ಕ್ರಿಕೆಟ್ ಟೀಮ್ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ 70ರ ದಶಕದ ಪ್ರಸಿದ್ದ ಕಾರೊಂದನ್ನ ಖರೀದಿ ಮಾಡಿದ್ದಾರೆ. ಕಾರ್ ಕ್ರೇಜ಼್ ಸಾಮಾನ್ಯರನ್ನೇ ಬಿಟ್ಟಿಲ್ಲ. ಇನ್ನು ಸೆಲೆಬ್ರಿಟಿಗಳನ್ನ ಬಿಡುತ್ತದೆಯೇ. ಇಲ್ಲ, ಅದರಲ್ಲಿಯೂ ಸಿನಿಮಾ ಮತ್ತು ಕ್ರಿಕೆಟ್ ಸೆಲೆಬ್ರಿಟಿಗಳೇ ಈ ಇಂಪೋರ್ಟೆಡ್ ಕಾರ್ ಗಳೆಂದರೆ ಬಹಳ ಅಚ್ಚು ಮೆಚ್ಚಾಗಿರುತ್ತದೆ. ಇತ್ತೀಚೆಗೆ ಕೆಲವು ದಿನಗಳಿಂಚೆಗೆ ಅನೇಕ ಸೆಲೆಬ್ರಿಟಿಗಳು ಹೊಚ್ಚ ಹೊಸ ದುಬಾರಿ ಬೆಲೆಯ ಕಾರ್ ಖರೀದಿ ಮಾಡುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಇದೀಗ ಕ್ಯಾಪ್ಟನ್ ಕೂಲ್ ಧೋನಿ ಕೂಡ ತಮ್ಮ ನೆಚ್ಚಿನ ವಿಶೇಷವಾದ ಹಳೆಯ ಕಾರೊಂದನ್ನ ಖರೀದಿ ಮಾಡಿದ್ದಾರೆ. ಹೌದು ಇತ್ತೀಚೆಗೆ ಬಿಗ್ ಬಾಯ್ಸ್ ಟಾಯ್ಸ್ ಕಂಪನಿಯು ಬರೋಬ್ಬರಿ ಹತ್ತೊಂಬತ್ತು ಮಾದರಿಯ ಕಾರುಗಳನ್ನ ಹರಾಜಿನಲ್ಲಿಡಲಾಗಿತ್ತು.

ಈ ಹರಾಜು ಪ್ರಕ್ರಿಯೆ ಆನ್ಲೈನ್ ನಲ್ಲಿ ನಡೆಸಲಾಗಿತ್ತು. ರೋಲ್ಸ್ ರಾಯ್, ಕ್ಯಾಡಿ ಲಾಕ್, ಮರ್ಸಿಡಿಸ್ ಬೆಂಝ್, ಆಸ್ಟಿನ್ ಮಾರ್ಟಿನ್ ಷೆವರ್ಲೆ ಮತ್ತು ಲ್ಯಾಂಡ್ ರೋವರ್ ಅಂತಹ ಪ್ರಸಿದ್ದ ಕಾರುಗಳಿದ್ದವು. ಇವುಗಳಲ್ಲಿ 1971ರ ಮಾಡೆಲ್ ನ ಲ್ಯಾಂಡ್ ರೋವರ್ ಸೀರಿಸ್3 ಸ್ಟೇಷನ್ ವ್ಯಾಗನ್ ಮಾದರಿಯ ಕಾರನ್ನ ಮಹೇಂದ್ರ ಸಿಂಗ್ ಧೋನಿ ಅವರು ದುಬಾರಿ ಬೆಲೆ ನೀಡಿ ಖರೀದಿ ಮಾಡಿದ್ದಾರೆ. ಧೋನಿ ಖರೀದಿಸಿರುವ ಐಷಾರಾಮಿ ವಿಂಟೇಜ್ ಕಾರು ಸೀರಿಸ್3 ಸ್ಟೇಷನ್ ವ್ಯಾಗನ್ ಮಾದರಿಯು ಲ್ಯಾಂಡ್ ರೋವರ್ ಕಂಪನಿ ನಿರ್ಮಾಣ ಮಾಡಿದ್ದಾಗಿದ್ದಾಗಿತ್ತು. ಈ ಕಾರು 70 ದಶಕದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ಇದರಲ್ಲಿ ನಾಲ್ಕು ಸಿಲಿಂಡರ್ ಆಧಾರಿತ 2.3 ಲೀಟರಿನ ಪೆಟ್ರೋಲ್ ಮತ್ತು 3.5 ಲೀಟರಿನ ಸಾಮರ್ಥ್ಯದ ವಿ8 ಇಂಜಿನ್ ಅನ್ನು ಹೊಂದಿರುತ್ತದೆ. ಅಂದಿನ ದಿನಮಾನಗಳಲ್ಲಿ ಈ ಲ್ಯಾಂಡ್ ರೋವರ್ ವಿಂಟೇಜ್ ಕಾರು ಅತಿ ಹೆಚ್ಚು ಮಾರಾಟವಾಗುತ್ತಿದ್ದವು.



ಈ ಕಾರಿನ ಬಗ್ಗೆ ಮಹೇಂದ್ರ ಸಿಂಗ್ ಅವರಿಗೆ ವಿಶೇಷ ಒಲವು ಇತ್ತಂತೆ. ಹಾಗಾಗಿ ಈ ಹರಾಜಿನಲ್ಲಿ ತಮ್ಮ ಫೇವರೇಟ್ ಲ್ಯಾಂಡ್ ರೋವರ್ ವಿಂಟೇಜ್3 ಸೀರಿಸ್ ಸ್ಟೇಷನ್ ವ್ಯಾಗನ್ ಕಾರನ್ನ ಖರೀದಿಸಿದ್ದಾರೆ. ಆದರೆ ಧೋನಿ ಅವರು ಎಷ್ಟು ಮೊತ್ತಕ್ಕೆ ಈ ಕಾರು ಖರೀದಿಸಿದ್ದಾರೆ ಎಂಬುದನ್ನು ಕಂಪನಿಯು ಸ್ಪಷ್ಟ ಪಡಿಸಿಲ್ಲ. ಇನ್ನು ಕ್ಯಾಪ್ಟನ್ ಕೂಲ್ ಧೋನಿ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಇಂದ ಸ್ವಯಂ ನಿವೃತ್ತಿ ಪಡೆದುಕೊಂಡು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ ಆಗಾಗ ತಮ್ಮ ಬಳಿ ಇರುವ ಐಷಾರಾಮಿ ಕಾರಿನಲ್ಲಿ ವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಕಾರ್ ಕ್ರೇಜ಼್ ಹೊಂದಿರುವ ಧೋನಿ ಅನೇಕ ದುಬಾರಿ ಐಷಾರಾಮಿ ಕಾರ್ ಗಳನ್ನ ಹೊಂದಿದ್ದಾರೆ. ಈ ಕಾರ್ ಗಳಿಗಾಗಿಯೇ ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶೇಷ ವಿನ್ಯಾಸದಲ್ಲಿ ಗ್ಯಾರೇಜ್ ವೊಂದನ್ನ ಮಾಡಿಕೊಂಡಿದ್ದಾರೆ.