು ನೋವು ಹಾಗು ಬಾಯಿಯ ದುರ್ವಾಸನೆಗೆ 2 ನಿಮಿಷದಲ್ಲೆ ಮನೆಮದ್ದು

ಕೆಲವೊಮ್ಮೆ ಬರುವ ಈ ಹಲ್ಲುನೋವು ವ್ಯಕ್ತಿಯ ಪ್ರಾಣ ಹೋಗುವ ಹಾಗೇ ನೋವನ್ನುಂಟು ಮಾಡುತ್ತದೆ, ಈ ಹಲ್ಲು ನೋವು ಬಂದಾಗ ವೈದ್ಯರ ಬಳಿ ಹೋಗುವಂತಹ ಸಮಸ್ಯೆಯು ಅಲ್ಲ ಇನ್ನೊಂದೆಡೆ ಸುಲಭವಾಗಿ ತಡೆದುಕೊಳ್ಳುವ ನೋವು ಅಲ್ಲ ಒಂದು ರೀತಿಯ ವಿಪ್ರಮಸ್ಥಿತಿಗೆ ತಂದು ಬಿಡುತ್ತದೆ ಈ ಹಲ್ಲುನೋವು. ಅಂದಹಾಗೆ ಈ ಹಲ್ಲುನೋವಿನ ನಿವಾರಣೆಗೆ ಮನೆಯಲ್ಲಿಯೇ ಚಿಕಿತ್ಸೆ ಮಾಡಿಕೊಳ್ಳಬಹುದಾಗಿದೆ. ಒಂದು ಲೋಟಕ್ಕೆ ಕನಿಷ್ಟ ಮಟ್ಟದ ನೀರನ್ನು ಹಾಕಿ ಅದರೊಳಗೆ ಪಟಿಕವನ್ನು ಬೆರೆಸಬೇಕು. ಈ ಪಟಿಕ ಯಾವುದೇ ರೀತಿಯ ಅಡ್ಡಪರಿಣಾಮ ಬೀರುವುದಿಲ್ಲ ಇದು ನಿಮ್ಮ ಹತ್ತಿರದ ಮೆಡಿಕಲ್ ಸ್ಟೋರ್ ಗಳಲ್ಲಿಯೂ ದೊರುಕುತ್ತದೆ.

ನೀರಿನೊಂದಿಗೆ ಮಿಶ್ರಣಮಾಡಿದ ಪಟಿಕ ನೀರನ್ನು ಒಂದೆರಡು ನಿಮಿಷಗಳ ಕಾಲ ಬಿಟ್ಟು ತದನಂತರ ಆ ನೀರನ್ನು ಬಾಯಲ್ಲಿ ಎರಡು ಮೂರು ಭಾರಿ ಮುಕ್ಕಳಿಸಬೇಕು. ಈ ರೀತಿಯಾಗಿ ಪಟಿಕ ನೀರನ್ನು ಮುಕ್ಕಳಿಸುವುದರಿಂದ ಹಲ್ಲುನೋವಿನ ಸಮಸ್ಯೆಯನ್ನು ನಿಯಂತ್ರಣ ಮಾಡಬಹುದಾಗಿದೆ. ಕೇವಲ ಹಲ್ಲುನೋವಿಗೆ ಈ ಪಟಿಕ ರಾಮಭಾಣವಲ್ಲ ಬಾಯಿಯ ದುರ್ವಾಸನೆಗೂ ಇದು ಉಪಕಾರಿಯಾಗಿದೆ. ಹತ್ತು ದಿನಗಳಿಗೊಮ್ಮೆ ಈ ಪಟಿಕ ನೀರನ್ನು ಬಳಸುವುದರಿಂದ ಬಾಯಿಯ ದುರ್ಗಂಧವನ್ನು ಹೋಗಲಾಡಿಸಬಹುದಾಗಿದೆ.

%d bloggers like this: