ಶ್ರೀರಾಮ ಪರಮಭಕ್ತ, ಯುವಕರ ನೆಚ್ಚಿನ ಪ್ರಿಯ ದೇವರಾಗಿರುವ ಆಂಜನೇಯ ಸ್ವಾಮಿಯನ್ನು ನೆನೆಯುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ನಿಮ್ಮ ಆಸೆ, ಆಕಾಂಕ್ಷೆಗಳು ಸಿದ್ದಿಸುತ್ತವೆ. ಆದರೆ ಕೇವಲ ಹನುಮನ ದರ್ಶನ ಪಡೆದು ನಿಮ್ಮ ಕೋರಿಕೆ ಇಟ್ಟು ನಡೆದರೆ ಯಾವುದೇ ರೀತಿಯ ಫಲ ದೊರೆಯುವುದಿಲ್ಲ. ಹನುಮಂತನ ದೇವಸ್ಥಾನಕ್ಕೆ ಹೋದಾಗ ತಪ್ಪದೇ ಈ ಒಂದು ಕೆಲಸವನ್ನು ನೀವು ಮಾಡಿದರೆ ನಿಮ್ಮ ಏಳು ಜನ್ಮಗಳ ಪುಣ್ಯ, ಅದೃಷ್ಟ ನಿಮ್ಮದಾಗುತ್ತದೆ. ಆಂಜನೇಯಸ್ವಾಮಿಯ ದೇವಾಲಯ ಕ್ಕೆ ಹೋದಾಗ ಈ ಒಂದು ಮಂತ್ರವನ್ನು ಪಠಿಸುವುದರಿಂದ ಸಾಕ್ಷಾತ್, ಶ್ರೀ ರಾಮ ಹಾಗೂ ಆಂಜನೇಯಸ್ವಾಮಿಯ ಅನುಗ್ರಹವಾಗಿ ನಿಮ್ಮ ಸಕಲ ಸಮಸ್ಯೆಗಳು ದೂರವಾಗುತ್ತವೆ.

ಈ ಒಂದು ಮಂತ್ರ ಪಠಿಸುವುದರಿಂದ ನಿಮ್ಮ ಪ್ರತಿಯೊಂದು ಕೆಲಸಕಾರ್ಯದಲ್ಲಿಯೂ ಶ್ರೀರಾಮ ಮತ್ತು ಹನುಮನ ಅನುಗ್ರಹ ಇರುತ್ತದೆ. ನೀವು ಆಂಜನೇಯಸ್ವಾಮಿಯ ಗುಡಿಗೆ ಹೋದಾಗ ಈ ತಂತ್ರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾಗಿ, ನಿಮ್ಮ ಜೀವನ ಉನ್ನತ ಮಟ್ಟಕ್ಕೆ ಏರುತ್ತದೆ. ನಿಮ್ಮ ಇಷ್ಟಾರ್ಥ, ಕೋರಿಕೆ ಗಳೆಲ್ಲವೂ ನೆರವೇರುತ್ತದೆ. ಮನೆಯಲ್ಲಿರುವ ದಾಂಪತ್ಯ ಕಲಹ, ನಿರುದ್ಯೋಗದ ಸಮಸ್ಯೆ, ಯುವಕ ಯವತಿಯರಿಗೆ ಕಂಕಣ ಭಾಗ್ಯ ಇಲ್ಲದಿರುವುದು, ಆರ್ಥಿಕ ಸಮಸ್ಯೆ ಹೀಗೆ ಎಲ್ಲಾ ನಿಮ್ಮ ಸಕಲ ದಾರಿದ್ರ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೇವಲ ಆಂಜನೇಯ ಸ್ವಾಮಿಯನ್ನು ದರ್ಶನ ಮಾಡಿ ಭಕ್ತಿಯಿಂದ ಕೈ ಮುಗಿದು ಹೋದರೆ ಯಾವುದೇ ರೀತಿಯ ಫಲ ದೊರೆಯುವುದಿಲ್ಲ.

ನಿಮ್ಮ ಭಕ್ತಿ ಸಾಕ್ಷಾತ್ ಆಂಜನೇಯಸ್ವಾಮಿಗೆ ತಲುಪಬೇಕಾದರೆ ತಪ್ಪದೇ ನೀವು ಈ ಒಂದು ಕೆಲಸವನ್ನು ಮಾಡಬೇಕಾಗುತ್ತದೆ. ಹನುಮಂತನ ದೇವಸ್ಥಾನಕ್ಕೆ ಹೋದಾಗ ಹಲವರಿಗೆ ಏನು ಮಾಡಬೇಕು ಎಂದು ತಿಳಿದಿರುವುದಿಲ್ಲ. ದೇವಸ್ಥಾನ ಪ್ರವೇಶವಾಗುವ ಮುಂಚೆ ನಿಮ್ಮ ಪಾದವನ್ನು ಮೊದಲು ಸ್ವಚ್ಚಗೊಳಿಸಿ, ಬಹಳಷ್ಟು ಮಂದಿ ಪಾದರಕ್ಷೆ ಧರಿಸಿ ದೇವಾಲಯಕ್ಕೆ ಬರುತ್ತಾರೆ, ಪಾದರಕ್ಷೆ ಹೊರಗಡೆ ಬಿಟ್ಟು ನೇರವಾಗಿ ದೇವಸ್ಥಾನಕ್ಕೆ ಪ್ರವೇಶ ಮಾಡುತ್ತಾರೆ ಇದು ಪ್ರಸಕ್ತವಲ್ಲ, ಸೂಕ್ತವಲ್ಲದಾಗಿದೆ. ಮೊದಲು ಹೊರಗಡೆ ನೀರನ್ನು ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಂಡು ನಂತರ ಹನುಮನ ಗುಡಿಯನ್ನು ಪ್ರವೇಶಿಸಬೇಕು.

ನಂತರ ಗುಡಿಯನ್ನು ಒಂಭತ್ತು ಪ್ರದಕ್ಷಿಣೆ ಹಾಕಬೇಕು. ಪ್ರತಿ ಪ್ರದಕ್ಷಿಣೆಯ ನಂತರ ಹನುಮನನ್ನು ದರ್ಶನ ಮಾಡಿಕೊಂಡು, ಪ್ರತಿಬಾರಿ ಶ್ರೀರಾಮ ಶ್ರೀರಾಮ ಎಂದು 9ಬಾರಿ ಗುಡಿಯನ್ನುಪ್ರದಕ್ಷಿಣೆ ಹಾಕಬೇಕು. ನಂತರದಲ್ಲಿ ಆಂಜನೇಯ ಸ್ವಾಮಿಯನ್ನು ನಮಸ್ಕರಿಸಿ, ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತುಕೊಂಡು ಓಂ ಹ್ರೀಂ ಹರಿಮರ್ಕಟ ಮರ್ಕಟಾಯ ನಮಃ ಎಂಬ ಮಂತ್ರವನ್ನು ಮೂರು ಬಾರಿ ಪಠಿಸಬೇಕು. ಸಾಧ್ಯವಾದರೆ 21ಬಾರಿ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಎಲ್ಲಾ ಸಕಲ ಸಮಸ್ಯೆಗಳು ದೂರವಾಗಿ ಜೀವನದಲ್ಲಿ ಹೊಸ ಬದಲಾವಣೆ ಆಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನಿಮ್ಮದಾಗಿ ಸಮಾಜದಲ್ಲಿ ಸ್ಥಾನಮಾನ ಗೌರವ ಮನ್ನಣೆಗಳು ನಿಮ್ಮದಾಗುತ್ತದೆ.