ಹಿಂದಿ ಕಿರುತೆರೆಯತ್ತ ಹೊರಟ ಕನ್ನಡತಿ ಧಾರಾವಾಹಿ

ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿ ಹಿಂದಿ ಭಾಷೆಗೆ ಡಬ್ ಆಗುತ್ತಿದೆ. ಇತ್ತೀಚೆಗೆ ಕನ್ನಡ ಸಿನಿಮಾ ಮಾತ್ರ ಅಲ್ಲದೆ ಕಿರುತೆರೆಯ ಧಾರಾವಾಹಿಗಳು ಸಹ ಹೊಸದೊಂದು ಸಂಚಲನ ಮೂಡಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡುತ್ತಿವೆ. ಈಗಾಗಲೇ ಕನ್ನಡದ ನಾಗಿಣಿ ಧಾರಾವಾಹಿ ಹಿಂದಿ ಭಾಷೆಯಲ್ಲಿ ನಾಗಿನ್ ಆಗಿ ಡಬ್ ಆಗಿದೆ. ಅದೇ ರೀತಿಯಾಗಿ ಇದೀಗ ಕನ್ನಡದ ಜನಪ್ರಿಯ ಕನ್ನಡತಿ ಧಾರಾವಾಹಿ ಕೂಡ ಹಿಂದಿ ಭಾಷೆಗೆ ಡಬ್ ಆಗುತ್ತಿದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳು ಕನ್ನಡ ನಾಡಿನ ಮನೆ ಮನೆಗಳಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಅದರ ಪೈಕಿ ನಟ ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಕನ್ನಡತಿ ಧಾರಾವಾಹಿ ಯಶಸ್ವಿಯಾಗಿ ಸಾಗುತ್ತಿದೆ.

ಇದೀಗ ಈ ಮಜನಪ್ರಿಯ ಕನ್ನಡಿ ಧಾರಾವಾಹಿ ಸಹ ಹಿಂದಿ ಭಾಷೆಗೆ ಕೂಡ ಡಬ್ ಆಗುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಕನ್ನಡತಿ ಧಾರಾವಾಹಿ ವಿಶೇಷ ಕಥಾಹಂದರ ಹೊತ್ತು ಕಿರುತೆರೆ ಪ್ರೇಕ್ಷಕ ವರ್ಗವನ್ನ ಸೆಳೆದುಕೊಂಡಿದೆ. ಹರ್ಷ ಎಂಬ ಪಾತ್ರದಲ್ಲಿ ನಟ ಕಿರಣ್ ರಾಜ್ ಜೀವ ತುಂಬಿ ನಟಿಸುತ್ತಿದ್ದಾರೆ. ಅದೇ ರೀತಿ ಭುವಿ ಎಂಬ ಪಾತ್ರವನ್ನು ನಟಿ ರಂಜನಿ ರಾಘವನ್ ಕೂಡ ಅಷ್ಟೆ ಮುದ್ದಾಗಿ ಅಭಿನಯಿಸುತ್ತಿದ್ದಾರೆ. ಇವರಿಬ್ಬರೂ ಸದ್ಯ ಕಿರುತೆರೆಯ ಹಾಟ್ ಫೇವರಿಟ್ ಕಪಲ್ ಆಗಿದ್ದು ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಇನ್ನು ನಟ ಕಿರಣ್ ರಾಜ್ ಕನ್ನಡ ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಟ ಕಿರಣ್ ರಾಜ್ ತನ್ನದೇ ಆದ ಅಭಿಮಾನ ಬಳಗವನ್ನು ಹೊಂದಿದ್ದಾರೆ.

ಕಿರುತೆರೆ ಮಾತ್ರ ಅಲ್ಲದೆ ಸಿನಿಮಾ ರಂಗಕ್ಕೂ ಕೂಡ ಎಂಟ್ರಿ ಕೊಟ್ಟಿದ್ದಾರೆ ನಟ ಕಿರಣ್ ರಾಜ್. “ಭರ್ಜರಿಗಂಡು” ಎಂಬ ಸಿನಿಮಾದ ಶೂಟಿಂಗ್ ನಲ್ಲಿ ಇರುವ ಕಿರಣ್ ರಾವ್ ಸಿನಿಮಾ ಮತ್ತು ಕಿರುತೆರೆ ಧಾರಾವಾಹಿ ಎರಡರಲ್ಲೂ ಕೂಡ ಬಿಝಿ಼ ಆಗಿದ್ದಾರೆ. ಒಟ್ಟಾರೆಯಾಗಿ ಕನ್ನಡತಿ ಧಾರಾವಾಹಿಯ ಮೂಲಕ ಹಿಂದಿ ಭಾಷೆಯಲ್ಲಿಯೂ ಕೂಡ ಮಿಂಚಲು ಸಜ್ಜಾಗಿದ್ದಾರೆ ನಟ ಕಿರಣ್ ರಾಜ್ ಮತ್ತು ನಟಿ ರಂಜಿನಿ ರಾಘವನ್. ಕನ್ನಡತಿ ಧಾರಾವಾಹಿ ಇನ್ಮುಂದೆ ಕನ್ನಡ ಮಾತ್ರ ಅಲ್ಲದೆ ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಕೂಡ ಡಬ್ ಆಗಿ ಪ್ರಸಾರ ಆಗಲಿದೆ. ಮೂಲಕ ನಟ ಕಿರಣ್ ರಾಜ್ ಮತ್ತು ಭುವಿ ಪಾತ್ರಧಾರಿ ರಂಜನಿ ರಾಘವನ್ ಇಬ್ಬರೂ ಹಿಂದಿ ಕಿರುತೆರೆಯ ಪ್ರೇಕ್ಷಕರರನ್ನ ಮನರಂಜಿಸಲಿದ್ದಾರೆ. ಏನೇ ಆಗಲಿ ಕನ್ನಡ ಸಿನಿಮಾಗಳು ಹೇಗೆ ಪರಭಾಷೆಗೆ ಡಬ್ ಆಗಿ ಕನ್ನಡ ಭಾಷೆಯ ಹಿರಿಮೆಯನ್ನು ಹಿಮ್ಮಡಿಗೊಳಿಸುತ್ತಿರುವುದು ಸಂತಸದ ವಿಚಾರ ಎನ್ನಬಹುದು.

%d bloggers like this: