ಹಣಕಾಸಿನ ಸಮಸ್ಯೆಗೆ ಮನೆಯಲ್ಲಿಯೇ ಈ ಸಣ್ಣ ಕೆಲಸವನ್ನು ಮಾಡಿ ಪರಿಹಾರ ಸಿಗುವುದು

ಮನುಷ್ಯನಿಗೆ ಸಮಸ್ಯೆಗಳು ಸರ್ವೆಸಾಮಾನ್ಯ ಆದರೆ ಆ ಸಮಸ್ಯೆಗಳು ಮುಕ್ತಿ ಹೊಂದದೆ ನಿಮಗೆ ಹಣಕಾಸು ಸಮಸ್ಯೆಯು ನಿರಂತರವಾಗಿ ಭಾದಿಸುತ್ತಿದೆ ಅಂದಾದರೆ ಈಶ್ವರ ಸ್ವರೂಪವಾಗಿರುವ ತೆಂಗಿನ ಕಾಯಿಯಿಂದ ಶಿವನನ್ನು ಪೂಜಿಸಿದರೆ ನಿಮ್ಮ ಎಲ್ಲಾ ಸಂಕಷ್ಠಗಳು ನಿವಾರಣೆ ಆಗುತ್ತವೆ. ಕೆಲವರಿಗೆ ಹಣಕಾಸು ಸ್ಥಿತಿ ತೀರ ಹದಗೆಟ್ಟು ಜೀವನವೇ ಸಾಕು ಎನ್ನುವಷ್ಟು ಜಿಗುಪ್ಸೆ ಹೊಂದಿರುತ್ತಾರೆ. ಅಂತಹವರು ಹಣಕಾಸಿನ ಸಮಸ್ಯೆ ಪರಿಹಾರಕ್ಕಾಗಿ ಈ ಒಂದು ವಿಧಾನವನ್ನು ಪ್ರತಿ ಶನಿವಾರ ಬೆಳಿಗ್ಗೆ ಶ್ರದ್ದಾಭಕ್ತಿಯಿಂದ ಅನುಸರಿಸಿದರೆ ಆದಷ್ಟು ಶೀಘ್ರವಾಗಿ ಹಣಕಾಸು ಸಮಸ್ಯೆಗಳಿಂದ ಮುಕ್ತಿಗೊಳ್ಳಬಹುದು.

ನೀವು ನಿಮ್ಮ ಅನುಸರಿಸಬೇಕಾದ ವಿಧಾನ ಒಂದು ತೆಂಗಿನ ಕಾಯಿಯನ್ನು ಅದರ ನಾರು ಅಂದರೆ ಈಶ್ವರನ ಜಡೆಯ ಸ್ವರೂಪವಾಗಿರುವರ ತೆಂಗಿನ ನಾರನ್ನು ಶುಭ್ರಗೊಳಿಸಿ ನಿಮ್ಮ ಮನೆಯಲ್ಲಿರುವ ಕೆಂಪು ವಸ್ತ್ರ ಅಥವಾ ಕೆಂಪುದಾರವನ್ನು ತೆಗೆದುಕೊಂಡು ತೆಂಗಿನಕಾಯಿಯ ಮಧ್ಯಭಾಗಕ್ಕೆ ಸುತ್ತಬೇಕು. ತದನಂತರ ಒಂದು ಮುಷ್ಠಿಯಷ್ಟು ಕುಂಕುಮವನ್ನು ತೆಗೆದುಕೊಂಡು ನೀರಿನೊಂದಿಗೆ ಮೃದುವಾಗಿ ಮಿಶ್ರಣಮಾಡಿ ಇದನ್ನು ತೆಂಗಿನಕಾಯಿಯ ಮೇಲೆ ನಿಮ್ಮ ಬಲಗೈಯ ಮಧ್ಯ ಬೆರಳಿನಿಂದ ಸ್ವಸ್ತಿಕ್ ಅಕ್ಷರವನ್ನು ಬರೆಯಬೇಕು. ಸ್ವಸ್ತಿಕ್ ಬರೆದ ಆ ತೆಂಗಿನ ಕಾಯಿಯನ್ನು ನಿಮ್ಮ ದೇವರ ಕೋಣೆಯಲ್ಲಿಟ್ಟು ಪ್ರತಿ ಶನಿವಾರ ಪೂಜಿಸಬೇಕು.

cof

ಪೂಜಿಸಿದ ಬಳಿಕ ಅಂದೇ ಸಾಯಂಕಾಲದ ಸಮಯದಲ್ಲಿ ಅದೇ ತೆಂಗಿನಕಾಯಿಯನ್ನು ತೆಗೆದುಕೊಂಡು ಹರಿಯುವ ನೀರಿನಲ್ಲಿ ಅಥವಾ ಯಾರೂ ಇಲ್ಲದೆ ಜಾಗದಲ್ಲಿರುವ ಅರಳಿಮರಕ್ಕೆ ಅಥವಾ ಆಲದ ಮರದ ಬುಡಕ್ಕೆ ಇಟ್ಟು ನಮಸ್ಕರಿಸಿ ಬರಬೇಕು. ಇಲ್ಲಿಂದ ಮನೆಗೆ ನೇರವಾಗಿ ಬಂದಮೇಲೆ ಸ್ನಾನ ಮಾಡಿ ಒಂದು ಮುಷ್ಠಿಯಷ್ಟು ಸಾಸುವೆಯನ್ನು ನಿಮ್ಮ ಮನೆಯ ಮುಂಭಾಗದಲ್ಲಿ ಚೆಲ್ಲಿದ ನಂತರ ನೀವು ಮನೆಯ ಪ್ರವೇಶ ಪಡೆದು ದೇವರಿಗೆ ತುಪ್ಪದ ದೀಪ ಹಚ್ಚಿ ಈಶ್ವರನ ಸಂಕಲ್ಪ ಮಾಡಿಕೊಳ್ಳಬೇಕು. ಈ ವಿಧಾನವನ್ನು ನೀವು ಕನಿಷ್ಟ ನಾಲ್ಕು ವಾರಗಳ ಕಾಲ ಶ್ರದ್ದಾ ಭಕ್ತಿಯಿಂದ ಅನುಸರಿಸಿ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯೊಂದು ಕಂಡು ಬರುತ್ತದೆ, ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗಿ ಹಣಕಾಸಿನ ಸಮಸ್ಯೆ ಪರಿಹಾರ ವಾಗುತ್ತದೆ. ನೀವು ಆರ್ಥಿಕವಾಗಿ ಪ್ರಗತಿ ಕಾಣುತ್ತೀರಿ ಎಂದು ಹಿರಿಯ ಪಂಡಿತರು ತಿಳಿಸುತ್ತಾರೆ.

%d bloggers like this: