ಹಿಟ್ ಚಿತ್ರಗಳ ಸಾಲಿಗೆ ಸೇರಿದ ಈ ಹೊಸ ಕನ್ನಡ ಚಿತ್ರ, ನಿರ್ದೇಶಕರಿಗೆ ತೆಲುಗು ತಮಿಳಿನಿಂದ ಬಂದ್ವು ಅವಕಾಶಗಳು

ನಮ್ಮ ಕನ್ನಡದ ಸಿನಿಮಾ ನಟರಿಗೆ ಅಥವಾ ಯಾವುದೇ ಭಾಷೆಯ ಸಿನಿಮಾ ನಟರಿಗೆ ಬೇರೆ ಬೇರೆ ಸಿನಿಮಾ ಇಂಡಸ್ಟ್ರಿ ಗಳಲ್ಲಿ ಅವಕಾಶಗಳು ಅರಸಿಕೊಂಡು ಬರುವುದು ಕಾಮನ್. ಆದರೆ ಈ ಬಾರಿ ಒಬ್ಬ ಕನ್ನಡದ ನಿರ್ದೇಶಕರಿಗೆ ಬೇರೆ ಸಿನಿ ಇಂಡಸ್ಟ್ರಿ ಯವರು ಅವಕಾಶ ನೀಡಿದ್ದಾರೆ. ಹೌದು ಕನ್ನಡದ ಒಬ್ಬ ನಿರ್ದೇಶಕರಿಗೆ ಟಾಲಿವುಡ್ ನಿಂದ ನಿರ್ಮಾಣ ಸಂಸ್ಥೆಗಳು, 2ಸಿನಿಮಾಗಳಿಗೆ ನಿರ್ದೇಶನ ಮಾಡಲು ಬುಲಾವ್ ನೀಡಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೋಂ ಬ್ಯಾನರ್ ಪಿ.ಆರ್.ಕೆ ಅಡಿಯಲ್ಲಿ ನಿರ್ಮಾಣವಾಗಿರುವ ‘ಫ್ಯಾಮಿಲಿ ಪ್ಯಾಕ್’ ಸಿನಿಮಾ ಫೆಬ್ರುವರಿ 16ರಂದು ಅಮೆಜಾನ್ ಪ್ರೈಮ್ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು.

ಇದೀಗ ಫ್ಯಾಮಿಲಿ ಪ್ಯಾಕ್ ಸಿನಿಮಾ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇದುವರೆಗೆ ಕನ್ನಡದಲ್ಲಿ ಅನೇಕ ಸಿನಿಮಾಗಳು ಒಟಿಟಿ ಪ್ಲಾಟ್ ಫಾರಂ ನಲ್ಲಿ ಬಿಡುಗಡೆಯಾಗಿವೆ. ಆದರೆ ಇದುವರೆಗೆ ಯಾವ ಸಿನಿಮಾಕ್ಕೂ ಈ ಮಟ್ಟದ ಮೆಚ್ಚುಗೆ ಸಿಕ್ಕಿರಲಿಲ್ಲ. ಯಾವ ಸಿನಿಮಾಗಳು ಫ್ಯಾಮಿಲಿ ಪ್ಯಾಕ್ ಸಿನಿಮಾದ ಹಾಗೆ ಟ್ರೆಂಡ್ ಸೃಷ್ಟಿಸಿರಲಿಲ್ಲ. ಇದಷ್ಟೇ ಅಲ್ಲದೆ ಅಮೆಜಾನ್ ಪ್ರೈಮ್ ನಲ್ಲಿ ನಾಷನಲ್ ಟ್ರೆಂಡಿಂಗ್ ನಲ್ಲಿ ಈ ಚಿತ್ರವು ಏಳನೇ ಸ್ಥಾನ ಪಡೆದಿದೆ. ಈ ಮಟ್ಟದ ಮೆಚ್ಚುಗೆಯನ್ನು ಪಡೆದಿರುವ ಫ್ಯಾಮಿಲಿ ಪ್ಯಾಕ್ ಚಿತ್ರದಿಂದ, ಈ ಚಿತ್ರದ ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಬೇರೆ ಇಂಡಸ್ಟ್ರಿಯವರು ಗುರುತಿಸುತ್ತಿದ್ದಾರೆ. ಎಷ್ಟೋ ಜನ ಕಲಾವಿದರು ಒಂದು ಚಿತ್ರದ ಯಶಸ್ಸಿನ ನಂತರ ಬೇರೆ ಇಂಡಸ್ಟ್ರಿಯವರಿಂದ ಗುರುತಿಸಲ್ಪಡುತ್ತಿದ್ದಾರೆ.

ಆದರೆ ಈಗ ನಿರ್ದೇಶಕರು ಬೇರೆ ಇಂಡಸ್ಟ್ರಿ ಅವರಿಂದ ಗುರುತಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದ ಶೀರ್ಷಿಕೆ ನೋಡಿ ಇದೊಂದು ಡಬಲ್ ಮೀನಿಂಗ್ ಇರುವಂತಹ ಸಿನಿಮಾ ಎನಿಸಬಹುದು. ಆದರೆ ಇದು ಒಂದು ಪಕ್ಕಾ ಕೌಟುಂಬಿಕ ಸಿನಿಮಾ ಎಂದು ಫ್ಯಾಮಿಲಿ ಪ್ಯಾಕ್ ಚಿತ್ರತಂಡ ಹೇಳಿದೆ. ಸೌತ್ ಸಿನಿ ಕೆಲಸಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲದೆ, ಸೌತ್ ಸಿನಿ ಇಂಡಸ್ಟ್ರಿಯ ಹಲವು ದಿಗ್ಗಜರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಲವಾರು ನಟರು ಹಾಗೂ ನಿರ್ದೇಶಕರು ಈ ಚಿತ್ರಕ್ಕೆ ಶಭಾಷ್ ಗಿರಿ ನೀಡಿದ್ದಾರೆ. ಲಿಖಿತ್ ಶೆಟ್ಟಿ, ಅಮೃತ ಅಯ್ಯಂಗಾರ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಸಿನಿಮಾಕ್ಕೆ ತಮಿಳಿನ ರಜನಿಕಾಂತ್ ಅವರ ಪಿಆರ್ಓ ಆಗಿರುವ ರಿಯಾಜ್ ಕೆ ಅಹ್ಮದ್ ಅವರು ಗುಡ್ ಜಾಬ್ ಅರ್ಜುನ್ ಕುಮಾರ್ ಎಂದಿದ್ದಾರೆ.

ಮತ್ತು ಪಿ.ಆರ್.ಕೆ ಸಂಸ್ಥೆಯ ಆಯ್ಕೆಯು ಅಷ್ಟೇ ಚೆನ್ನಾಗಿದೆ ಎನ್ನುವ ಮೂಲಕ ತಂಡದ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ. ಬಾಹುಬಲಿ ಮತ್ತು ತ್ರಿಬಲ್ ಆರ್ ಸಿನಿಮಾ ತಂಡದ ಜೊತೆ ಗುರುತಿಸಿಕೊಂಡಿರುವ ವಂಶಿ ಕಾಕಾ ಅವರು ಈ ಚಿತ್ರಕ್ಕೆ ಒಳ್ಳೆಯ ಸ್ಕ್ರಿಪ್ಟ್ ಇದೆ ಮತ್ತು ಅದನ್ನು ಹೇಳಿರುವ ರೀತಿ ಅಷ್ಟೇ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಇದಷ್ಟೇ ಅಲ್ಲದೆ ಸೌತ್ ಸಿನಿಮಾದ ಇನ್ಫ್ಲುಎನ್ಸರ್ ರಮೇಶ್ ಬಾಲ ಅವರಿಂದಲೂ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಅರ್ಜುನ್ ಅವರು ಒಂದೊಳ್ಳೆ ಚಿತ್ರವನ್ನು ನೀಡಿದ್ದಾರೆ ಎಂದಿದ್ದಾರೆ. ವಿಜಯ್ ದೇವರಕೊಂಡ ಅವರ ಪಿ.ಆರ್.ಒ ಆಗಿರುವ ಸುರೇಶ್ ಕೊಂಡ ತೆಲುಗುವಿನಲ್ಲಿಯೂ ಸಿನಿಮಾ ಮಾಡುವಂತೆ ಕೇಳಿಕೊಂಡಿದ್ದಾರೆ.

ಇಲ್ಲಿನ ಮಾರುಕಟ್ಟೆಗೆ ಈ ತರಹದ ಸಿನಿಮಾಗಳು ಬೇಕಿವೆ ಎಂದಿದ್ದಾರೆ. ಅಲ್ಲದೆ ಅಲ್ಲು ಅರ್ಜುನ್ ಒಡೆತನದ ಆಹಾ ಒಟಿಟಿ ಮೀಡಿಯಾದ ಪ್ರಣೀತಾ, ಈ ಸಿನಿಮಾ ನೋಡಿ ಸ್ವತಹ ನಿರ್ದೇಶಕರನ್ನೇ ಹೈದರಾಬಾದಿಗೆ ಆಹ್ವಾನ ನೀಡಿದ್ದಾರೆ. ಪಿಆರ್ಕೆ ಸಿನಿಮಾ ಸಂಸ್ಥೆಯು ವಜ್ರೇಶ್ವರಿ ಸಂಸ್ಥೆ ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯಲಿದೆ ಎಂದು ಹೇಳಿರುವ ಇವರಿಗೆ, ತೆಲುಗುವಿನ 2ಚಿತ್ರ ನಿರ್ಮಾಣ ಸಂಸ್ಥೆಗಳು ಸಿನಿಮಾ ಅವಕಾಶಗಳನ್ನು ನೀಡಿದೆಯಂತೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅರ್ಜುನ್ ಅವರು ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಈಗಲೇ ಎಲ್ಲವನ್ನು ನಾನು ರಿವಿಲ್ ಮಾಡುವುದಿಲ್ಲ. ಸದ್ಯಕ್ಕೆ ಪಿಆರ್ಕೆ ಸಂಸ್ಥೆಯ ವತಿಯಿಂದ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಅದೇ ಖುಷಿಯ ವಿಚಾರ ಎಂದು ಹೇಳಿದರು.

%d bloggers like this: