ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ ಕನ್ನಡದ ಸೂಪರ್ ಹಿಟ್ ಥ್ರಿಲ್ಲರ್ ಚಿತ್ರ

2015 ರಲ್ಲಿ ರಿಲೀಸ್ ಆದ ರಂಗಿತರಂಗ ಭರ್ಜರಿ ಹಿಟ್ ಆಗಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದ ಈ ರಂಗಿತರಂಗ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರನ್ನ ಮಾತ್ರ ಅಲ್ಲದೆ ಪರಭಾಷೆಯ ಸಿನಿ ಪ್ರೇಕ್ಷಕರನ್ನ ಕೂಡ ಮೋಡಿ ಮಾಡಿತ್ತು. ಈ ರಂಗಿತರಂಗ ಚಿತ್ರ ಪೈಪೋಟಿ ನೀಡಿದ್ದು ಟಾಲಿವುಡ್ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದ ರಾಜಮೌಳಿ ಅವರ ಬಾಹುಬಲಿ ಚಿತ್ರದ ಎದುರು. ಈ ಚಿತ್ರದ ನಡುವೆ ಕೂಡ ನಮ್ಮ ಕನ್ನಡದ ಈ ರಂಗಿತರಂಗ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಸಾಯಿ ಕುಮಾರ್, ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನ ಮನ ಗೆದ್ದಿದ್ದರು. ಚಿತ್ರಕ್ಕೆ ಇದೀಗ ಏಳು ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಅವರು ಹೊಸದೊಂದು ಸುದ್ದಿ ನೀಡಿದ್ದಾರೆ. ಅದೇನಪ್ಪಾ ಅಂದರೆ ರಂಗಿ ತರಂಗ ಚಿತ್ರ ಹಿಂದಿ ಭಾಷೆಗೆ ರೀಮೇಕ್ ಆಗಲಿದೆಯಂತೆ.

ಮುಖ್ಯ ಭೂಮಿಕೆಯಲ್ಲಿ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ಅವರನ್ನ ಅಪ್ರೋಚ್ ಮಾಡುವ ಸಾಧ್ಯತೆ ಇದೆಯಂತೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರಂಗಿತರಂಗ ಚಿತ್ರವನ್ನು ಹಿಂದಿ ಭಾಷೆಗೆ ರೀಮೇಕ್ ಮಾಡಲು ಬಾಂಬೆ ಕಾರ್ಪೋರೇಟ್ ಸ್ಟೂಡಿಯೋವೊಂದು ಉತ್ಸುಕರಾಗಿ ಮುಂದೆ ಬಂದಿದ್ದು. ನಿರ್ಮಾಣ ಮಾಡಲು ಸಜ್ಜಾಗಿದೆಯಂತೆ. ಆದರೆ ಈ ರಂಗಿತರಂಗ ಸಿನಿಮಾವನ್ನ ಹಿಂದಿ ರೀಮೇಕ್ ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಫೈನಲ್ ಆಗಿಲ್ಲ. ಏಕೆಂದರೆ ಸದ್ಯಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಅವರು ಕಿಚ್ಚ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳಿರುವ ವಿಕ್ರಾಂತ್ ರೋಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪ್ರಮೋಶನ್ ಕೆಲಸ ಕಾರ್ಯಗಳಲ್ಲಿ ಸಖತ್ ಬಿಝಿ ಆಗಿದ್ದಾರೆ. ಇದಾದ ನಂತರ ಸುದೀಪ್ ಅವರೊಟ್ಟಿಗೆ ಮತ್ತೆ ಬಿಲ್ಲಾ ರಂಗ ಬಾಷಾ ಎಂಬ ಹೊಸ ಪ್ರಾಜೆಕ್ಟ್ ವೊಂದನ್ನ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ಕನ್ನಡದ ಸೂಪರ್ ಹಿಟ್ ಚಿತ್ರ ರಂಗಿತರಂಗ ಹಿಂದಿ ಭಾಷೆಗೆ ರೀಮೇಕ್ ಆಗುತ್ತಿರುವುದು ನಿಜಕ್ಕೂ ಕೂಡ ಸಂತಸದ ವಿಚಾರವಾಗಿದೆ.

%d bloggers like this: