ಹಸೆಮಣೆ ಏರ್ತಿದ್ದಾರೆ ಮತ್ತೊಬ್ಬ ಕನ್ನಡ ನಟ ದಾನಿಶ್ ಸೇಠ್, ಮದುವೆ ಆಗ್ತಿರೋ ಹುಡುಗಿ ಯಾರ್ ಗೊತ್ತೇ

ದಾನಿಷ್ ಸೈಟ್ ಎಂಬ ಹೆಸರು ಕೇಳಿದ ಕೂಡಲೇ ಎಲ್ಲರ ಮುಖದಲ್ಲಿ ಒಂದು ನಗು ಬರುತ್ತದೆ, ಆ ನಗುವಿಗೆ ಮುಖ್ಯ ಕಾರಣರಾದವರು ಸ್ವತಹ ದಾನೀಶ್ ಸೇಠ್ ಅವರೇ. ಹಂಬಲ್ ಪೊಲಿಟಿಷಿಯನ್ ನಾಗರಾಜ್ ಎಂಬ ಒಂದು ಬ್ಲಾಕ್ ಬಸ್ಟರ್ ಚಿತ್ರದ ಮೂಲಕ ಕನ್ನಡಿಗರೆಲ್ಲರ ಮನಸ್ಸನ್ನು ಕದ್ದ ದಾನಿಷ್ ಸೇಠ್ ಸ್ವಲ್ಪ ದಿನಗಳಲ್ಲಿಯೇ ಸದ್ದಿಲ್ಲದೆ ಹೆಸರುವಾಸಿಯಾದರು. ನೀವು ಗೂಗಲ್ ನಲ್ಲಿ ದಾನಿಶ್ ಅವರ ಬಗ್ಗೆ ಸರ್ಚ್ ಮಾಡಿದರೆ ಅವರೊಬ್ಬ ಇಂಡಿಯನ್ ಸ್ಟ್ಯಾಂಡ ಅಪ್ ಕಾಮಿಡಿಯನ್ ಎಂದು ತೋರಿಸುತ್ತದೆ. ಹೌದು ನಮಗೆ ದಾನೀಶ್ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಎಂಬ ಚಿತ್ರ ಬಂದಾಗಿನಿಂದ ಅಷ್ಟೇ ಗೊತ್ತು. ಆದರೆ ಅವರ ಬಗ್ಗೆ ತಿಳಿಯದ ಸಂಗತಿಗಳೇ.

ಹೌದು ದಾನಿಷ್ ಸೇಠ್ ಅವರು ಕೇವಲ ಒಬ್ಬ ನಟ ಅಷ್ಟೇ ಅಲ್ಲ ಬದಲಾಗಿ ಅವರೊಬ್ಬ ಟಿವಿ ಆಂಕರ್ ಟಿವಿ ಹೋಸ್ಟ್ ರೇಡಿಯೋ ಜಾಕಿ ಒಬ್ಬ ಬರಹಗಾರ ಒಬ್ಬ ಸ್ಟಾಂಡ್ ಅಪ್ ಕಾಮಿಡಿಯನ್, ಹೌದು ಇದನ್ನು ನೀವು ನಂಬಲೇಬೇಕು. 2014ರಲ್ಲಿ ಪ್ರೊ ಕಬಡ್ಡಿ ಲೀಗ್ ನಲ್ಲಿ ಹೋಸ್ಟ್ ಆಗಿ ಜರ್ನಿ ಪ್ರಾರಂಭಿಸಿದ ದಾನಿಷ್ ಸೇಠ್ 2015ರಿಂದ ಮಿಸ್ಟರ್ ನಾಗ್ಸ್ ಎಂಬ ಹೆಸರಿನಿಂದ ಕರೆಯಿಸಿಕೊಂಡು ಆರ್ಸಿಬಿ ಇನ್ಸೈಡರ್ಸ್ ಎಂಬ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾದರು. ಆದರೆ ಅವರೇ ದಾನಿಷ್ ಸೇಠ್ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಆದರೆ 2018ರಲ್ಲಿ ಬಿಡುಗಡೆಯಾದ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಎಂಬ ಚಿತ್ರ ಅವರಿಗೆ ಹೆಗ್ಗಳಿಕೆ ತಂದುಕೊಟ್ಟಿತು.

ಪುನೀತ್ ರಾಜಕುಮಾರ್ ನಿರ್ಮಾಣ ಕಂಪನಿಯಲ್ಲಿ ತಯಾರಾದ ಫ್ರೆಂಚ್ ಬಿರಿಯಾನಿ ಸಿನಿಮಾ ಅವರ ಎರಡನೇ ಸಿನಿಮಾ. ಈ ಕೊರೋನಾದ ಕಾರಣ ottಯಲ್ಲಿ ಬಿಡುಗಡೆಯಾದ ಫ್ರೆಂಚ್ ಬಿರಿಯಾನಿ ಚಿತ್ರ ಎಲ್ಲರ ಅಚ್ಚುಮೆಚ್ಚಿನ ಚಿತ್ರವಾಯಿತು. ಎಲ್ಲರೂ ಇಷ್ಟಪಡುವ ಮುದ್ದುಮುಖದ ನಗೆ ಮುಖದ ದಾನಿಷ್ ಸೇಠ್ ಅವರು ತಮ್ಮ ಜೀವನದ ಎರಡನೇ ಇನಿಂಗ್ಸ್ ಶುರುಮಾಡುವ ಹಂತದಲ್ಲಿದ್ದಾರೆ. ಹೌದು ಅನ್ಯ ರಂಗಸ್ವಾಮಿ ಎಂಬುವವರೊಡನೆ ಸಪ್ತಪದಿ ತುಳಿಯಲು ದಾನಿಷ್ ಸೇಠ್ ಸಜ್ಜಾಗಿದ್ದಾರೆ.

ಇಂದು ಈ ವಿಷಯವನ್ನು ಸ್ವತಃ ಅವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ, ದಾನಿಶ್ ಕೈಹಿಡಿಯುತ್ತಿರುವ ಅನ್ಯ ರಂಗಸ್ವಾಮಿ ಗ್ರಾಫಿಕ್ ಡಿಸೈನನಲ್ಲಿ ಪದವಿ ಪಡೆದು ಗ್ರಾಫಿಕ್ ಡಿಸೈನರ್ ಮತ್ತು ಬ್ರಾಂಡ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಅನ್ಯ ಅವರು ಮುಂಬೈನಲ್ಲಿ ಸ್ವತಂತ್ರವಾಗಿ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಎಲ್ಲರನ್ನು ನಗಿಸುವ ದಾನಿಷ್ ಸೇಠ್ ಅವರು ಅನ್ಯ ಅವರನ್ನು ವಿವಾಹವಾಗುವ ಮೂಲಕ ಅವರ ಬಾಳಿನಲ್ಲೂ ಸಹ ಸದಾ ನಗು ಇರಲಿ ಎಂದು ಹಾರೈಸೋಣ.

%d bloggers like this: