ಹೆಣ್ಣು ಮಗುವಿಗೆ ಜನ್ಮ ನೀಡಿದ ಕನ್ನಡದ ‘ಹಂಬಲ್’ ನಟಿ

2014ರಲ್ಲಿ ಎಲ್ಲರ ಅಚ್ಚು ಮೆಚ್ಚಿನ ಧಾರವಾಹಿಯಾಗಿದ್ದ ಕುಲವಧು ಸೀರಿಯಲ್ ನ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಈ ನಟಿ, ನಂತರ ಡ್ಯಾನ್ಸಿಂಗ್ ಸ್ಟಾರ್ ವೇದಿಕೆಯಲ್ಲಿ ಧೂಳೆಬ್ಬಿಸಿ, ಎಲ್ಲರ ಮನಸು ಕದ್ದು ಸೈ ಎನಿಸಿಕೊಂಡು ನಂತರ ಬೆಳ್ಳಿಪರದೆಗೆ ನಟಿಯಾಗಿ ಎಂಟ್ರಿ ಕೊಟ್ಟು, ಸ್ಯಾಂಡಲ್ವುಡ್ನ ನಟಿ ಎನಿಸಿಕೊಂಡರು. ಹೌದು ನಟಿ ದಿಶಾ ಮದನ್ ಅವರು ಕುಲವಧು ಸೀರಿಯಲ್ ನಲ್ಲಿ ಮೊದಲಿಗೆ ವಚನಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು, ನಂತರ ಡ್ಯಾನ್ಸಿಂಗ್ ಸ್ಟಾರ್ ಸೀಸನ್1 ನಲ್ಲಿ ಪಾಲ್ಗೊಂಡರು. ಮೊದಲಿನಿಂದಲೂ ಡಾನ್ಸ್ ಬಗ್ಗೆ ಆಸಕ್ತಿ ಉಳ್ಳ ಈ ನಟಿ, ಡ್ಯಾನ್ಸಿಂಗ್ ಸ್ಟಾರ್ ಸೀಸನ್ 1ರ ಪ್ರಶಸ್ತಿಯನ್ನೂ ಕೂಡ ಬಾಚಿಕೊಂಡರು.

ಸದಾ ಸೋಶಿಯಲ್ ಮೀಡಿಯಾ ದಲ್ಲಿ ಆಕ್ಟಿವ್ ಆಗಿರುವ ದಿಶಾ ಮದನ್, ರೀಲ್ಸ್ ಹಾಗೂ ಕಾಮಿಡಿ ಕ್ಲಿಪ್ ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಸದ್ಯಕ್ಕೆ ಹುಂಬಲ್ ಪೊಲಿಟಿಸಿಯನ್ ನೋಗರಾಜ್ ಅನ್ನೋ ವೆಬ್ ಸೀರೀಸ್ ನಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ ನಟಿ ದಿಶಾ ಮದನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಹೌದು 2017ರಲ್ಲಿ ಶಶಾಂಕ್ ವಾಸುಕಿ ಗೋಪಾಲ್ ಅವರನ್ನು ವಿವಾಹವಾಗಿದ್ದ ಇವರು, ಈಗಾಗಲೇ ಒಂದು ಮಗುವಿನ ತಾಯಿಯಾಗಿರುವ ದಿಶಾ ಮದನ್ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮೂಲಕ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ನಾವು ಮಾರ್ಚ್ 2022ಕ್ಕೆ ಕಾಯುತ್ತಿದ್ದೇವೆ. ನಾವು ಮೂವರಿಂದ ನಾಲ್ವರಾಗುತ್ತಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದರು.

ಇದೀಗ ನಟಿ ದಿಶಾ ಮದನ್ ಅವರು ಮಗಳು ಹುಟ್ಟಿದ ಎರಡೇ ದಿನಕ್ಕೆ ವಿಡಿಯೋ ಅಪ್ ಲೋಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ತಮ್ಮ ಮಗಳ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. ಎಲ್ಲವನ್ನೂ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ನಟಿ ದಿಶಾ ಮದನ್ ಅವರು ಪ್ರೆಗ್ನೆನ್ಸಿ ಸಮಯದಲ್ಲಿ ರೀಲ್ಸ್ ಮಾಡಿ ಹೆಜ್ಜೆ ಹಾಕುವ ಮೂಲಕ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. 2021ರಲ್ಲಿ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗಲಿದ್ದು ಈಗ ಎಲ್ಲರೂ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಹೇಗಿತ್ತು ಕೋರೋನ ಸಮಯ ಎಂದು ತಮ್ಮ ಫಾಲೋವರ್ಸ್ ಜೊತೆ ಈ ಹಿಂದೆ ವಿಡಿಯೋ ಹಂಚಿಕೊಂಡಿದ್ದರು.

ಮೊದಲನೇ ಪ್ರೆಗ್ನೆನ್ಸಿ ಸಮಯದಲ್ಲಿ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಈಗ ಎರಡನೇ ಪ್ರಗ್ನೆನ್ಸಿ ಸಮಯದಲ್ಲೂ ಬೋರ್ಡ್ ಶೂಟ್ ಮಾಡಿಸಿ ಎಲ್ಲಾ ಪೇಪರ್ ನಲ್ಲಿ ಹೆಡ್ಲೈನ್ ನಲ್ಲಿ ಇದ್ದರು. ಮಾರ್ಚ್1 2022ರಂದು ದಿಶಾ ಮದನ್ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ತಮ್ಮ ಹೆಣ್ಣು ಮಗುವಿಗೆ ಅವೀರಾ ಎಂದು ಹೆಸರಿಟ್ಟಿರುವುದನ್ನು ರಿವಿಲ್ ಮಾಡಿದ್ದಾರೆ. ಹಾಗೂ ಶುಭ ಹಾರೈಸಿದ ತಮ್ಮ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಮಗಳಾದ ಅವೀರಾ ಮತ್ತು ನಾನು ಮನೆಗೆ ಹೋಗಿ ಶಶಾಂಕ್ ಮತ್ತು ವಿಯಾನ್ ಜೊತೆ ಕಾಲ ಕಳೆಯಲು ವೇಟ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

%d bloggers like this: