ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವಂತಹ ಹಣ್ಣುಗಳು ಆಹಾರ ಪದಾರ್ಥಗಳ ಜೊತೆಗೆ ಅವುಗಳಲ್ಲಿ ಬೆರೆತಿರುವ ರಾಸಾಯನಿಕಗಳು ಕೂಡ ನಮ್ಮ ದೇಹವನ್ನು ಸೇರುತ್ತವೆ. ಇವುಗಳು ನಮ್ಮ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮವನ್ನು ಬೀರುತ್ತವೆ. ಅದೇ ರೀತಿ ನೀವು ಸರ್ವೇಸಾಮಾನ್ಯವಾಗಿ ಹಣ್ಣುಗಳ ಮೇಲೆ ಸ್ಟಿಕ್ಕರ್ಗಳನ್ನು ಅಂಟಿಸಿರುವುದನ್ನು ನೋಡಿರುತ್ತೀರಿ. ಅವುಗಳ ಮೇಲೆ ಬರೆದಿರುವಂತಹ ಅಂಕಿಗಳು ಏನನ್ನು ಸೂಚಿಸುತ್ತವೆ ಎಂದು ನೀವು ತಿಳಿದುಕೊಳ್ಳಲೇಬೇಕು. ಆ ಸ್ಟಿಕರ್ಗಳ ಮೇಲೆ ನಾಲ್ಕು ಅಂಕಿಗಳಿದ್ದು ಅದು ಮೂರು ಅಥವಾ ನಾಲ್ಕರಿಂದ ಪ್ರಾರಂಭ ಆಗಿದ್ದರೆ ಆ ಹಣ್ಣನ್ನು ಸ್ವಲ್ಪಮಟ್ಟಿಗೆ ಅಂಗೀಕೃತ ರಾಸಾಯನಿಕಗಳನ್ನು ಬಳಸಿ ಸಹಜ ಸ್ಥಿತಿಯಿಂದ ಬೆಳೆದಿದ್ದಾರೆ ಎಂಬ ಅರ್ಥ.
ಈ ತರಹದ ಹಣ್ಣುಗಳು ಸೇವಿಸಲು ಯೋಗ್ಯ. ಇವು ನಮ್ಮ ಆರೋಗ್ಯದ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಇನ್ನು ಆ ಸ್ಟಿಕರ್ ಗಳ ಮೇಲೆ 5 ಅಂಕಿಗಳು ಇದ್ದು ಅದು ಒಂಬತ್ತರಿಂದ ಪ್ರಾರಂಭವಾಗಿದ್ದರೆ ಆ ತರಹದ ಹಣ್ಣುಗಳನ್ನು ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಬೆಳೆದಿರುತ್ತಾರೆ ಎಂಬ ಅರ್ಥ ನೀಡುತ್ತದೆ. ಈ ತರಹದ ಹಣ್ಣುಗಳು ದೇಹಕ್ಕೆ ಯಾವುದೇ ರೀತಿಯಾದಂತಹ ತೊಂದರೆಗಳನ್ನು ಮಾಡದೆ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಒಂದು ವೇಳೆ ಹಣ್ಣುಗಳ ಮೇಲೆ ಹಾಕಿರುವಂತಹ ಸ್ಟಿಕ್ಕರ್ ನಲ್ಲಿ 5 ಅಂಕಿಗಳಿದ್ದು ಅದು ಎಂಟರಿಂದ ಪ್ರಾರಂಭವಾಗಿದ್ದರೆ ಹೆಚ್ಚು ರಾಸಾಯನಿಕಗಳನ್ನು ಸಿಂಪಡಿಸಿ ಬೆಳೆದಿರುವಂತಹ ಹಣ್ಣುಗಳು ಎಂಬ ಅರ್ಥವನ್ನು ಹೇಳುತ್ತದೆ. ಈ ಹಣ್ಣುಗಳ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಎಲ್ಲರೂ ಹೇಳುವಂತೆ ಹಣ್ಣುಗಳು ನಮ್ಮ ದೇಹಕ್ಕೆ ಅವಶ್ಯಕ ಆದರೆ ಅವುಗಳ ಸೇವನೆಗೆ ಮೊದಲು ಈ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅದಕ್ಕಿಂತ ಅವಶ್ಯಕವಾಗಿದೆ.