ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಂದನ್ ಶೆಟ್ಟಿ ಅವರು

ಕನ್ನಡದ ರಾಪ್ ಸಂಗೀತ ಲೋಕಕ್ಕೆ ಹೊಸ ಟ್ರೆಂಡ್ ನ್ನು ಸೃಷ್ಟಿಸಿದ ಕನ್ನಡದ ರಾಪರ್ ಎಂದೆ ಖ್ಯಾತಿಯಾಗಿರುವ ಚಂದನ್ ಶೆಟ್ಟಿ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ರೆಡಿ ಆಗಿದ್ದಾರೆ. ಮೂರೇ ಮೂರು ಪೆಗ್ಗಿಗೆ ಸಾಂಗ್ ನಿಂದ ನಮಗೆಲ್ಲ ಪರಿಚಯವಾದ ಚಂದನ್ ಶೆಟ್ಟಿ, ತಮ್ಮ ಟ್ಯಾಲೆಂಟ್ ನಿಂದ ಎಲ್ಲರ ಮನೆಮಾತಾದವರು. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಚಂದನ್ ಶೆಟ್ಟಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇದುವರೆಗೂ ಅವರು ರಚಿಸಿ, ಗೀತೆ ಸಂಯೋಜನೆ ನೀಡಿ, ತಾವೇ ಸ್ವತಃ ಹಾಡಿದ ಎಲ್ಲ ಸಾಂಗ್ ಗಳು ಭರ್ಜರಿ ಹಿಟ್ ನೀಡಿವೆ. ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಚಂದನ್ ಶೆಟ್ಟಿ ಇಂದು ತಮ್ಮ ಜೀವನದಲ್ಲಿ ಮತ್ತೊಂದು ಘಟ್ಟಕ್ಕೆ ತಲುಪಿದ್ದಾರೆ. ಹೌದು ಚಂದನ್ ಶೆಟ್ಟಿ ಇದೇ ಮೊದಲ ಬಾರಿಗೆ ಹೀರೋ ಆಗಿ ನಟಿಸುತ್ತಿದ್ದಾರೆ.

ನಾಯಕನ ಪಾತ್ರದಲ್ಲಿ ಚಂದನ್ ಶೆಟ್ಟಿ ಹಾಗೂ ನಾಯಕಿಯ ಪಾತ್ರದಲ್ಲಿ ಅರ್ಚನಾ ಕೊಟ್ಟಿಗೆ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಎಲ್ರ ಕಾಲೆಳೆಯುತ್ತೆ ಕಾಲ ಎಂದು ಹೆಸರಿಡಲಾಗಿದೆ. ಈ ಚಿತ್ರವು 1980 ರಿಂದ 90ರ ಕಾಲದಲ್ಲಿ ನಡೆಯುವ ಕಥೆಯಾಗಿದ್ದು, ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿರುವ ಸುಜಯ್ ಶಾಸ್ತ್ರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಮರೆಯಾಗುತ್ತಿದೆ. ನಾವು ಹೇಗೆ ಬೇರೆ ಭಾಷೆಯ ಚಿತ್ರಗಳನ್ನು ಸಬ್ ಟೈಟಲ್ ಮೂಲಕ ನೋಡುತ್ತೇವೆಯೋ ಹಾಗೆಯೇ ಬೇರೆ ಭಾಷೆಯ ಜನರು ಕೂಡ ನಮ್ಮ ಕನ್ನಡ ಚಿತ್ರಗಳನ್ನು ನೋಡಲಿ. ಬೇರೆ ಭಾಷೆಗಳಲ್ಲೂ ಕನ್ನಡಚಿತ್ರಗಳು ಬಿಡುಗಡೆಯಾಗಲಿ ಎಂಬುದು ಎಲ್ಲರ ಆಶಯ.

ಈ ಚಿತ್ರವನ್ನು ನಿರ್ಮಾಪಕ ಗೋವಿಂದರಾಜು ನಿರ್ಮಾಣ ಮಾಡುತ್ತಿದ್ದು, ಹಿರಿಯ ನಟರಾದ ತಾರಾ, ಮಂಡ್ಯ ರಮೇಶ್ ಈ ಚಿತ್ರದಲ್ಲಿದ್ದಾರೆ. ಮಂಜು ಪಾವಗಡ, ನಾಗರಾಜ ಮೂರ್ತಿ ಮುಂತಾದ ತಾರಾಗಣವಿದ್ದು, ಈ ಚಿತ್ರದಲ್ಲಿ ನಿರ್ದೇಶಕರಾದ ಸುಜಯ್ ಶಾಸ್ತ್ರಿ ಕೂಡ ಅಭಿನಯಿಸುತ್ತಿದ್ದಾರೆ. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದಲ್ಲಿ ಚಂದನ್ ಶೆಟ್ಟಿ ಅವರು ವಿಜಯ್ ಎಂಬ ಪಾತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ನನ್ನ ಸಂಗೀತ ಮತ್ತು ಹಾಡಿಗೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ದೊರಕಿದೆ. ಹಾಗೆ ಈಗ ನಾನು ನಾಯಕನಟನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ.

ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ನನ್ನ ಮೇಲೆ ಸದಾ ಹೀಗೆ ಇರಲಿ ಎಂದು ಚಂದನ್ ಶೆಟ್ಟಿ ಹೇಳಿದರು. ಇನ್ನು ನಟಿ ಅರ್ಚನಾ ಕೊಟ್ಟಿಗೆ ಅವರು ರಿಯಾಲಿಟಿ ಶೋ ಒಂದರಲ್ಲಿ ಸುಜಯ್ ಅವರಿಗೆ ಪರಿಚಯವಾಗಿದ್ದರು. ಈಗಾಗಲೇ ನನ್ನ ಹಾಗೂ ನಿರ್ದೇಶಕ ಸುಜಯ್ ಅವರ ಕಾಂಬಿನೇಶನ್ ನಲ್ಲಿ ಒಂದು ಚಿತ್ರ ರೆಡಿ ಆಗಿದ್ದು ಇದು ಎರಡನೇ ಚಿತ್ರ ಎಂದು ನಟಿ ತಿಳಿಸಿದರು. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿದ್ದ ಕಾರ್ಮಿ ಮತ್ತು ಕೃಷ್ಣ ಟಾಕೀಸ್ ಚಿತ್ರಗಳು ವೀಕ್ಷಕರಿಗೆ ತುಂಬಾ ಇಷ್ಟವಾಗಿದ್ದವು. ಈ ಚಿತ್ರವು ಕೂಡ ಕುಟುಂಬ ಸಮೇತ ನೋಡುವಂತಹ ಚಿತ್ರವಾಗಿದ್ದು, ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದು ನಿರ್ಮಾಪಕ ಗೋವಿಂದರಾಜು ಹೇಳಿದರು.

ಈ ಚಿತ್ರಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ ನೀಡಿದ್ದು, ಬಾಲು ಕುಮುಟ ಅವರು ಕಾರ್ಯಕಾರಿ ನಿರ್ಮಾಪಕರು ಹಾಗೂ ಈ ಚಿತ್ರಕ್ಕೆ ಕಥೆ ಸಂಭಾಷಣೆಯನ್ನು ರಾಜಗುರು ಅವರು ನೀಡಿದ್ದು, ಪ್ರದೀಪ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕೋರೋಣ ಮುಗಿದ ನಂತರ ಈ ಚಿತ್ರದ ಚಿತ್ರೀಕರಣವನ್ನು ಆರಂಭಿಸಲು ಮೊದಲೇ ನಿರ್ಧರಿಸಲಾಗಿತ್ತು. ಹೀಗಾಗಿ ಇದೀಗ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭಫಲಕ ತೋರಿದರು.

%d bloggers like this: