ಹಿಂದಿ ತೆಲುಗು ಆಯಿತು ಈಗ ಮರಾಠಿಯಲ್ಲೂ ರಿಮೇಕ್ ಆಗುತ್ತಿದೆ ಕನ್ನಡದ ಈ ಹಿಟ್ ಚಿತ್ರ

2020ರಲ್ಲಿ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ ಚಿತ್ರ ದಿಯಾ. ಹಲವಾರು ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಮಾಡಿದ ಈ ರೋಮ್ಯಾಂಟಿಕ್ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ನೇರವಾಗಿ ಒಟಿಟಿಯಲ್ಲಿ ತೆರೆಕಂಡಿದ್ದ ದಿಯಾ ಸಿನಿಮಾವನ್ನು ಕನ್ನಡದ ಸಿನಿ ಪ್ರೇಕ್ಷಕರು ತುಂಬು ಹೃದಯದಿಂದ ಇಷ್ಟ ಪಟ್ಟಿದ್ದರು. ಚಿತ್ರದ ಕಥೆ, ಹಾಡು, ತಾಯಿ ಮಗನ ಸೆಂಟಿಮೆಂಟ್, ಪರಿಶುದ್ಧ ಪ್ರೀತಿಯ ಮಹತ್ವ ಹೀಗೆ ಹಲವಾರು ಕಾರಣಗಳಿಂದ ದಿಯಾ ಕನ್ನಡದ ಸಿನಿ ಜಗತ್ತಿನಲ್ಲಿ ಒಂದು ಹೊಸ ಲೋಕವನ್ನೇ ಸೃಷ್ಟಿ ಮಾಡಿತ್ತು. ಕನ್ನಡದಲ್ಲಿ ದಿಯಾ ಚಿತ್ರವನ್ನು ಕೆಎಸ್ ಅಶೋಕ್ ನಿರ್ದೇಶಸಿದ್ದು, ಕೃಷ್ಣ ಚೈತನ್ಯ ನಿರ್ಮಾಣ ಮಾಡಿದ್ದರು.

ಕನ್ನಡದಲ್ಲಿ ಭರ್ಜರಿ ಯಶಸ್ಸು ಕಂಡ ಈ ಚಿತ್ರ ಹಲವಾರು ಭಾಷೆಗಳಿಗೆ ರಿಮೆಕ್ ಆಗಿತ್ತು. ಇತ್ತೀಚೆಗಷ್ಟೇ ದಿಯಾ ಹಿಂದಿ ಭಾಷೆಯಲ್ಲಿ ಚಿತ್ರೀಕರಣವನ್ನು ಮುಗಿಸಿದೆ. ಹಿಂದಿ ಭಾಷೆಯಲ್ಲೂ ಕೂಡ ನಟ ಪೃಥ್ವಿ ಅಂಬರ್ ಅವರೇ ನಟಿಸಿದ್ದು, ಉಳಿದ ಪಾತ್ರಗಳಲ್ಲಿ ಬದಲಾವಣೆಗಳಾಗಿದ್ದವು. ಇದೀಗ ದಿಯಾ ಸಿನಿಮಾವನ್ನು ಮರಾಠಿ ಭಾಷೆಗೆ ರೀಮೇಕ್ ಮಾಡಲಾಗುತ್ತಿದೆ. ವಿಶೇಷವೆಂದರೆ ಹಿಂದಿ ರಿಮೇಕ್ ನಲ್ಲಿ ಆದಿ ಪಾತ್ರವನ್ನು ಪುನರಾವರ್ತಿಸಿದ ನಟ ಪೃಥ್ವಿ ಅಂಬರ್ ಅವರು ಮರಾಠಿಯಲ್ಲೂ ಕೂಡ ನಟಿಸಲಿದ್ದಾರೆ. ಮರಾಠಿಯಲ್ಲೂ ಕೆಎಸ್ ಅಶೋಕ್ ಅವರು ನಿರ್ದೇಶಿಸುತ್ತಿದ್ದು, ದಿಯಾ ಚಿತ್ರದ ಮರಾಠಿ ರಿಮೇಕ್ ಮಹೂರ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ.

ಕಳೆದ ವಾರದಿಂದ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನು ದಿಯಾ ಚಿತ್ರದ ಮುಖ್ಯಪಾತ್ರದಲ್ಲಿ ನಟ ಪೃಥ್ವಿ ಅಂಬರ್ ಅವರೇ ನಟಿಸಲಿದ್ದು, ಮಹಿಳಾ ನಾಯಕಿಯಾಗಿ ರಿತಿಕಾ ಶ್ರೋತ್ರಿ ನಟಿಸಲಿದ್ದಾರೆ. ಕನ್ನಡದಲ್ಲಿ ನಟ ದೀಕ್ಷಿತ್ ಶೆಟ್ಟಿ ಮಾಡಿದ್ದ ಪಾತ್ರವನ್ನು ಜನಪ್ರಿಯ ಧಾರಾವಾಹಿ ನಾಯಕನಟ ಅಜಿಂಕ್ಯ ರಾವುತ್ ನಿಭಾಯಿಸಲಿದ್ದಾರೆ. ಕನ್ನಡದಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪವಿತ್ರ ಲೋಕೇಶ್ ಅವರ ಪಾತ್ರಕ್ಕೆ ಮೃಣಾಲ್ ಕುಲಕರ್ಣಿ ಅವರು ಬಣ್ಣ ಹಚ್ಚಲಿದ್ದಾರೆ. ಇನ್ನು ಮರಾಠಿ ಭಾಷೆಯಲ್ಲಿ ರೆಡಿಯಾಗುತ್ತಿರುವ ಈ ಚಿತ್ರಕ್ಕೆ ಅಮಿತ್ ರಾಜ್ ಅವರು ಸಂಗೀತ ನಿರ್ದೇಶನ ನೀಡುತ್ತಿದ್ದು, ಭಾರ್ಗವ್ ಅವರು ಛಾಯಾಗ್ರಹಣ ನೀಡುತ್ತಿದ್ದಾರೆ.

%d bloggers like this: