‘ಹಿರಣ್ಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ನಟಿ

ಇತ್ತೀಚೆಗೆ ಚಂದನವನದಲ್ಲಿ ಸ್ಟಾರ್ ನಡುವೆ ಒಬ್ಬರಿಗೊಬ್ಬರ ನಡುವೆ ಸೋದರತ್ವದ ಭಾವನೆ ಮೂಡುತ್ತಿದೆ ಅಂದರೆ ಅತಿಶಯೋಕ್ತಿಯಲ್ಲ. ಹೀಗೆ ಅನ್ನುವುದಕ್ಕೆ ಸೂಕ್ತವಾದ ಕಾರಣ ಕೂಡ ಇದೆ. ಈ ಮೊದಲು ಸ್ಟಾರ್ ವಾರ್ ಎಂಬುದನ್ನ ಕೇಳುತ್ತಿದ್ದವು. ಒಬ್ಬ ಸ್ಟಾರ್ ನಟನ ಸಿನಿಮಾ ಬರುತ್ತಿದೆ ಅಂದರೆ ಮತ್ತೊಬ್ಬ ಸ್ಟಾರ್ ನಟನ ಸಿನಿಮಾ ಕೂಡ ಅಂದೇ ಬಿಡುಗಡೆ ಆಗುತ್ತಿತ್ತು. ಅದರಿಂದ ಎರಡೂ ಸಿನಿಮಾಗಳು ಕೂಡ ಪ್ರಬಲ ಪೈಪೋಟಿ ನಡೆಸುತ್ತಿದ್ದವು. ಅದಕ್ಕೆ ತಕ್ಕಂತೆ ಆ ಸ್ಟಾರ್ ನಟರ ಅಭಿಮಾನಿಗಳು ಚಿತ್ರಮಂದಿರಗಳ ತುಂಬೆಲ್ಲಾ ತಮ್ಮ ನೆಚ್ಚಿನ ನಟನ ಕಟೌಟ್ ನಿಲ್ಲಿಸಿ ಹಾರ ಜೈ ಕಾರ ಹಾಕಿ ಕೂಗೋದು ಇದ್ದೇ ಇರುತ್ತದೆ. ಇದರಿಂದ ಸ್ಟಾರ್ ನಟರು ಕೂಡ ಒಬ್ಬರ ಬಗ್ಗೆ ಮತ್ತೊಬ್ಬರು ಒಳಗೊಳಗೆ ಮನಸ್ತಾಪ ಆಗಿ ಕೋಲ್ಡ್ ವಾರ್ ಕೂಡ ನಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಈ ಸ್ಟಾರ್ ವಾರ್ ಗಳು ನಿಂತು ಸೋದರತ್ವದ ಭಾವನೆ ಮೂಡುತ್ತಿದೆ.

ಅದನ್ನ ನಾವು ಚಂದನವನದಲ್ಲಿ ಕಾಣ ಬಹುದಾಗಿರುತ್ತದೆ. ಏಕೆಂದರೆ ಇತ್ತೀಚೆಗೆ ಈ ಒಂದು ಹೊಸ ಬೆಳವಣಿಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಹುರುಪು ಮೂಡುತ್ತಿದೆ. ಒಬ್ಬ ನಟ ಮತ್ತೊಬ್ಬ ನಟನ ಸಿನಿಮಾಗಳ ಪ್ರಮೋಶನ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ, ಅದರಂತೆ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡಿ ಅವರ ಚಿತ್ರಗಳ ಟೀಸರ್, ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಆಗಮಿಸಿ ನಾವೆಲ್ಲರೂ ಒಂದೇ ಎಂಬಂತೆ ಪರಸ್ಪರ ನಟರು ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಅದರಂತೆ ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟ ಡಾಲಿ ಧನಂಜಯ್ ಅವರು ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಈ ಸಂಧರ್ಭದಲ್ಲಿ ಧನಂಜಯ್ ತಾವು ಬೆಳೆಯುವುದರ ಜೊತೆಗೆ ತಮ್ಮ ಗೆಳೆಯರನ್ನು ಕೂಡ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ಬೆಂಬಲ ನೀಡುತ್ತಿದ್ದಾರೆ.

ಹೌದು ಕನ್ನಡದ ಹಿರಿಯ ಹಾಸ್ಯ ನಟರಾದ ಡಿಂಗ್ರಿ ನಾಗರಾಜ್ ಅವರ ಪುತ್ರ ನಟ ರಾಜವರ್ಧನ್ ಅವರ ಚಿತ್ರಕ್ಕೆ ಟೈಟಲ್ ಬಿಟ್ಟುಕೊಟ್ಟಿದ್ದಾರೆ ನಟ ಡಾಲಿ ಧನಂಜಯ್. ರಾಜವರ್ಧನ್ ಅವರು ‘ಹಿರಣ್ಯ’ ಎಂಬ ಶೀರ್ಷಿಕೆಯನ್ನ ನೋಂದಾವಣೆ ಮಾಡಿಸಲು ಹೋದಾಗ ಹಾಗಗಲೇ ಹಿರಣ್ಯ ಎಂಬ ಶೀರ್ಷಿಕೆಯನ್ನ ಧನಂಜಯ್ ರಿಜಿಸ್ಟರ್ ಮಾಡಿಸಿರುತ್ತಾರೆ. ಆಗ ನಟ ರಾಜವರ್ಧನ್ ಧನಂಜಯ್ ಅವರ ಬಳಿ ಈ ಹಿರಣ್ಯ ಟೈಟಲ್ ಬಿಟ್ಟು ಕೊಡುವಂತೆ ಕೇಳಿದಾಗ ತಕ್ಷಣ ಸಕರಾತ್ಮಕವಾಗಿ ಸ್ಪಂದಿಸಿದ ಧನಂಜಯ್ ತಮ್ಮ ಚಿತ್ರದ ಟೈಟಲ್ ಅನ್ನು ರಾಜವರ್ಧನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ನಟ ರಾಜ ವರ್ಧನ್ ಅವರು ನಟಿಸುತ್ತಿರುವ ಈ ಹಿರಣ್ಯ ಚಿತ್ರದಲ್ಲಿ ರೂಪದರ್ಶಿ ಮತ್ತು ನಟಿ ರಿಹಾನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ಜ್ಯೂಡಾ ಸ್ಯಾಂಡಿ ರಾಗ ಸಂಯೋಜನೆ ಮಾಡುತ್ತಿದ್ದು, ಗೋಕುಲ್ ಬೆನಾಯ್ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

%d bloggers like this: